ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಚಂದಾಪೂರ ನಗರದ ಸರಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ₹೫೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ಹೊಸ ಪ್ರಯೋಗಾಲಯ ಕಟ್ಟಡವನ್ನು ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಯಲ್ಲಿಯೇ ಬಡ ರೋಗಿಗಳಿಗಾಗಿ ಡೆಂಘೀ, ಕ್ಷಯರೋಗ, ಗರ್ಭಿಣಿಯರ ರಕ್ತಮೂತ್ರ ಪರೀಕ್ಷೆ, ಕರುಳು, ಕಿಡ್ನಿ, ನೀರಿನ ಮಾದರಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸರಕಾರ ನಿಗದಿಪಡಿಸಿದ ಕಡಿಮೆ ದರದಲ್ಲಿ ಪರೀಕ್ಷೆಯನ್ನು ನಡೆಸಿ ವರದಿಯನ್ನು ನೀಡಲು ಸಹಾಯಕವಾಗಲಿದೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಮಕ್ಕಳ ತಜ್ಞ ಡಾ. ಸಂತೋಷ ಪಾಟೀಲ ಮಾತನಾಡಿ, ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು ವರ್ಗಾವಣೆ ಬಳಿಕ ಕಣ್ಣಿನ ಪೊರೆ, ಕಣ್ಣಿನ ಆಪರೇಶನ ಕಳೆದ ೧೫ ವರ್ಷಗಳಿಂದ ನಡೆಸಲಾಗುತ್ತಿಲ್ಲ ಕಣ್ಣಿನ ವೈದ್ಯರು ಇಲ್ಲಿಗೆ ವರ್ಗಾವಣೆ ಬಂದಿದ್ದರಿಂದ ಇದೀಗ ಬಡವರಿಗೆ ಕಣ್ಣಿನ ಆಪರೇಶನ ಮಾಡಲಾಗುತ್ತಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಮಹಮ್ಮದ ಗಫಾರ ಅಹೆಮದ, ತಾಲೂಕು ಆಸ್ಪತ್ರೆಯಲ್ಲಿ ಇರುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಡಾ. ದೀಪಾ ಜಾಧವ್, ಡಾ. ಜಾಕೀರ ಹುಸೇನ ಅನಸಾರಿ, ಡಾ. ತೇಜಸ್ಸು ಪಾಟೀಲ, ಬಿಜೆಪಿ ಮುಖಂಡರಾದ ವಿಜಯ ಚೇಂಗಟಿ, ರಾಜೂಪವಾರ, ಭೀಮಶೆಟ್ಟಿ ಮುರುಡಾ, ಗೋಪಾಲರಾವ ಕಟ್ಟಿಮನಿ, ರಾಮರೆಡ್ಡಿ ಪಾಟೀಲ ಚಿಮ್ಮನಚೋಡ, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.