- ಜನಶಿಕ್ಷಣ ಸಂಸ್ಥಾನದ ನಿರ್ದೇಶಕ ರಮೇಶ್ ವಿಷಾದ
ಜಪಾನ್ ನಲ್ಲಿ ಶೇ. 90 ರಷ್ಟು ಕೌಶಲಾಭಿವೃದ್ಧಿ ಹೊಂದಿರುವವರು ಇದ್ದಾರೆ, ಆದರೆ ಭಾರತದಲ್ಲಿ ಶೇ. 90 ರಷ್ಟು ಮಂದಿ ಕೌಶಲಾಭಿವೃದ್ಧಿಯಿಂದ ವಂಚಿತರಾಗಿದ್ದಾರೆ ಎಂದು ಜನಶಿಕ್ಷಣ ಸಂಸ್ಥಾನದ ನಿರ್ದೇಶಕ ರಮೇಶ್ ವಿಷಾದಿಸಿದರು.
ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ಶುಕ್ರವಾರ ಮೈಸೂರಿನ ಜೆ.ಎಸ್.ಎಸ್. ಜನ ಶಿಕ್ಷಣ ಸಂಸ್ಥೆ ಮತ್ತು ಭಾರತೀಯ ಕೌಶಲಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಅಭಿವೃದ್ಧಿ ಯೋಜನೆಯ ವತಿಯಿಂದ ವಿವೇಕಾನಂದರ 161 ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಮತ್ತು ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರವು ದೇಶದಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸುಮಾರು 40 ಕೋಟಿ ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಗುರಿ ಹೊಂದಲಾಗಿದೆ. ಈ ಹಿನ್ನೆಲೆ ದೇಶದಲ್ಲಿ 304 ಜನಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ, ರಾಜ್ಯದಲ್ಲೂ 12 ಸಂಸ್ಥೆಗಳಿದ್ದು, ಮೈಸೂರು ಮತ್ತು ಬೆಂಗಳೂರಿನ ಸಂಸ್ಥೆಗಳನ್ನು ಜೆ.ಎಸ್.ಎಸ್ ವಿದ್ಯಾಪೀಠವು ವಹಿಸಿಕೊಂಡಿದೆ ಎಂದು ತಿಳಿಸಿದರು.
ಜನಶಿಕ್ಷಣ ಯೋಜನೆಯ ಸೌಭಾಗ್ಯ, ಸಹಾಯಕ ಕಾರ್ಯಕ್ರಮಾಧಿಕಾರಿ ಸುರೇಶ್, ಹಾಲಿನ ಡೈರಿ ಅಧ್ಯಕ್ಷೆ ಅಮೃತ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ರಮೇಶ್, ಮಾಜಿ ಸದಸ್ಯೆ ಯಶೋಧಮ್ಮ , ಸದಸ್ಯ ಎಂ.ಎಸ್. ರವಿ, ಗಂಗಾಧರಗೌಡ, ನಾಗೇಂದ್ರ, ಎಂ.ಎಸ್. ನಾಗರಾಜು, ಜವರಯ್ಯ, ಸಣ್ಣಗಂಡಯ್ಯ, ಶಿವಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ, ಶಾಲಾ ಮುಖ್ಯ ಶಿಕ್ಷಕ ಚಂದ್ರು, ಶೀಲಾ, ಪ್ರೇಮ, ಸಣ್ಣಕೂಸಮ್ಮ, ತರಬೇತಿದಾರರಾದ ಲಕ್ಷ್ಮೀ ಇದ್ದರು.