- ಸಂಕ್ಲೀಪುರಲ್ಲಿ ಶಾರದಾ ಪೂರ್ವ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ- - - ಮಲೇಬೆನ್ನೂರು: ಪ್ರಸ್ತುತ ವಿಜ್ಞಾನ ಯುಗದಲ್ಲಿ ವಿದ್ಯೆ ಎಂಬುದು ಮಾರಾಟದ ವಸ್ತುವಾಗಿದೆ. ಅದನ್ನು ನಿಯಂತ್ರಿಸುವವರು ಯಾರು ಎಂಬ ಪ್ರಶ್ನೆ ಸಮಾಜವನ್ನು ಕಾಡುತ್ತಿದೆ ಎಂದು ಯರಗುಂಟೆ ಕರಿಬಸವೇಶ್ವರ ಮಠದ ಪರಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಕೈಗೆ ಮೊಬೈಲ್ ಫೋನ್ ಬಂದರೆ ಅವರಲ್ಲಿನ ಜ್ಞಾನವನ್ನು ಅಳಿಸುತ್ತದೆ, ಪುಸ್ತಕವನ್ನು ಓದಿದರೆ ಗೌರವ ತಂದುಕೊಡುತ್ತದೆ. ಹಾಗಾಗಿ ಪೋಷಕರು ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಲಿ ಎಂದು ಬಯಸದೇ ಮನೆಯಲ್ಲಿಯೇ ಸೂಕ್ತ ಸಂಸ್ಕಾರ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ತಾಪಂ ಮಾಜಿ ಸದಸ್ಯ ಮಹಂತೇಶಿ ಮಾತನಾಡಿ, ಕೃಷಿ ಕ್ಷೇತ್ರ ಯಂತ್ರಮಯವಾಗಿದೆ. ಅದಕ್ಕೆ ತಕ್ಕಂತೆ ಮಕ್ಕಳನ್ನು ಅಣಿಗೊಳಿಸಿ ಶಿಕ್ಷಣ ನೀಡಬೇಕಿದೆ ಎಂದರು. ವಕೀಲ ಮಲ್ಲಿಕಾರ್ಜುನ್ ಕಲಾಲ್ ಮಾತಾಡಿ, ಶಾಲೆ ನಡೆದು ಬಂದ ಮಾರ್ಗ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಯುವಜನಾಂಗ ದುಶ್ಚಟಗಳಿಗೆ ದಾಸರಾಗುತ್ತಿದೆ. ಪೋಷಕರು ಗಂಭೀರ ಚಿಂತನೆಯಲ್ಲಿ ತೊಡಗಿ, ಮಕ್ಕಳ ಗುಣದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಸೋಮಶೇಖರ್, ಅನುಷಾ, ಕಾಂತಮ್ಮ, ಚಂದ್ರಶೇಖರ್, ರಾಜಶೇಖರಯ್ಯ, ನಿಂಗಪ್ಪ, ಜಿ.ನಾಗರಾಜ್, ವೀರೇಶ್, ವಕೀಲ ಮಲ್ಲಿಕಾರ್ಜುನ್, ಕುಬೇರಪ್ಪ, ಕರಿಬಸಪ್ಪ, ಮಹಿಳಾ ಮುಖಂಡರಾದ ಸಾವಿತ್ರಮ್ಮ, ರುದ್ರಮ್ಮ, ಗೀತಾ, ಜ್ಯೋತಿ, ಕಲಾವಿದ ಬಸವರಾಜ್, ವಿಶ್ವನಾಥ್, ಮೈಲಾರಲಿಂಗೆಶ್ವರ ವಿದ್ಯಾಪೀಠದ ರೂವಾರಿ ಜಿಗಳಿ ಗದಿಗೆಪ್ಪ, ಮುಖ್ಯ ಶಿಕ್ಷಕಿ ಮಮತಾ, ಉಪಾಧ್ಯಾಯಿನಿಯರು ಇದ್ದರು. ನೂರಾರು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗ್ರಾಮಸ್ಥರು ಪಾಲ್ಗೊಂಡಿದ್ದರು.- - - -೩ಎಂಬಿಆರ್೨.ಜೆಪಿಜಿ: ಶಾಲೆ ವಾರ್ಷಿಕೋತ್ಸವದಲ್ಲಿ ಪರಮೇಶ್ವರ ಶ್ರೀ ಮಾತನಾಡಿದರು.