ಕೊಪ್ಪ: 2022-23ನೇ ಸಾಲಿನ ಅಂತಿಮ ಬಿ.ಎ. ಪರೀಕ್ಷೆಯಲ್ಲಿ ಈ ಕಾಲೇಜಿನಲ್ಲಿ ಸ್ನಾತಕ ಪದವಿಯ ಕಲಾವಿಭಾಗದ ಅಂತಿಮ ಬಿ.ಎ. ನಲ್ಲಿ ಒಟ್ಟು 66 ವಿದ್ಯಾರ್ಥಿಗಳಲ್ಲಿ 17 ಡಿಸ್ಟಿಂಕ್ಷನ್, 12 ಪ್ರಥಮ ದರ್ಜೆ ಒಟ್ಟು ಶೇಕಡಾ 84.85ರಷ್ಟು ಫಲಿತಾಂಶ ಬಂದಿರುತ್ತದೆ. ವಿದ್ಯಾರ್ಥಿನಿಯರಾದ ಅಕ್ಷತಾ ಕೆ.ಎಂ. (ಎಚ್.ಇ.ಪಿ) 1200ಕ್ಕೆ 1024 ಅಂಕ ಗಳಿಸಿ (ಶೇ.85.5) ಪ್ರಥಮ ಸ್ಥಾನ ಗಳಿಸಿರುತ್ತಾರೆ. ಚೈತನ್ಯ ಎಚ್.ಎಂ. (ಎಚ್.ಇ.ಎಸ್) 1002(ಶೇ. 83.5) ಅಂಕಗಳಿಸಿ ದ್ವಿತೀಯ ಸ್ಥಾನ, ಅಕ್ಞತಾ ಕೆ.ಎಂ. (ಎಚ್.ಇ.ಎಸ್) 991(ಶೇ.೮೨.೫೮) ತೃತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಪ್ರಾಂಶುಪಾಲ ಡಾ.ಎಸ್.ಅನಂತ್, ಡಾ. ಎಸ್.ಅನಂತ್ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ.