ಶಿಗ್ಗಾವಿ:ಎಲ್ಲ ಹಳ್ಳಿಗಳಿಗೆ ಡ್ರೋನ್ ಕೊಟ್ಟು, ಆ ಡ್ರೋನ್ ನಡೆಸಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಕೃಷಿ ಸಮ್ಮಾನ್ ನಿಧಿ ಯೋಜನೆ, ಆಯುಷ್ಮಾನ್ ಯೋಜನೆ ಮಾಡಲಾಗಿದೆ. ಜನತೆಗೆ ಹೊರೆಯಾಗದ ರೀತಿಯಲ್ಲಿ ಯೋಜನೆಗಳನ್ನು ಕೇಂದ್ರದ ಮೋದಿ ಸರಕಾರ ಮಾಡುತ್ತಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಗಂಗಣ್ಣ ಸಾತಣ್ಣನವರ, ಶಿವಪ್ರಸಾದ ಸುರಗೀಮಠ, ತಿಪ್ಪಣ್ಣ ಸಾತಣ್ಣನವರ, ನರಹರಿ ಕಟ್ಟಿ, ನಿವೃತ್ತ ಮಾಜಿ ಸೈನಿಕ ಪರಶುರಾಮ ದಿವಾನರ, ಡಾ. ಮಲ್ಲೇಶಪ್ಪ ಹರಿಜನ, ಕರೆಪ್ಪ ಕಟ್ಟಿಮನಿ, ರಮೇಶ ಸಾತಣ್ಣವರ, ವಿರುಪಾಕ್ಷಪ್ಪ ಪಟ್ಟೇದ, ಆನಂದ ಸುಬೇದಾರ, ರೇವಣಸಿದ್ದಪ್ಪ ಸೊರಟೂರ, ಹನುಮಂತಪ್ಪ ವಾಲ್ಮೀಕಿ, ಶಿವರಾಜ ಹುಲಸೋಗಿ, ಬಸವರಾಜ ಸೊರಟೂರ ಸೇರಿದಂತೆ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.