ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಉತ್ತರ ಭಾರತಕ್ಕೆ ಬೆಣ್ಣೆ ನೀಡಿ, ದಕ್ಷಿಣ ಭಾರತದ ಬಿಜೆಪಿ ಸಂಸದರು ಹೆಚ್ಚಾಗಿರುವ ಕರ್ನಾಟಕಕ್ಕೆ ಸುಣ್ಣ, ಕೈಗೆ ಚಿಪ್ಪು ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿರಂತರವಾಗಿ ಸಾಕಷ್ಟು ಸಂಸದರು ಗೆಲ್ಲಿಸಿ, ಕೇಂದ್ರ ಸರ್ಕಾರದ ರಚನೆಗೆ ಸಹಕಾರ ನೀಡುತ್ತಿರುವ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದು ದುರಂತ. 20 ಜನ ಸಂಸದರನ್ನು ಆಯ್ಕೆ ಮಾಡಿ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕೊಟ್ಟರೆ, ಯಾರು ಸಹ ನೀರಾವರಿ ಯೋಜನೆ ಬಗ್ಗೆ ಚಕಾರ ಎತ್ತಲಿಲ್ಲ. ರಾಜ್ಯದಿಂದ ಆಯ್ಕೆಯಾಗಿ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕುಡಿಯುವ ನೀರಿನ ಯೋಜನೆಯನ್ನು ಈ ಬಾರಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯವನ್ನು ಹೇರಿ ತಂದೆ ತರುತ್ತೇನೆ ಎಂಬ ಭರವಸೆ ಹುಸಿಯಾಯಿತು ಎಂದು ಅವರು ಆರೋಪಿಸಿದರು.ಕುಮಾರಸ್ವಾಮಿ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರದಿಂದ 11000 ಕೋಟಿ ಬಿಡುಗಡೆ ಮಾಡುತ್ತದೆ. ಆದರೆ, ಕರ್ನಾಟಕದಲ್ಲಿರುವ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಕವಡೆ ಕಾಸು ನೀಡಲಿಲ್ಲ. ಇದರ ಬಗ್ಗೆ ನಮ್ಮ ಸಚಿವರು ಮಾತನಾಡಲಿಲ್ಲ. ಮಂಡ್ಯದಲ್ಲಿ ಗೆದ್ದು, ಮಂಡ್ಯ ಜನತೆಗೆ ಯಾವ ಸೌಲಭ್ಯನೂ ತಂದುಕೊಡಲಿಲ್ಲ ಎಂದು ಅವರು ದೂರಿದರು.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಬರಿಸುತ್ತಿರುವ ರಾಜ್ಯ ಕರ್ನಾಟಕ. ಆದರೆ, ಬಿಡುಗಡೆ ಆಗುತ್ತಿರುವ ಹಣ ಅತ್ಯ ಅಲ್ಪ. ಇದು ಎಷ್ಟರ ಮಟ್ಟಿಗೆ ಸರಿ. ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು 8 ಬಾರಿ ಬಜೆಟ್ ಅನ್ನು ಮಂಡಿಸಿದರೂ ರಾಜ್ಯದ ಬಾಯಾರಿಕೆ ತೀರಿಸುವಂತಹ ರೈತರ ಸಮಸ್ಯೆಯನ್ನು ಬಗೆಹರಿಸುವಂತಹ ಮಹದಾಯಿ ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಬೃಹತ್ ಕೈಗಾರಿಕೆಗಳು, ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸದೆ ಇರುವುದು ಕನ್ನಡ ನಾಡಿನ ವಿರೋಧಿ ನೀತಿ ಎತ್ತು ತೋರುತ್ತಿದೆ. ಇನ್ನಾದರೂ ಎಚ್ಚೆತ್ತು ಪಕ್ಷಾತೀತವಾಗಿ ಸಂಸದರು ಧ್ವನಿ ಎತ್ತುವ ಮೂಲಕ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಗುರುಬಸಪ್ಪ, ಗೋಪಿ, ಸಿದ್ದೇಗೌಡ, ಬಾಬು, ಸಿದ್ದಪ್ಪ, ಗೋವಿಂದರಾಜ್, ಸ್ವಾಮಿ, ಮನೋಹರ್, ಹರೀಶ್, ಮಾದಪ್ಪ, ಅರವಿಂದ, ಮದನ್, ಸ್ವಾಮಿ, ಚಿನ್ನಪ್ಪ, ಸುನಿಲ್, ಶಿವು ಮೊದಲಾದವರು ಇದ್ದರು.