ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ಉಗ್ರಪ್ಪ

KannadaprabhaNewsNetwork |  
Published : Jan 13, 2024, 01:37 AM ISTUpdated : Jan 13, 2024, 03:55 PM IST
ಉಗ್ರಪ್ಪ | Kannada Prabha

ಸಾರಾಂಶ

ಬಿಜೆಪಿಗರಿಗೆ ರಾವಣನ ಪ್ರವೃತ್ತಿ ಇದೆ. ಅಧಿಕಾರ ಮೋಹದಿಂದಕ್ಕಾಗಿ ರಾಮಮಂದಿರ ಉದ್ಘಾಟಿಸುತ್ತಿದ್ದಾರೆಂದ ಉಗ್ರಪ್ಪ

ಬಳ್ಳಾರಿ: ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಸ್ವಾಮೀಜಿಗಳಲ್ಲಿ ಇಬ್ಬರು ಸ್ವಾಮೀಜಿಗಳು ಹಿಂದು ಧರ್ಮದ ಪ್ರಕಾರ ದೇವಸ್ಥಾನದ ಕಟ್ಟಡದ ಕಾರ್ಯ ಪೂರ್ಣಗೊಳ್ಳದೆ ಉದ್ಘಾಟಿಸಬಾರದು ಎಂದು ಹೇಳಿದ್ದಾರೆ. ಆದರೆ, ಬಿಜೆಪಿಗರು ಹಿಂದುತ್ವ, ರಾಮನ ಆದರ್ಶದ ವಿರುದ್ಧ ಹೋಗುತ್ತಿದ್ದಾರೆ. ಅಧಿಕಾರಕ್ಕಾಗಿ ರಾಮಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಪೂರ್ಣಗೊಳ್ಳದೆ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ. ಇದು ಬಿಜೆಪಿಗರಿಂದ ಆಗುತ್ತಿರುವ ಹಿಂದು ವಿರೋಧಿ ನೀತಿ. ಜಾತಿ, ಧರ್ಮದ ಹೆಸರಿನಲ್ಲಿ ವೈಭವೀಕರಣ ಸರಿಯಲ್ಲ. ಬಿಜೆಪಿಗರಿಗೆ ರಾವಣನ ಪ್ರವೃತ್ತಿ ಇದೆ. ಅಧಿಕಾರ ಮೋಹದಿಂದಕ್ಕಾಗಿ ರಾಮಮಂದಿರ ಉದ್ಘಾಟಿಸುತ್ತಿದ್ದಾರೆ ಎಂದು ದೂರಿದರು.

ಶ್ರೀರಾಮಚಂದ್ರ ಕೊಟ್ಟ ಮಾತನ್ನು ತಪ್ಪುತ್ತಿರಲಿಲ್ಲ. ಅದೇ ರೀತಿ ಕಾಂಗ್ರೆಸ್ ಸಹ ಮಾತು ತಪ್ಪದೆ ನಡೆದುಕೊಳ್ಳುವ ಪಕ್ಷವಾಗಿದೆ. ಚುನಾವಣೆ ಮುನ್ನ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ಜನಪರ ಆಡಳಿತ ನೀಡುತ್ತಿದ್ದೇವೆ. ಆದರೆ, ಬಿಜೆಪಿಯವರು ಬರೀ ಸುಳ್ಳುಗಳನ್ನು ಹೇಳಿಕೊಂಡೇ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬರ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಬರ ಅಧ್ಯಯನ ತಂಡ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಆದರೆ, ಈವರೆಗೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಬಡವರ ಪರ ಯಾವುದೇ ನಿಲುವುಗಳಿಲ್ಲ. ಬರೀ ಅಧಿಕಾರಕ್ಕಾಗಿ ಬಿಜೆಪಿ ಕಸರತ್ತು ನಡೆಸುತ್ತದೆಯೇ ವಿನಾ, ದೀನ, ದಲಿತರು, ಅಶಕ್ತರ ಪರವಾಗಿ ನಿಲ್ಲುವುದಿಲ್ಲ. ಕಾಂಗ್ರೆಸ್ ಮಾತ್ರ ಜನಮಖಿಯಾಗಿ ಯೋಚಿಸಿ, ಕೆಲಸ ಮಾಡುತ್ತದೆ ಎಂದರು.

ಪಕ್ಷದ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.

ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮ ಮಂದಿರವು ಜನವರಿ 22ರಂದು ಉದ್ಘಾಟನೆಯಾಗಲಿದ್ದು, ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲ್ಲಿದ್ದಾರೆ. 

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ