ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ದೇಶದಲ್ಲಿ 7 ಕೋಟಿ ಜನರು ಇದ್ದು, ಇವರಲ್ಲಿ 4.5 ಕೋಟಿ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಪಡಿತರ ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಹಾರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವರು ಮಾತನಾಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ನೀಡಲು ಅನ್ನ ಭಾಗ್ಯ ಯೋಜನೆಯಡಿ ಇದ್ದು ಇದರಲ್ಲಿ 5 ಕೆ.ಜಿ.ಅಕ್ಕಿ ಹಾಗೂ ಉಳಿದ 5 ಕೆ ಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ ಎಂದರು.ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಸುಮಾರು 4.5 ಜನರಿಗೆ ಬಿಪಿಎಲ್, ಎಪಿಎಲ್ಕಾರ್ಡು ಕೊಟ್ಟು ಅಕ್ಕಿ ಕೊಡುವಂತಹ ಕಾರ್ಯಕ್ರಮ ಮಾಡಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣೆಗೂ ಮುನ್ನಾ 10 ಅಕ್ಕಿ ಕೊಡುತ್ತೇವೆಂದು ಘೋಷಣೆ ಮಾಡಿದ್ದರು. ಅಕ್ಕಿ ಸಕಾಲಕ್ಕೆ ಸಿಗದಿದ್ದ ಕಾರಣಕ್ಕೆ 5 ಕೆಜಿ ಅಕ್ಕಿ, 5 ಕೆಜಿಗೆ 170 ರು. ಕೊಡುತ್ತಿದ್ದೇವೆ. ಇದೊಂದು ಮಹತ್ತರವಾದ ದಾಸೋಹ ಕಾರ್ಯಕ್ರಮ, ಬಡವರ ನೋವನ್ನು, ಕಷ್ಟವನ್ನು ಅರಿತು ಯುಪಿಎ ಸರ್ಕಾರ ಸೋನಿಯಾ ಗಾಂಧಿ, ಮನಮೋಹನ್ಸಿಂಗ್ಅವರು ನ್ಯಾಷನಲ್ಫುಡ್ಸೆಕ್ಯುರಿಟಿ ಆಕ್ಟ್ಅನ್ನು ಮಾಡುವುದರ ಮೂಲಕ ಪ್ರತಿ ವ್ಯಕ್ತಿಗೆ ಈ ದವಸ, ಧಾನ್ಯ ಕೊಡಬೇಕೆಂದು ತೀರ್ಮಾನ ಮಾಡಿದರು ಎಂದು ಅವರು ತಿಳಿಸಿದರು.2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಈ ಆಕ್ಟ್ಜಾರಿಯಾದಾಗ ಮೊಟ್ಟಮೊದಲ ಮುಖ್ಯಮಂತ್ರಿ ಭಾರತ ದೇಶದಲ್ಲಿ ಈ ಕಾರ್ಯಕ್ರಮವನ್ನು ಜಾರಿ ಮಾಡಿ, 5 ಕೆಜಿ ಅಕ್ಕಿ ಕೊಡಲು ಪ್ರಾರಂಭ ಮಾಡಿದರು. ಅದೇ ರೀತಿ ಇವತ್ತು 10 ಕೆಜಿ ಅಕ್ಕಿ ಕೊಡಲು ಪ್ಲಾನ್ಮಾಡಿದ್ದೇವು, ಅಕ್ಕಿ ಬದಲು ತಡವಾಯಿತು, ಆದ್ದರಿಂದ ಡಿಬಿಟಿ ಮುಖಾಂತರ ಹಣ ಕೊಡುತ್ತಿದ್ದೇವೆ ಎಂದರು.
ಇದು ಬಹಳ ಉಪಯುಕ್ತವಾದ್ದದ್ದು, ಸಾಮಾನ್ಯ ಜನರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ಬಹಳ ಹೆಚ್ಚು ಅನುಕಾಲವಾಗುತ್ತಿದೆ ಎಂದು ಅವರು ತಿಳಿಸಿದರು.ಗಾಳಿ, ನೀರು ಆಹಾರ ಬಹಳ ಮುಖ್ಯ: ತಿಮ್ಮಯ್ಯ
ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ ಮಾತನಾಡಿ, ಮನುಷ್ಯ ಬದುಕಲು ಗಾಳಿ ನೀರು ಆಹಾರ ಬಹಳ ಮುಖ್ಯ. ಆಹಾರ ಪದಾರ್ಥಗಳನ್ನು ನಾವು ಬೆಳೆದು ಬೇರೆ ಬೇರೆ ಖಾದ್ಯಗಳನ್ನು ತಯಾರು ಮಾಡುತ್ತೇವೆ. ಆಹಾರದಲ್ಲಿ ಪ್ರೋಟಿನ್, ವಿಟಮಿನ್, ಕಾರ್ಬೊ ಹೈಡ್ರೇಟ್ ಇರುವ ಸಮತೋಲನ ಆಹಾರವನ್ನು ಸೇವಿಸಬೇಕು. ಆಗ ಮಾತ್ರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ ಹಾಗೂ ಕೆಲಸದ ಒತ್ತಡ. ನಾವು ಹಿತ ಮಿತವಾಗಿ ಆಹಾರವನ್ನು ಸೇವನೆ ಮಾಡಬೇಕು. ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಮೇಳ ಉಪಸಮಿತಿಯಿಂದ ಸಚಿವ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ಸದಸ್ಯ ಕೆ. ತಿಮ್ಮಯ್ಯ, ಮಾನಸ ಅವರನ್ನು ಸನ್ಮಾನಿಸಲಾಯಿತು.ಆಹಾರ ಮೇಳದಲ್ಲಿ 108 ಮಳಿಗೆ: ಕೆ.ಎಚ್.ಮುನಿಯಪ್ಪಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಅಂಗವಾಗಿ ನಡೆಯುವ ಆಹಾರ ಮೇಳದಲ್ಲಿ ಈ ಬಾರಿ 108 ಮಳಿಗೆಗಳನ್ನು ತೆರೆಯಲಾಗಿದ್ದು. ಮಳಿಗೆಗಳು ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತವೆ. 130 ಬಗೆಯ ವಿವಿಧ ತಿಂಡಿಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದರು.ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಭಾರತದಲ್ಲಿರುವ ಪ್ರತಿ ರಾಜ್ಯದ ವಿಶೇಷ ತಿಂಡಿ ತಿನಿಸುಗಳನ್ನು ಇಲ್ಲಿ ತಯಾರು ಮಾಡಲಾಗುತ್ತದೆ. ಎಲ್ಲ ತಿಂಡಿ ತಿನಿಸುಗಳನ್ನು ಸವಿಯಬಹುದು. ಜೊತೆಗೆ ಸಿರಿಧಾನ್ಯ ಕಾರ್ಯಕ್ರಮಗಳ ವಿಶೇಷವಾಗಿ ಇರುತ್ತದೆ. ಇವೆಲ್ಲ ಸದುಪಯೋಗ ಮಾಡಿಕೊಳ್ಳಬೇಕು. ಈ ದಸರಾ ಮಹೋತ್ಸವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಈ ಆಹಾರ ಮೇಳಕ್ಕೆ ಬಂದು ವೀಕ್ಷಿಸಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.