ಅಗ್ನಿ ಆಕಸ್ಮಿಕ ಸಂದರ್ಭದಲ್ಲಿ ಧೃತಿಗೆಡದೆ ಕಾರ್ಯಪ್ರವೃತ್ತರಾಗಬೇಕು: ದೇವೇಂದ್ರಪ್ಪ

KannadaprabhaNewsNetwork |  
Published : Oct 31, 2025, 01:45 AM IST
30ಬೀರೂರು01ಬೀರೂರು ಕೆ.ಎಲ್,ಕೆ,ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಗುರುವಾರ ಅಗ್ನಿಶಾಮಕ ಸಿಬ್ಬಂದಿಗಳಿಂದ ಅಗ್ನಿಅವಗಡಗಳಿಂದ ಸಂರಕ್ಷಣೆ ಮಾಹಿತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಶಿಕ್ಷಣಾಧಿಕಾರಿ ಬರಹನ್ನುದ್ದೀನ್ ಚೋಪ್ದಾರ್,ಇನ್ನರ್ವ್ಹೀಲ್ ಅಧ್ಯಕ್ಷೆ ಸವಿತಾರಮೇಶ್, ಕಾರ್ಯದರ್ಶಿ ಭಾಗ್ಯನಾರಾಯಣ್ ಇದ್ದರು. | Kannada Prabha

ಸಾರಾಂಶ

ಬೀರೂರುಬೆಂಕಿ ಇಲ್ಲದೆ ಬದುಕಿಲ್ಲ, ಆದರೆ ಬಳಕೆಯಲ್ಲಿ ವ್ಯತ್ಯಯ ಉಂಟಾದರೆ ಅದರಿಂದಾಗುವ ಅನಾಹುತ ಅಪಾರ ಎಂದು ತಾಲೂಕು ಸಹಾಯಕ ಅಗ್ನಿಶಾಮಕ ಅಧಿಕಾರಿ ದೇವೇಂದ್ರಪ್ಪ ತಿಳಿಸಿದರು.

ಕೆಎಲ್.ಕೆ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆ, ಇನ್ನರ್ ವ್ಹೀಲ್‌ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ಮಾಹಿತಿ

ಕನ್ನಡಪ್ರಭ ವಾರ್ತೆ, ಬೀರೂರುಬೆಂಕಿ ಇಲ್ಲದೆ ಬದುಕಿಲ್ಲ, ಆದರೆ ಬಳಕೆಯಲ್ಲಿ ವ್ಯತ್ಯಯ ಉಂಟಾದರೆ ಅದರಿಂದಾಗುವ ಅನಾಹುತ ಅಪಾರ ಎಂದು ತಾಲೂಕು ಸಹಾಯಕ ಅಗ್ನಿಶಾಮಕ ಅಧಿಕಾರಿ ದೇವೇಂದ್ರಪ್ಪ ತಿಳಿಸಿದರು.ಪಟ್ಟಣದ ಕೆ.ಎಲ್.ಕೆ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಶಿಕ್ಷಣ ಇಲಾಖೆ ಹಾಗೂ ಇನ್ನರ್ ವ್ಹೀಲ್ ನಿಂದ ಆಯೋಜಿಸಿದ್ದ ಆಗ್ನಿಅವಗಡಗಳಿಂದ ಸಂರಕ್ಷಣೆ ಜಾಗೃತಿ ಮಾಹಿತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು.ಹುಲ್ಲು ಕಟ್ಟಿಗೆ, ಎಣ್ಣೆ, ಅನಿಲ, ವಿದ್ಯುತ್ ಹಾಗೂ ಇನ್ನಿತರ ವಿಧಗಳಿಂದ ಬೆಂಕಿ ಸಂಭವಿಸಬಹುದು. ಎಲ್ಲಾ ಬಗೆ ಬೆಂಕಿ ಅನಾಹುತಗಳಿಗೆ ನೀರು ಹಾಯಿಸುವುದೇ ಪರಿಹಾರವಲ್ಲ ಬದಲಿಗೆ ವಿವಿಧ ರೀತಿ ನಿವಾರಕ ವಿಧಾನ ಗಳನ್ನು ಅನುಸರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಅದರ ನಿವಾರಣೆಗೆ ನೀರು, ಫೋಮ್ ಮಿಶ್ರಿತ ನೀರು ಹಾಗೂ ಇನ್ನಿತರ ಅಗ್ನಿ ಶಾಮಕಗಳನ್ನು ಬಳಸಬೇಕು. ಅಗ್ನಿ ಆಕಸ್ಮಿಕ ಸಂಭವಿಸಿದಾಗ ಧೃತಿಗೆಡದೆ ನಿವಾರಣೆಗೆ ಕೂಡಲೇ ಕರ್ಯಪ್ರವೃತ್ತರಾಗಬೇಕು ಎಂದರು.ಮಕ್ಕಳು ಪಠ್ಯ ಕಲಿಕೆ ಜೊತೆ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಉಂಟಾಗಬಹುದಾದ ಆಕಸ್ಮಿಕ ಅಪಘಾತಗಳಿಂದ ರಕ್ಷಣೆ ಪಡೆಯಬಹುದಾದ ಮಾಹಿತಿ ಹೊಂದಿ ಜೀವಸಂರಕ್ಷಣೆ ಕಾಳಜಿಗೆ ದನಿಯಾಗಿ ವಿವಿಧ ಪ್ರಾಕೃತಿಕ ಅವಗಡಗಳು, ಗ್ಯಾಸ್ ಸೋರಿಕೆಯಿಂದ ಆಗುವ ಅನಾಹುತಗಳು, ಆಮ್ಲಜನಕ ಕೊರತೆ ಯಿಂದ ಉಂಟಾಗುವ ಅಪಾಯ ಮತ್ತು ರಕ್ಷಣೆ, ಜಲ ವಿಪತ್ತಿನಿಂದ ರಕ್ಷಣೆ ಸೇರಿದಂತೆ ವಿಪತ್ತುಗಳು ಎದುರಾದಾಗ ಅನುಸರಿಸಬೇಕಾದ ರಕ್ಷಣಾ ಉಪಾಯಗಳನ್ನು ತಿಳಿಸಿದ ಅವರು ವಿವಿಧ ಹಂತ ಗಳಲ್ಲಿ ಬಳಸಬೇಕಾದ ಸಾಧನ, ಬಳಸಲಾಗುವ ಪದಾರ್ಥಗಳು ಮತ್ತು ಅವುಗಳಿಂದ ಆಗುವ ಪ್ರಯೋಜನಗಳ ಮಾಹಿತಿ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಚೋಪ್ದಾರ್ ಮಾತನಾಡಿ, ಮಕ್ಕಳು ಶಾಲಾ ಹಂತದಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮಗಳ ಮಾಹಿತಿ ಪಡೆಯುವ ಜೊತೆ ವಿವಿಧ ಇಲಾಖೆಗಳಲ್ಲಿ ದೊರಕುವ ಸೇವಾಸೌಲಭ್ಯಗಳ ಮಾಹಿತಿ ಪಡೆದು ತಮ್ಮ ದಾಖಲಾತಿಗಳಲ್ಲಿ ಅಳವಡಿಸಿಕೊಂಡು ಜಾಗೃತ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಕಾಳಜಿ ವಹಿಸಿ ಎಂದರು.ಇನ್ನರ್ ವ್ಹೀಲ್‌ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಂದಿನ ನಾಗಾಲೋಟದ ಬೆಳವಣಿಗೆ ವೇಗದಲ್ಲಿ ಸುರಕ್ಷತೆಗಳಿಗೆ ಆದ್ಯತೆ ನೀಡುವಲ್ಲಿ ತಾತ್ಸಾರ ತೋರುತ್ತಿರುವ ಪರಿಣಾಮ ಸಣ್ಣ ಆಕಸ್ಮಿಕ ಘಟನೆಗಳು ದೊಡ್ಡ ಅಪಾಯ ತಂದೊಡ್ಡುತ್ತಿವೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಅಗ್ನಿಶಾಮಕ ದಳ ಸಿಬ್ಬಂದಿ ಉತ್ತಮ ಮಾಹಿತಿ ನೀಡಿದ್ದು ಮಕ್ಕಳು ಸುರಕ್ಷತಾ ಜೀವನ ಕ್ರಮಗಳ ಮಾಹಿತಿ ಹೊಂದುವುದು ಇಂದಿನ ಅಗತ್ಯ ಎಂಬುದನ್ನು ತಿಳಿಸಿದರು.ಮುಖ್ಯ ಶಿಕ್ಷಕ ರಾಜಶೇಖರ್,ಇನ್ನರ್ ವ್ಹೀಲ್ ಕಾರ್ಯದರ್ಶಿ ಭಾಗ್ಯನಾರಾಯಣ್, ಸದಸ್ಯರಾದ ಅರುಣಾ ರವಿಕುಮಾರ್, ಸವಿತಾ ಜಗದೀಶ್, ಮಧು ಶಿವಸ್ವಾಮಿ, ಪ್ರತಿಮಾ ನಾಯಕ್, ಲತಾ ಮಂಜುನಾಥ್, ಅಗ್ನಿಶಾಮಕ ಸಿಬ್ಬಂದಿ ದಯಾನಂದ್, ಬಸವರಾಜ್, ಕೆಂಪರಾಜ್,ಅಖಿಲ್, ವಸಂತ್,ರಾಕೇಶ್ ಶಿಕ್ಷಕ ವೃಂದ ಇದ್ದರು.೩೦ಬೀರೂರು೦೧ಬೀರೂರು ಸರಕಾರಿ ಪ್ರೌಡಶಾಲೆಯಲ್ಲಿ ಗುರುವಾರ ಅಗ್ನಿಅವಗಡಗಳಿಂದ ಸಂರಕ್ಷಣೆ ಕುರಿತ ಪ್ರಾತ್ಯಕ್ಷಿಕೆ ನಡೆಯಿತು. ಶಿಕ್ಷಣಾಧಿಕಾರಿ ಬರಹನ್ನುದ್ದೀನ್ ಚೋಪ್ದಾರ್,ಇನ್ನರ್ ವ್ಹೀಲ್‌ ಅಧ್ಯಕ್ಷೆ ಸವಿತಾ ರಮೇಶ್, ಕಾರ್ಯದರ್ಶಿ ಭಾಗ್ಯ ನಾರಾಯಣ್ ಇದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ