ಎಸ್‌ಡಿಸಿಬಿಎಂನಲ್ಲಿ ಎನ್‌ಎಸ್‌ಎಸ್ ಘಟಕದ ಉದ್ಘಾಟನೆ

KannadaprabhaNewsNetwork |  
Published : Aug 24, 2026, 03:00 AM IST
ಎನ್‌ಎಸ್‌ಎಸ್‌ ಘಟಕದ ಉದ್ಘಾಟನೆ ಹಾಗೂ ಯೂತ್‌ ಫಾರ್‌ ಸಿವಿಕ್‌ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸ್‌ನೆಸ್‌ ಮ್ಯಾನೇಜ್‌ಮೆಂಟ್‌ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆ ಹಾಗೂ ‘ಯೂತ್ ಫಾರ್ ಸಿವಿಕ್ ರೆಸ್ಪಾನ್ಸಿಬಿಲಿಟಿ’ ವಿಶೇಷ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸ್‌ನೆಸ್‌ ಮ್ಯಾನೇಜ್‌ಮೆಂಟ್‌ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನೆ ಹಾಗೂ ‘ಯೂತ್ ಫಾರ್ ಸಿವಿಕ್ ರೆಸ್ಪಾನ್ಸಿಬಿಲಿಟಿ’ ವಿಶೇಷ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮಂಗಳೂರಿನ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಎಸ್. ಭೂಮರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನತೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಬಾಳುವುದು ಇಂದಿನ ತುರ್ತು ಅಗತ್ಯವಾಗಿದೆ. ಎನ್‌ಎಸ್‌ಎಸ್‌ನಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸಲು ಅತ್ಯುತ್ತಮ ಮಾರ್ಗವಾಗಿವೆ. ಯುವಜನತೆ ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ. ಯುವಕರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ವ್ಯಸನ ಮತ್ತು ನಶೆಯ ದಾಸರಾದವರನ್ನು ಮತ್ತೆ ಮುಖ್ಯವಾಹಿನಿಗೆ ತಂದು ದುಶ್ಚಟಗಳಿಂದ ಮುಕ್ತರನ್ನಾಗಿಸುವ ಶಕ್ತಿ ಯುವಜನತೆಗಿದೆ ಎಂದರು.

ಶ್ರೀ ನವಾಕ್ಷರಿ ಬಾರ್ಕೂರಿನ ಎನ್.ಆರ್.ದಾಮೋದರ ಶರ್ಮ ಮಾತನಾಡಿ, ಪೌರ ಜವಾಬ್ದಾರಿ ಎಂಬುದು ಪ್ರತಿಯೊಬ್ಬ ಯುವಜನತೆಯ ಕರ್ತವ್ಯ. ಈ ನೆಲವನ್ನು ಬದಲಾಯಿಸುವ ಮತ್ತು ಸುಂದರ ಸಮಾಜವನ್ನು ಕಟ್ಟುವ ದೊಡ್ಡ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಭಾನುಪ್ರಕಾಶ್ ಬಿ.ಇ. ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಶೇಷಪ್ಪ ಕೆ.ಅಮೀನ್ ಕೊಡಿಯಾಲ್‌ಬೈಲ್‌, ಲಯನ್ಸ್ ಕ್ಲಬ್ ಅಧ್ಯಕ್ಷ ಸತ್ಯೇಂದ್ರ ಭಟ್ ಜೆ., ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ಎನ್‌ಎಸ್‌ಎಸ್ ಘಟಕದ ಹಳೆಯ ವಿದ್ಯಾರ್ಥಿ ಸಾಗರ್ ಅತ್ತಾವರ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿಗಳಾದ ಪ್ರೀತಿಕಾ ಧರ್ಮಪಾಲ್‌, ಸುದರ್ಶನ ಕೆ., ವಿದ್ಯಾರ್ಥಿ ಕಾರ್ಯದರ್ಶಿಗಳಾದ ವಾರುಣಿ ನಾಗರಾಜ್, ವೈಷ್ಣವ್ ಆರ್‌.ಕೋಟ್ಯಾನ್ ಮತ್ತಿತರರು ಇದ್ದರು.

ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರು ‘ಈ ಪಟ್ಟಣಕ್ಕೆ ಏನಾಯ್ತು?’ ಎಂಬ ನಾಟಕ ಪ್ರದರ್ಶಿಸಿದರು.

ಎನ್‌ಎಸ್‌ಎಸ್ ಸ್ವಯಂ ಸೇವಕಿ ಅಪೂರ್ವ ನಿರೂಪಿಸಿದರು. ಪ್ರತೀಕ್ಷಾ ಕಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ರಿಯಲ್‌ ಎಸ್ಟೇಟ್‌ ಮುಖ್ಯಮಂತ್ರಿ
ಮನಸೆಳೆದ ತಹಸೀಲ್ದಾರ ಕಚೇರಿ ಸಿಬ್ಬಂದಿ ಹಸಿರು ಪ್ರೇಮ