ರಾಮನಗರ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾಲ ಬದಲಾಗಿದ್ದು, ಇಲ್ಲಿ ಸಿದ್ಧಾಂತದ ಜ್ಞಾನಕ್ಕಿಂತ ಪ್ರಾಯೋಗಿಕ ಮತ್ತು ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೃತಕ ಬುದ್ದಿಮತ್ತೆ(ಎಐ) ವೃತ್ತಿ ಕೇಂದ್ರ ಪ್ರಾರಂಭಿಸುವ ಹಾಗೂ ಆಂಗ್ಲ ಭಾಷೆಯಲ್ಲಿ ಕೌಶಲ ರೂಢಿಸುವ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಇಂಗ್ಲಿಷ್ ದಕ್ಷತೆ ಬಹಳ ಮುಖ್ಯ ಎಂಬುದನ್ನು ಅರಿಯಬೇಕು. ಕೆಲ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಮಾತನಾಡಲು ಸ್ವಲ್ಪ ಹಿಂಜರಿಯುತ್ತಿದ್ದರು. ಗ್ರಾಮೀಣ ಹಿನ್ನೆಲೆಯ ಭಾವನೆಯೂ ಬೇಡ. ಶ್ರಮ ಮತ್ತು ಪ್ರಯತ್ನದಿಂದ ಯಾವುದನ್ನಾದರೂ ಕಲಿಯಬಹುದು. ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಕೌಶಲಗಳನ್ನು ರೂಢಿಸುವ ಕಾರ್ಯಕ್ರಮವನ್ನು ಅನುಸರಿಸಿ, ತರಬೇತಿ ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಈ ಕಾರ್ಯಕ್ರಮ ರಾಮನಗರದ ಸರ್ಕಾರಿ ಕಾಲೇಜಿಗೂ ವಿಸ್ತರಣೆಯಾಗಲಿದೆ ಎಂದರು.
ಸರ್ಕಾರಿ ಪದವಿ ಮತ್ತು ಇಂಜನಿಯರಿಂಗ್ ಕಾಲೇಜುಗಳಲ್ಲಿ ಕೈಗಾರಿಕಾ ಸಂಸ್ಥೆಗಳು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿವೆ. ಇದು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ. ಇವು ವಿದ್ಯಾರ್ಥಿಗಳಲ್ಲಿ ಮುಂದಿನ ಹಂತಕ್ಕೆ ಸಾಗಲು ಅಗತ್ಯ ಕೌಶಲ್ಯಗಳನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ವೈದ್ಯಕೀಯ ಕಾಲೇಜುಗಳಷ್ಟು ಬೇಡಿಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.ಎಐ ವೃತ್ತಿ ಕೇಂದ್ರಗಳ ಸ್ಥಾಪನೆ:
ಸೈಮನ್ಸ್ ಮತ್ತು ಸ್ಮೈಲ್ ಫೌಂಡೇಷನ್ ಸಂಸ್ಥೆಗಳು “ಟೆಕ್ ಫಾರ್ ಸೊಸೈಟಿ” ಎಂಬ ಕಾರ್ಯಕ್ರಮ ಜಾರಿಗೆ ತರುತ್ತಿವೆ. ಇದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ಹೊಸ ಅವಿಷ್ಕಾರ ನಿರ್ಮಿಸಲಿದೆ. ಕೆಲವು ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿವೆ. ಆಟೋಮೊಬೈಲ್, ಎಲೆಕ್ಟ್ರಿಕಲ್ ವಿಭಾಗದ ಸೀಟುಗಳನ್ನು ಕಡಿಮೆ ಮಾಡಲು ಸಲಹೆ ನೀಡಿವೆ. ಆದರೆ, ಸಿವಿಲ್ ಎಂಜಿನಿಯರಿಂಗ್ ಎಂದಿಗೂ ನಾಶವಾಗುವುದಿಲ್ಲ. ಸಿವಿಲ್ ಎಂಜಿನಿಯರಿಂಗ್ ಇಲ್ಲದೆ ನಾವು ಈ ಕಟ್ಟಡದಲ್ಲೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಟ್ಟಡಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ ಎಲ್ಲವೂ ಸಿವಿಲ್ ಇಂಜಿನಿಯರ್‌ನಿಂದಲೇ ಸಾಧ್ಯ ಎಂದು ಹೇಳಿದರು.
ಶಾಸಕ ಇಕ್ಬಾಲ್‌ಹುಸೇನ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮಂಜುಶ್ರೀ, ತಾಂತ್ರಿಕ ಶಿಕ್ಷಣದ ಹೆಚ್ಚುವರಿ ನಿರ್ದೇಶಕರಾದ ನಾಗಭೂಷಣ್, ಪ್ರಾಂಶುಪಾಲ ಜಿ.ಪುಂಡರೀಕ, ಮೈಕ್ರೋಸಾಫ್ಟ್ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಕಿಶೋಕ್ ಕುಮಾರ್, ಸ್ಯಾಪ್‌ನ ಪ್ರಾಡಕ್ಟ್ ಸಪೋರ್ಟ್ ವಿಭಾಗದ ವಾಸಿಂ ಉಲ್ಲಾ ಖಾನ್, ಎಡುನೆಟ್ ಉಪಾಧ್ಯಕ್ಷ ವೈಭವ್ ವತ್ಸಲ್, ಸೈಮೆನ್ಸ್ ಕಂಪನಿಯ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ ಟೆಕ್ನಾಲಜಿಯ ಉಪಾಧ್ಯಕ್ಷರಾದ ಸುಜಾತ ಮುಕುಂದನ್, ಸ್ಮೈಲ್ ಫೌಂಡೇಷನ್‌ನ ಪ್ರಮುಖರಾದ ಸೀಮಂತ್ ಕುಮಾರ್, ರೇಷ್ಮಾ ಗುಪ್ತ, ಟೊಯೋಟಾ ಸಂಸ್ಥೆಯ ಉಪಾಧ್ಯಕ್ಷ ರಮೇಶ್ ರಾವ್, ಜನರಲ್ ಮೇನೇಜರ್ ಕಿರಣ್ ಉಪಸ್ಥಿತರಿದ್ದರು.
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವವರಾಗದೆ, ಉದ್ಯೋಗ ನೀಡುವಂತರಾಗಿ ಬೆಳೆಯಬೇಕು. ಉದ್ಯೋಗ ಮಾರುಕಟ್ಟೆಯಲ್ಲಿ ಕೌಶಲ್ಯ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಕೋಟ್ ...........
-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವರು
4.ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವೇದಿಕೆ ಸಮಾರಂಭವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು.
5.ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಮಾಲೋಚನೆ ನಡೆಸಿದರು. ಶಾಸಕ ಇಕ್ಬಾಲ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.