ಕನ್ನಡಪ್ರಭ ವಾರ್ತೆ ಮಣಿಪಾಲ
‘ಜಾಗತಿಕವಾಗಿ ಯೋಚಿಸು, ಸ್ಥಳೀಯವಾಗಿ ಕಾರ್ಯಶೀಲನಾಗು’ ಎಂಬ ನಾನ್ನುಡಿ ಮಣಿಪಾಲ ರೋಟರಿ ಕಾರ್ಯವೈಖರಿಗೆ ತುಂಬಾ ಸರಿ ಹೊಂದುತ್ತದೆ. ಕಳೆದ ವರ್ಷ ಮಣಿಪಾಲ ರೋಟರಿ ಹಲವಾರು ಅದ್ವಿತೀಯ ಯೋಜನೆಗಳನ್ನು ಕೈಗೆತ್ತಿಕೊಂಡು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ ಎಂದು ರೋಟರಿ ಜಿಲ್ಲೆ ೩೧೮೨ ರ ಯೋಜಿತ ಜಿಲ್ಲಾ ಗವರ್ನರ್ ರೊ. ಕೆ. ಪಾಲಾಕ್ಷ ಹೇಳಿದರು.ಅವರು ಮಣಿಪಾಲ ರೋಟರಿಯ ೨೪-೨೫ ನೇ ಸಾಲಿನ ನೂತನ ಅದ್ಯಕ್ಷ ರೊ. ಸುಭಾಶ್ ಬಂಗೇರ ಮತ್ತು ಹೊಸ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿ ಮಾತನಾಡಿದರು.
ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ರೊ. ಸುಭಾಶ್ ಬಂಗೇರ ಮಾತನಾಡಿ, ಕಳೆದ ೬ ದಶಕಗಳಲ್ಲಿ ೬ ಜಿಲ್ಲಾ ಗವರ್ನರ್‌ಗಳು ಮಣಿಪಾಲ ರೋಟರಿಯಿಂದ ಆಯ್ಕೆಯಾಗಿದ್ದಾರೆ. ‘ಮ್ಯಾಜಿಕ್ ಆಫ್ ರೋಟರಿ’ ಈ ವರ್ಷದ ಧ್ಯೇಯ ವಾಕ್ಯ ಆಗಿದ್ದು ಅದಕ್ಕೆ ಪೂರಕವಾಗಿ ಆರೋಗ್ಯಕ್ಕಾಗಿ ಸ್ವಚ್ಛ ಪರಿಸರ. ಶಿಕ್ಷಣದೊಂದಿಗೆ ಕಾನೂನು ಅರಿವು - ನೆರವು, ಹಸಿರು ಬೆಳೆಸಿ, ಜಲ ಉಳಿಸಿ, ರಸ್ತೆ ಸುರಕ್ಷತೆಯ ಅರಿವು ಈ ವಿಷಯಗಳ ಬಗ್ಗೆ ವಿನೂತನ ಕಾರ್ಯಕ್ರಮಗಳನ್ನು ಮಣಿಪಾಲ ರೋಟರಿ ಹಮ್ಮಿಕೊಳ್ಳಲಿದೆ ಎಂದರು.ರೋಟರಿ ಮಣಿಪಾಲದ ೨೦೨೪-೨೫ ಸಾಲಿನ ನೂತನ ಪದಾಧಿಕಾರಿಗಳಾಗಿ ರೊ.ಶಶಿಕಲಾ ರಾಜವರ್ಮ, ಉಪಾಧ್ಯಕ್ಷ, ರೊ. ಫರಿದಾ ಉಪ್ಪಿನ್, ಕಾರ್ಯದರ್ಶಿ, ರೊ. ರತ್ನಾಕರ ಉದ್ಯಾವರ್, ಖಜಾಂಜಿ, ರೊ. ವೇದಾವತಿ ಜೊತೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿ ರೋಟರಿ ವಲಯ ಸೇನಾನಿ ರೊ. ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಉಪ ಗವರ್ನರ್ ಜಗನ್ನಾಥ್ ಕೋಟೆ ನಡೆಸಿಕೊಟ್ಟರು.ರೊ. ಶ್ರೀಪತಿ ಪಿ. ಅತಿಥಿಗಳನ್ನು ಸ್ವಾಗತಿಸಿದರು. ರೋ. ಗಿರಿಜಾ ಎ. ಅತಿಥಿಗಳನ್ನು ಸನ್ಮಾನಿಸಿದರು. ರೊ. ಫರಿದಾ ಉಪ್ಪಿನ್ ವಂದಿಸಿದರು. ರೊ.. ಶ್ರೀಶ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.