ಜಿಲ್ಲೆಯಲ್ಲಿ ಮಳೆ ಕೊರತೆಯ ಮಧ್ಯೆ ವಿದ್ಯುತ್‌ಗೂ ಬರ!

KannadaprabhaNewsNetwork | Published : Oct 12, 2023 12:01 AM

ಸಾರಾಂಶ

ಲೋಡ್ ಶೆಡ್ಡಿಂಗ್‌ ಬೇಸಿಗೆಯಲ್ಲಿ ಕೇಳುವ ಶಬ್ದ. ಆದರೆ ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು. ಇದರ ಮಧ್ಯೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಅನಿಯಮಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ.ಹವಾಮಾನ ವೈಪರಿತ್ಯದಿಂದ ರಾಜ್ಯದ ಸೋಲಾರ್ ಮತ್ತು ಪವನ ವಿದ್ಯುತ್‌ಗಳಿಂದ ಅಗತ್ಯವಿರುವ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ, ರಾಜ್ಯದಲ್ಲಿ ವಿದ್ಯುತ್ ಅಭಾವದ ಹಿನ್ನೆಲೆ ಗದಗ ಜಿಲ್ಲೆಗೂ ಪ್ರತಿ ಗಂಟೆಗೊಮ್ಮೆ ಶೇ. 60 ರಷ್ಟು ವಿದ್ಯುತ್ ಹಂಚಿಕೆಯಲ್ಲಿ ಕೊರತೆಯಾಗುತ್ತಿದ್ದು, ಹೀಗಾಗಿ ಜಿಲ್ಲೆಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಂತೂ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿಯೇ ಲೋಡ್ ಶೆಡ್ಡಿಂಗ್ ಆರಂಭ ।

ಗ್ರಾಮೀಣ ಪ್ರದೇಶದ ಕುಡಿವ ನೀರಿಗೆ ತೀವ್ರ ಸಮಸ್ಯೆ.

ಬೇಕಾಗಿದ್ದು ಜಿಲ್ಲೆಗೆ ಬೇಕಾಗಿದ್ದು 190 ಮೆಗಾವ್ಯಾಟ್, ಸಿಗುತ್ತಿರುವುದು 85 ಮೆಗಾವ್ಯಾಟ್ ವಿದ್ಯುತ್

ಶಿವಕುಮಾರ ಕುಷ್ಟಗಿಕನ್ನಡಪ್ರಭ ವಾರ್ತೆ ಗದಗಲೋಡ್ ಶೆಡ್ಡಿಂಗ್‌ ಬೇಸಿಗೆಯಲ್ಲಿ ಕೇಳುವ ಶಬ್ದ. ಆದರೆ ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು. ಇದರ ಮಧ್ಯೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಅನಿಯಮಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ.

ಹವಾಮಾನ ವೈಪರಿತ್ಯದಿಂದ ರಾಜ್ಯದ ಸೋಲಾರ್ ಮತ್ತು ಪವನ ವಿದ್ಯುತ್‌ಗಳಿಂದ ಅಗತ್ಯವಿರುವ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ, ರಾಜ್ಯದಲ್ಲಿ ವಿದ್ಯುತ್ ಅಭಾವದ ಹಿನ್ನೆಲೆ ಗದಗ ಜಿಲ್ಲೆಗೂ ಪ್ರತಿ ಗಂಟೆಗೊಮ್ಮೆ ಶೇ. 60 ರಷ್ಟು ವಿದ್ಯುತ್ ಹಂಚಿಕೆಯಲ್ಲಿ ಕೊರತೆಯಾಗುತ್ತಿದ್ದು, ಹೀಗಾಗಿ ಜಿಲ್ಲೆಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಂತೂ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದಾರೆ.ಬೇಕಾಗಿದ್ದು 190 ಮೆಗಾವ್ಯಾಟ್ರಾಜ್ಯದಲ್ಲಿಯೇ ಅತೀ ಹೆಚ್ಚು ಪವನ ವಿದ್ಯುತ್ ಉತ್ಪಾದನಾ ಯಂತ್ರ ಹೊಂದಿರುವ ಗದಗ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಗಾಳಿ ಮತ್ತು ಸೂರ್ಯನ ಬೆಳಕಿನ ಶಕ್ತಿ ನಿಯಮಿತವಾಗಿ ಸಿಗದೇ ಇರುವ ಹಿನ್ನೆಲೆಯಲ್ಲಿ ಸೋಲಾರ್ ದಿಂದ ಸರಾಸರಿ 30 ಮೆಗಾವ್ಯಾಟ್, ಪವನ ವಿದ್ಯುತ್ ಮೂಲದಿಂದ 3 ರಿಂದ 5 ಮೆಗಾವ್ಯಾಟ್ ವಿದ್ಯುತ್ ಹಾಗೂ ಒನ್ ನೇಷನ್ ಒನ್ ಗ್ರಿಡ್ ಯೋಜನೆಯಡಿ ಜಿಲ್ಲೆಗಳಿಗೆ ವಿದ್ಯುತ್ ಹಂಚಿಕೆ ಸೇರಿ ಸದ್ಯಕ್ಕೆ ಗದಗ ಜಿಲ್ಲೆಗೆ ನಿತ್ಯ ಸರಾಸರಿ 70 ರಿಂದ 85 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತಿದೆ.

ಆದರೆ, ಜಿಲ್ಲೆಗೆ ಪ್ರತಿನಿತ್ಯ ಸರಾಸರಿ 190 ಮೆಗಾವ್ಯಾಟ್ ವಿದ್ಯುತ್ ಅಗತ್ಯತೆ ಇದ್ದು, ಶೇ.50 ಕ್ಕಿಂತಲೂ ಹೆಚ್ಚಿನ ವಿದ್ಯುತ್ ಕೊರತೆ ಎದುರಾಗಿದೆ.ರೈತರಿಗೆ ಪೂರೈಕೆ ಕಷ್ಟ: ಜಿಲ್ಲೆಗೆ ಈಗ ಹಂಚಿಕೆಯಾಗುತ್ತಿರುವ ವಿದ್ಯುತ್ ನಲ್ಲಿ ರೈತರ ಪಂಪಸೆಟ್ ಗಳಿಗೆ ನಿರಂತರವಾಗಿ ಥ್ರೀ ಫೇಸ್ ಪೂರೈಕೆ ಮಾಡಲು ಆಗದೇ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡದೇ ವಿದ್ಯುತ್ ಸ್ಥಗಿತ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೊಳವೆಬಾವಿ ಆಧಾರಿಸಿ ಬಿತ್ತನೆ ಮಾಡಿದ ಜಿಲ್ಲೆಯ ಸಾವಿರಾರು ಸಂಖ್ಯೆಯ ರೈತರು ಕಷ್ಟ ಎದುರಿಸುತ್ತಿದ್ದು, ಸದ್ಯ ದಿನಕ್ಕೆ 3 ರಿಂದ 4 ಗಂಟೆ ವರೆಗೂ ಥ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಇದರಿಂದ ರೈತರ ಬೆಳೆಗಳೆಲ್ಲ ಒಣಗುತ್ತಿವೆ. ಬಾಕ್ಸ್‌ವಿದ್ಯುತ್ ಸಂಪರ್ಕಗಳುಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗದಗ ತಾಲೂಕು ಸೇರಿ ಗದಗ ವಿಭಾಗದಲ್ಲಿ ಒಟ್ಟು 2.15 ಲಕ್ಷ ಹಾಗೂ ರೋಣ, ಗಜೇಂದ್ರಗಡ, ನರಗುಂದ ತಾಲೂಕು ಸೇರಿ ರೊಣ ವಿಭಾಗದಲ್ಲಿ 1.27 ಲಕ್ಷ ವಿದ್ಯುತ್ ಸಂಪರ್ಕಗಳಿವೆ. ಗದಗ ಮತ್ತು ರೋಣ ವಿಭಾಗ ಸೇರಿ ಸರಾಸರಿ 190 ಮೆಗಾವ್ಯಾಟ್ ಪ್ರತಿನಿತ್ಯ ಅಗತ್ಯವಿದೆ. ಆದರೆ, ವಿದ್ಯುತ್ ಕೊರತೆ ಹಿನ್ನೆಲೆ ಸೆ.30 ರಂದು ಗದಗ ವಿಭಾಗಕ್ಕೆ 35 ಮೆಗಾವ್ಯಾಟ್ ಮತ್ತು ರೊಣ ವಿಭಾಗದಲ್ಲಿ 10.9 ಮೆಗಾವ್ಯಾಟ್ ವಿದ್ಯುತ್ ಮಾತ್ರ ಪೂರೈಕೆ ಆಗಿದ್ದು, ಆ ಭಾಗದಲ್ಲಿ ರೈತರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಬಾಕ್ಸ್ ಸಾಮರ್ಥ್ಯದಷ್ಟು ಉತ್ಪಾದನೆ ಇಲ್ಲಜಿಲ್ಲೆಯಲ್ಲಿ ಸೌರ ಮೂಲದಿಂದ 220 ಮೆಗಾವ್ಯಾಟ್, ಪವನ ವಿದ್ಯುತ್ ಮೂಲದಿಂದ 713 ಹಾಗೂ ಮುಂಡರಗಿ ಸಕ್ಕರೆ ಕಾರ್ಖಾನೆಯಿಂದ 31 ಸೇರಿ ಪ್ರತಿನಿತ್ಯ 964 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗದಗ ಜಿಲ್ಲೆ ಹೊಂದಿದೆ, ಆದರೆ ಜಿಲ್ಲೆಯಾದ್ಯಂತ ಗಾಳಿ ಬೀಸುವ ಪ್ರಮಾಣವೂ ಕುಸಿತವಾಗಿರುವುದು, ಬಿಸಿಲಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಲ್ಲಿ ದಿನವೊಂದಕ್ಕೆ 170 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇ ಅತೀ ಹೆಚ್ಚಿನ ಉತ್ಪಾದನೆಯಾಗಿದೆ.ಬಾಕ್ಸ್‌ ವಿದ್ಯುತ್ ಸಂಪರ್ಕ ಗದಗ ವಿಭಾಗಪಂಪ್‌ಸೆಟ್‌ಗಳು: 28207 ಮನೆ: 49332

ವಾಣಿಜ್ಯ ಮಳಿಗೆ: 19451

ಸಣ್ಣ ಕೈಗಾರಿಕೆ: 3651

ಕುಡಿಯುವ ನೀರಿನ ಸಂಪರ್ಕ:5296 ಬೀದಿ ದೀಪ ಸಂಪರ್ಕ: 1673 ಬಾಕ್ಸ್‌ರೋಣ ವಿಭಾಗಪಂಪಸೆಟ್‌ಗಳು 12315 ಮನೆ: 31359 ವಾಣಿಜ್ಯ ಮಳಿಗೆ: 8341

ಸಣ್ಣ ಕೈಗಾರಿಕೆ: 2029

ಕುಡಿಯುವ ನೀರಿನ ಸಂಪರ್ಕ: 1076

ಬೀದಿ ದೀಪ ಸಂಪರ್ಕ: 642 ಕೋಟ್‌ಸರ್ಕಾರ ಕೂಡಲೇ ಬೇರೆ ಬೇರೆ ರಾಜ್ಯಗಳಿಂದ ಅಗತ್ಯ ವಿದ್ಯುತ್‌ ಖರೀದಿ ಮಾಡಿ ರೈತರಿಗೆ ಸಾಕಾಗುವಷ್ಟು ಥ್ರೀಫೇಸ್ ವಿದ್ಯುತ್‌ ನೀಡಬೇಕು, ಕೊಳವೆಬಾವಿ ಆಧರಿಸಿ ಸಾವಿರಾರು ಸಂಖ್ಯೆಯ ರೈತರು ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆದಿದ್ದು ಅವರಿಗೆ ತೀವ್ರ ಹಾನಿಯಾಗುತ್ತಿದೆ.

ಬಸವರಾಜ ಸಜ್ಜನರ. ಜಿಲ್ಲಾ ರೈತ ಮುಖಂಡಕೋಟ್

ಜಿಲ್ಲೆಗೆ ವಿದ್ಯುತ್ ಪೂರೈಕೆಯಲ್ಲಿ ಕೊರತೆಯಾಗಿದೆ, ಇದರಿಂದ ಅಲ್ಪ ಸಮಸ್ಯೆಯಾಗಿದೆ. ಉಡುಪಿಯ ಥರ್ಮಲ್ ಪ್ಲಾಂಟ್ ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಅಲ್ಲಿಂದಲೂ ಜಿಲ್ಲೆಗೆ ವಿದ್ಯುತ್ ಪಡೆಯುವ ಕುರಿತು ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳು ಗಮನ ಹರಿಸಿದ್ದಾರೆ. ವಿದ್ಯುತ್ ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಲಾಗುತ್ತಿದೆ. ರಾಜೇಶ ಕಲ್ಯಾಣ ಶೆಟ್ಟಿ. ಹೆಸ್ಕಾಂ ಇಇ ಗದಗಬಾಕ್ಸ್‌

ಕೊರತೆಯ ವಿವರ

ಅವಧಿ ಪ್ರಸ್ತುತ ವಿದ್ಯುತ್ ಪೂರೈಕೆ ವಿದ್ಯುತ್ ಅಗತ್ಯತೆ ಕೊರತೆ

ಬೆ 1 ರಿಂದ 6 ರವರೆಗೆ - 40 ಮೆಗಾವ್ಯಾಟ್ 60 ಮೆಗಾವ್ಯಾಟ್ 20 ಮೆಗಾವ್ಯಾಟ್

ಬೆ 6 ರಿಂದ 9 ರವರೆಗೆ 60 ಮೆಗಾವ್ಯಾಟ್ 100 ಮೆಗಾವ್ಯಾಟ್ 40 ಮೆಗಾವ್ಯಾಟ್

ಬೆ 9 ರಿಂದ ಮ. 2 ರವರೆಗೆ 135 ಮೆಗಾವ್ಯಾಟ್ 165 ಮೆಗಾವ್ಯಾಟ್ 25 ಮೆಗಾವ್ಯಾಟ್

Share this article