ಮಿರ್ಜಾನದಲ್ಲಿ ಅಕ್ಕ ಕೆಫೆ ಉದ್ಘಾಟನೆ

KannadaprabhaNewsNetwork |  
Published : Nov 23, 2026, 02:30 AM IST
ಫೋಟೋ :೨೨ಕೆಎಂಟಿ_ಎನ್‌ಒವಿ_ಕೆಪಿ೧ ಮಿರ್ಜಾನದಲ್ಲಿ ನೂತನವಾಗಿ ನಿರ್ಮಿತವಾದ ಅಕ್ಕ ಕೆಪೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ತಹಸೀಲ್ದಾರ ಕೃಷ್ಣ ಕಾಮಕರ, ಇಒ ರಾಜೇಂದ್ರ ಭಟ್, ಪ್ರದೀಪ ನಾಯಕ, ಕವಿತಾ ನಾಯಕ ಇದ್ದರು.  | Kannada Prabha

ಸಾರಾಂಶ

ತಾಪಂ ಇಒ ರಾಜೇಂದ್ರ ಭಟ್ಟ ಮಾತನಾಡಿ, ಕುಮಟಾ ತಾಲೂಕಿನ ಮೊದಲನೆ ಅಕ್ಕ ಕೆಫೆ ಇದಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದುಹೋಗುವ ಐತಿಹಾಸಿಕ ಕೋಟೆಯಿರುವ ಮಿರ್ಜಾನದಲ್ಲಿ ಉದ್ಘಾಟನೆಗೊಂಡಿರುವುದು ಅತ್ಯಂತ ಪ್ರಶಸ್ತವಾಗಿದೆ ಎಂದರು.

ಕುಮಟಾ: ಅಕ್ಕ ಕೆಫೆಗಳು ಯಶಸ್ವಿಯಾಗಬೇಕಾದರೆ ಊಟ- ತಿಂಡಿಗಳಲ್ಲಿ ರುಚಿಯೊಂದಿಗೆ ಗುಣಮಟ್ಟ ಹಾಗೂ ಶುಚಿತ್ವವೂ ಮುಖ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಅಕ್ಕ ಕೆಫೆಗೆ ಖ್ಯಾತಿ ಹಾಗೂ ಸಫಲತೆ ಗಳಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತಾಲೂಕಿನ ಮಿರ್ಜಾನದಲ್ಲಿ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪಂಚಾಯತ್‌ರಾಜ್ ಇಲಾಖೆ ಹಾಗೂ ಮಿರ್ಜಾನ ಮಹಾತ್ಮಾಗಾಂಧಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಿರ್ಮಿಸಲಾದ ಅಕ್ಕ ಕೆಫೆ ಉದ್ಘಾಟಿಸಿ ಅವರು ಮಾತನಾಡಿದರು.

ತಾಪಂ ಇಒ ರಾಜೇಂದ್ರ ಭಟ್ಟ ಮಾತನಾಡಿ, ಕುಮಟಾ ತಾಲೂಕಿನ ಮೊದಲನೆ ಅಕ್ಕ ಕೆಫೆ ಇದಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದುಹೋಗುವ ಐತಿಹಾಸಿಕ ಕೋಟೆಯಿರುವ ಮಿರ್ಜಾನದಲ್ಲಿ ಉದ್ಘಾಟನೆಗೊಂಡಿರುವುದು ಅತ್ಯಂತ ಪ್ರಶಸ್ತವಾಗಿದೆ. ಪ್ರವಾಸಿಗರಿಗೆ ಗುಣಮಟ್ಟದ ಆಹಾರದ ಜತೆಗೆ ಪ್ರೀತಿಯಿಂದ ಉಣಬಡಿಸಿ ವ್ಯವಹಾರ ವೃದ್ಧಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಮಾತನಾಡಿ, ಶುಚಿತ್ವ ಹಾಗೂ ರುಚಿ ಇದ್ದಲ್ಲಿ ಗ್ರಾಹಕರು ತಾನಾಗಿಯೇ ಆಕರ್ಷಿತರಾಗುತ್ತಾರೆ. ಈ ಮೂಲಕ ವ್ಯಾಪಾರವು ಚೆನ್ನಾಗಿ ಕುದುರುತ್ತದೆ. ಇದು ಕಡಿಮೆಯಾಗುತ್ತಲೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ. ಅದಕ್ಕೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆ ಸಫಲರಾಗಲು ನಿರಂತರ ಪ್ರಯತ್ನಶೀಲರಾಗಿ ಎಂದರು.

ನಿಕಟಪೂರ್ವ ಜಿಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ, ರಜಾ ದಿನಗಳಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಮಿರ್ಜಾನ ಕೋಟೆ ವೀಕ್ಷಿಸಲು ಜನ ಬರುವುದರಿಂದ ಹೆಚ್ಚಿನ ಪ್ರಚಾರ ನೀಡಿದರೆ ಪ್ರವಾಸಿಗರು ಇಲ್ಲಿಯೇ ಊಟ- ತಿಂಡಿ ಮಾಡುತ್ತಾರೆ ಎಂದರು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕವಿತಾ ಶ್ರೀಪಾದ ನಾಯ್ಕ ವೇದಿಕೆಯಲ್ಲಿದ್ದರು. ಮಾಲಾಶ್ರೀ ನಾಯ್ಕ, ಕಲ್ಪನಾ ನಾಯ್ಕ ಪ್ರಾರ್ಥಿಸಿದರು. ಪಿಡಿಒ ಅಮೃತಾ ಭಟ್ಟ ಸ್ವಾಗತಿಸಿದರು. ಗ್ರಾಮ ಲೆಕ್ಕಿಗ ವಿನಾಯಕ ನಾಯ್ಕ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ
ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ