ರಾಮನಗರ: ಪ್ರತಿಯೊಬ್ಬ ಮನುಷ್ಯ ಜಗಜ್ಯೋತಿ ಬಸವಣ್ಣ ಅವರ ತತ್ವ ಸಿದ್ಧಾಂತಗಳೊಂದಿಗೆ ಒಡನಾಡ ಇಟ್ಟುಕೊಂಡು ಪಾಲನೆ ಮಾಡಿದರೆ ಸಮಾಜದಲ್ಲಿ ಸುಧಾರಣೆ ತರಬಹುದು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಸಮಾಜದಲ್ಲಿ ಸಾಮರಸ್ಯ, ಸಮಾನತೆ, ಸಮಸ್ತತೆ ಇರಬೇಕು. ಎಲ್ಲರಲ್ಲು ದ್ವೇಷ ಭಾವನೆ ಕಡಿಮೆಯಾಗಿ ಮನುಷ್ಯರನ್ನಾಗಿ ಕಾಣಬೇಕು ಎಂಬುದು ಬಸವಣ್ಣನವರ ಪರಿಕಲ್ಪನೆಯಾಗಿದೆ. ಇದನ್ನೇ ನಮ್ಮ ಸಂವಿಧಾನವೂ ಹೇಳುತ್ತಿದೆ. ಆದ್ದರಿಂದ ಬಸವಣ್ಣರವರ ಕಾಲದ ಅನುಭವ ಮಂಟಪವೇ ಪ್ರಪಂಚದ ಮೊದಲ ಪಾರ್ಲಿಮೆಂಟ್ ಆಗಿದೆ ಎಂದು ಬಣ್ಣಿಸಿದರು.
ಜನರು ಮತ್ತು ಸಮಾಜ ಹೇಗಿರಬೇಕು, ಯಾವ ರೀತಿ ಮಾತನಾಡಬೇಕು, ಹೇಗೆ ಶಾಂತಿ ಕಾಪಾಡಿ ಕೊಳ್ಳಬೇಕೆಂದು ಬಸವಣ್ಣರವರು ಹೇಳಿದ್ದಾರೆ. ನಾವು ಯಾರ ಜೊತೆ ಒಡನಾಟ ಇಟ್ಟುಕೊಳ್ಳುತ್ತವೊ ಅದು ನಮ್ಮ ಬದುಕನ್ನು ರೂಪಿಸುತ್ತಾ ಹೋಗುತ್ತದೆ. ಮನುಷ್ಯ ಹಂಚಿ ತಿನ್ನಬೇಕೇ ಹೊರತು ಕಿತ್ತು ತಿನ್ನಬಾರದು. ಎಷ್ಟು ಓದಿದ್ದೇವೆ. ಪದವಿ ಪಡೆದಿದ್ದೇವೆ ಎಂಬುದು ಮುಖ್ಯವಲ್ಲ. ಎಷ್ಟು ಮನೆಗಳಲ್ಲಿ ನಂದಾ ದೀಪ ಬೆಳಗಿದೆ, ಎಷ್ಟು ಜನರ ಮುಖದಲ್ಲಿ ನಗು ತರಿಸಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.ಈಗ ಜನರು ಸಂತೋಷ, ತೃಪ್ತಿ ಇಲ್ಲ, ಸಮಾಜದಲ್ಲಿ ಸಾಮರಸ್ಯ ಇಲ್ಲ. ಇದಕ್ಕೆ ಕಾರಣ ಬೇರೆಯವರು ಸಂತೋಷವಾಗಿರುವುದರಿಂದ ನಾವುಗಳು ಸಂತೋಷವಾಗಿಲ್ಲ. ದೃಷ್ಟಿಯಿದ್ದು, ದೃಷ್ಟಿಕೋನ ಇಲ್ಲದಿದ್ದರೆ ಕುರುಡುತನಕ್ಕಿಂತ ಕೆಟ್ಟದ್ದು. ಮನುಷ್ಯನಿಗೆ ಹೃದಯ ಇದ್ದರೆ ಸಾಲದು ಹೃದಯವಂತಿಕೆ, ಮಾನವೀಯತೆ ಇರಬೇಕಾಗುತ್ತದೆ. ಜಾಣ್ಮೆ ಇದ್ದರೆ ಸಾಲದು ತಾಳ್ಮೆ ಇರಬೇಕು. ಕೌಶಲ್ಯ ಇದ್ದರೆ ಸಾಲದು ಕರುಣೆ ಇರಬೇಕಾಗುತ್ತದೆ. ಮನಸ್ಸು ವಿಚಲಿತವಾದಾಗ, ಸಂಬಂಧಗಳಲ್ಲಿ ಸಂಘರ್ಷ ಉಂಟಾದಾಗ ಶರಣರ ವಚನಗಳನ್ನು ನೆನೆದುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆರ ಎಂದು ಮಂಜುನಾಥ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೋರಿಸಿಕೊಟ್ಟ ಬಸವಣ್ಣರವರು ಧೀಮಂತ ದಾರ್ಶನಿಕ. ಅವರು ಪ್ರತಿಪಾದಿಸಿದ ತತ್ವಗಳು ಇಂದಿನ ಕಾಲಘಟ್ಟದಲ್ಲಿ ಪ್ರಸ್ತುತವಾಗಿವೆ. 800 ವರ್ಷಗಳ ಹಿಂದೆಯೇ ಸಮಾಜದ ಅಂಕು ಡೊಂಕುಗಳು, ಕಟ್ಟುಪಾಡುಗಳು ಹಾಗೂ ಕಂದಚಾರಗಳನ್ನು ತೊಡೆದು ಹಾಕಿ ಸಮಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟವರು ಎಂದು ಹೇಳಿದರು.
ನಾವೆಲ್ಲರು ಆತ್ಮವಲೋಕನ ಮಾಡಿಕೊಂಡು ಬಸವಣ್ಣರವರ ತತ್ವಾದರ್ಶಗಳನ್ನುಗಳನ್ನು ಪ್ರತಿಪಾದನೆ ಮಾಡಿ ಜೀವನದಲ್ಲಿ ಅನುಸರಿಸಿದರೆ, ನಿಜವಾಗಿಯೂ ಪ್ರತಿಯೊಬ್ಬ ಮಾನವ ಶ್ರೇಷ್ಠ ಜೀವನ ನಡೆಸಲು ಸಾಧ್ಯವಾಗಲಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ,
ವೀರಶೈವ ಮಠಗಳು ಸಮಾಜಕ್ಕೆ ಕಾರ್ಯಕ್ರಮಗಳನ್ನು ನೀಡುತ್ತಿವೆ. ಸಮಾಜಮುಖಿ ಮಠಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕಾಗಿದ್ದು, ಅದರ ಕಾರ್ಯ ಚಟುವಟಿಕೆ ಗಳಲ್ಲಿ ನಾವೂ ಭಾಗಿಯಾಗಬೇಕಿದೆ ಎಂದು ತಿಳಿಸಿದರು.
ಕೋಟ್ ...
- ಡಾ.ಸಿ.ಎನ್.ಮಂಜುನಾಥ್, ಸಂಸದರು.
ಕೋಟ್ ............ಬಸವಣ್ಣ ಪವಾಡ ಪುರುಷರಲ್ಲ, ಪರಿಸ್ಥಿತಿ ಯಿಂದ ರೂಪುಗೊಂಡವರು. ಸಮಾಜದಲ್ಲಿನ ಮೇಲು ಕೀಳು, ಗಂಡು ಹೆಣ್ಣು, ವರ್ಣ ದ್ವೇಷದಂತಹ ಧೋರಣೆಗಳ ವಿರುದ್ಧ ಕ್ರಾಂತಿ ಮಾಡಿದವರು. ಬಸವಣ್ಣ ಸಮಾಜ ಸುಧಾರಕ, ಮಾನವತ ವಾದಿ, ಧರ್ಮಕ್ಕೆ ಹೊಸ ಭಾಷ್ಯ ಬರೆದವರು. ಅವರ ತತ್ವಾದರ್ಶಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ, ಸಮಾಜದ ಪರಿವರ್ತನೆಯೂ ಸಾಧ್ಯವಿದೆ.
- ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕಿರಿಯ ಶ್ರೀಗಳು, ಶ್ರೀ ಸಿದ್ಧಗಂಗಾ ಮಠ, ತುಮಕೂರು.ಕೋಟ್ ...
ಎಲ್ಲರಲ್ಲೂ ಸಮಾನತೆ ಭಾವ ಮೂಡಬೇಕೆಂದು ಹೋರಾಟ ಮಾಡಿದ ಬಸವಣ್ಣ ಮಹಾನ್ ವ್ಯಕ್ತಿ. 12ನೇ ಶತಮಾನದಲ್ಲಿಯೇ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹೋರಾಡಿದವರು. ಚಾತುರ್ವಣದ ವಿರುದ್ಧ ಧ್ವನಿ ಎತ್ತಿದವರು. ಮನುಷ್ಯ ಅಜ್ಞಾನ ಮತ್ತು ದೌರ್ಜನ್ಯದಿಂದ ಹೊರ ಬರಲು ಅಕ್ಷರ ಜ್ಞಾನ ನೀಡಬೇಕು ಎಂದು ಪ್ರತಿಪಾದಿಸಿದವರು. ಬಸವ ತತ್ವದ ತಳಹದಿ ಮೇಲೆ ಸುಭದ್ರ, ಸಮಗ್ರ ಹಾಗೂ ಸುಭಿಕ್ಷವಾದ ಸಮಾಜ ಕಟ್ಟಲು ಸಾಧ್ಯವಿದೆ.- ಬಸವಗೀತಾ ತಾಯಿ, ಗುರು ಬಸವಮಠ, ನಾಗನೂರು.
ಬಾಕ್ಸ್ ...ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಸವ ಸಂಸ್ಕೃತಿ ಅಭಿಯಾನವನ್ನು ನಗರದ ಹೊರ ವಲಯದ ಅರ್ಚಕರಹಳ್ಳಿ ಬಳಿ ಬರ ಮಾಡಿಕೊಳ್ಳಲಾಯಿತು. ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಅಭಿಯಾನಕ್ಕೆ ಕೆಂಪೇಗೌಡ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಾನಪದ ಕಲಾತಂಡಗಳೊಂದಿಗೆ ಆರ್ ವಿಸಿಎಸ್ ಕಲ್ಯಾಣ ಮಂಟಪದವರೆಗೆ ಮೆರವಣಿಗೆಯಲ್ಲಿ ಸಾಗಿದ ಅಭಿಯಾನದಲ್ಲಿ ಸಹಸ್ರಾರು ಜನರು ಹೆಜ್ಜೆ ಹಾಕಿದರು.
26ಕೆಆರ್ ಎಂಎನ್ 1.ಜೆಪಿಜಿರಾಮನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಬಸವ ಜಯಂತಿ ಮತ್ತು ಬಸವ ಸಂಸ್ಕೃತಿ ಅಭಿಯಾನವನ್ನು ಶಿವ ಶರಣರು ಉದ್ಘಾಟಿಸಿದರು.
---------------------------