ತಾಳಿಕೋಟೆಯಲ್ಲಿ ಬಿಎಲ್‌ಡಿ ಸೌಹಾರ್ದ ಶಾಖೆ ಉದ್ಘಾಟನೆ

KannadaprabhaNewsNetwork |  
Published : Mar 06, 2024, 02:17 AM IST
ತಾಳಿಕೋಟೆ 2 | Kannada Prabha

ಸಾರಾಂಶ

ತಾಳಿಕೋಟೆ: ವಿಜಯಪುರ ಲಿಂಗಾಯತ ಡೆವೆಲ್ಪಮೆಂಟ್ ಸೌಹಾರ್ದ ಸಹಕಾರಿ ಸಂಘ ಗ್ರಾಹಕರ ವಿಸ್ವಾಸಗಳಿಸುವದರೊಂದಿಗೆ ಮುನ್ನಡೆದ ಸಂಸ್ಥೆಯ 8ನೇ ಶಾಖೆಯನ್ನು ತಾಳಿಕೋಟೆ ಪಟ್ಟಣದಲ್ಲಿ ಉದ್ಘಾಟಿಸಿದ್ದು, ಸಂತಸತಂದಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ವಿಜಯಪುರ ಲಿಂಗಾಯತ ಡೆವೆಲ್ಪಮೆಂಟ್ ಸೌಹಾರ್ದ ಸಹಕಾರಿ ಸಂಘ ಗ್ರಾಹಕರ ವಿಸ್ವಾಸಗಳಿಸುವದರೊಂದಿಗೆ ಮುನ್ನಡೆದ ಸಂಸ್ಥೆಯ 8ನೇ ಶಾಖೆಯನ್ನು ತಾಳಿಕೋಟೆ ಪಟ್ಟಣದಲ್ಲಿ ಉದ್ಘಾಟಿಸಿದ್ದು, ಸಂತಸತಂದಿದೆ ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ಬಿಎಲ್‌ಡಿ ಸೌಹಾರ್ದ ಬ್ಯಾಂಕ್ 8ನೇ ಶಾಖಾ ಕಚೇರಿ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಲ್ಲಿ ಗ್ರಾಹಕರ ವಿಸ್ವಾಸ ಗಳಿಸುವುದರೊಂದಿಗೆ 225 ಕೋಟಿಗೂ ಅಧಿಕ ವಹಿವಾಟು ನಡೆಸಿದೆ. ವ್ಯವಹಾರ ಮಾಡುವವರಿಗೆ, ಸಣ್ಣಪುಟ್ಟ ಉಳಿತಾಯ ಮಾಡಿ ಠೇವಣಿ ಇಡಲು ಹೆಚ್ಚಿನ ಬಡ್ಡಿ ದರಕ್ಕೆ ಗ್ರಾಹಕರು ಅಪೇಕ್ಷೆ ಪಡುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಸಹಕಾರಿ ಬ್ಯಾಂಕ್ ಗಳಲ್ಲಿ ಬಡ್ಡಿ ಹೆಚ್ಚು ದೊರೆಯುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, 2013 ರಿಂದ 18ರ ಸಾಲಿನಲ್ಲಿ ನೀರಾವರಿ ಕ್ರಾಂತಿಯಾಯಿತು. ಆಗ ವಿಜಯಪುರ ಜಿಲ್ಲೆ ಸಾಕಷ್ಟು ವ್ಯಾಪಾರ ವೈಹಿವಾಟು ಹೆಚ್ಚಿ ಸಿದ್ದೇಶ್ವರ ಶ್ರೀಗಳು ನುಡಿದಂತೆ ವಿಜಯಪುರ ಜಿಲ್ಲೆಗೆ ಒಳ್ಳೆಯ ಹೆಸರು ಬಂದಿದೆ. ನೀರಾವರಿ ಸೌಲಭ್ಯವಾಗಿದ್ದರಿಂದ ದ್ರಾಕ್ಷಿ ಬೆಳೆ, ಸಕ್ಕರೆ ಖಾರ್ಕಾನೆಗಳಾಗಿವೆ. ಉತ್ತಮ ಬೆಳೆ ಬಂದಂತೆ ಕಪ್ಪಡ ಅಂಗಡಿ, ಕಿರಾಣಿ ಅಂಗಡಿ, ಹೊಟೆಲ್ ಎಲ್ಲ ವ್ಯಾಪಾರ ದ್ವಿಗುಣವಾಗಲಿದೆ ಎಂದರು. ಶಾಖಾ ಕಚೇರಿಯನ್ನು ಶ್ರೀಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ,ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಕನಮಡಿ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ರಾಯನಗೌಡ ತಾತರಡ್ಡಿ, ಜಿಪಂ ಮಾಜಿ ಸದಸ್ಯ ಶಿವಾನಂದ ದೇಸಾಯಿ, ಸಂತೋಷ ದೊಡಮನಿ, ಬಿ.ಎನ್.ಹಿಪ್ಪರಗಿ, ಬಿ.ಎ.ಶಿಂದೆ, ಎಂ.ಎಸ್.ಸರಶೆಟ್ಟಿ, ಚಿಂತಪ್ಪಗೌಡ ಯಾಳಗಿ, ವಿಶ್ವನಾಥ ಬಿದರಕುಂದಿ, ಕೆ.ಎಚ್.ಮೂಕೀಹಾಳ, ಬಿ.ಎಸ್.ಇಸಾಂಪೂರ, ನಾಗಪ್ಪ ಚಿನಗುಡಿ, ಅಕ್ಕಮಹಾದೇವಿ ಕಟ್ಟಿಮನಿ, ಎಂ.ಎಸ್.ನಾಗರಾಳ, ವಿರೇಶಗೌಡ ಅಸ್ಕಿ, ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...