ನರೇಗಾದಿಂದ ಜನರ ಜೀವನ ಮಟ್ಟ ಸುಧಾರಣೆ

KannadaprabhaNewsNetwork |  
Published : Apr 12, 2025, 12:46 AM IST
11ಕೆಕೆಆರ್1:ಕೊಪ್ಪಳ ಜಿಲ್ಲೆಯ ತಾಲೂಕಿನ ಬಂಡಿ ಗ್ರಾ.ಪಂ ವ್ಯಾಪ್ತಿಯ ಬಸಾಪುರ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನ ಹತ್ತಿರದ ನಾಲಾ ಹೂಳೆತ್ತುವ ಕಾಮಗಾರಿಗೆ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಮಲ್ಲಪ್ಪ ವಣಗೇರಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಸರ್ಕಾರ ಹಳ್ಳಿ ಜನರ ಜೀವನ ಮಟ್ಟ ಸುಧಾರಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ನರೇಗಾದಡಿ ಕೆರೆ ಹೂಳೆತ್ತುವುದು, ನಾಲಾ ಸುಧಾರಣೆ, ಬದು ನಿರ್ಮಾಣ, ದನದದೊಡ್ಡಿ ಸೇರಿದಂತೆ ಅನೇಕ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅವಕಾಶ ಇದೆ.

ಕೊಪ್ಪಳ(ಯಲಬುರ್ಗಾ):

ಕೂಲಿ ಕಾರ್ಮಿಕರು ಗುಳೆ ಹೋಗದೆ ಸ್ಥಳೀಯವಾಗಿ ದೊರೆಯುವ ನರೇಗಾ ಕಾಮಗಾರಿ ಕೆಲಸ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಲ್ಲಪ್ಪ ವಣಗೇರಿ ಹೇಳಿದರು.

ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನ ಹತ್ತಿರದ ನಾಲಾ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಹಳ್ಳಿ ಜನರ ಜೀವನ ಮಟ್ಟ ಸುಧಾರಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ನರೇಗಾದಡಿ ಕೆರೆ ಹೂಳೆತ್ತುವುದು, ನಾಲಾ ಸುಧಾರಣೆ, ಬದು ನಿರ್ಮಾಣ, ದನದದೊಡ್ಡಿ ಸೇರಿದಂತೆ ಅನೇಕ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅವಕಾಶ ಇದೆ. ಅಭಿವೃದ್ಧಿ ಕೆಲಸಗಳಿಂದ ಅಂತರ್ಜಲಮಟ್ಟ ಸುಧಾರಣೆಯಾಗಲಿದೆ. ಕೂಲಿಕಾರರು ಕಾಮಗಾರಿ ಕೆಲಸ ನಿರ್ವಹಿಸುವ ಮೂಲಕ ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.ಗ್ರಾಪಂ ಸದಸ್ಯರಾದ ಶರಣಪ್ಪ ಮುಧೋಳ, ಶಶಿಕಲಾ ದಮ್ಮೂರು, ಪ್ರಮುಖರಾದ ಶೇಖಪ್ಪ ವಣಗೇರಿ, ಸುಬ್ಬನಗೌಡ ಪೊಲೀಸ್‌ಪಾಟೀಲ್, ಮಹ್ಮದ್‌ಸಾಬ್ ತಾಳಿಕೋಟಿ, ಪರಸಪ್ಪ ಹೊಸಗೌಡ್ರ, ಲಕ್ಷ್ಮಣ ಗುಡಸಲಮನಿ, ಕೆಂಪಹನುಮಂತಪ್ಪ ಹರಿಜನ್, ಬಸವರಾಜ ಹಾದಿಮನಿ, ಈರಪ್ಪ ಹೊಸಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು