ಸಿದ್ದಾಪುರ: ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ೨೨ನೇ ಶಾಖೆಯು ಡಿ. ೧೮ರಂದು ಪಟ್ಟಣದ ಎಪಿಎಂಸಿ ರಸ್ತೆಯಲ್ಲಿರುವ ಸ್ವಂತ ಕಟ್ಟಡದಲ್ಲಿ ಆರಂಭವಾಯಿತು.
ಗ್ರಾಹಕ ಹಾಗೂ ಬ್ಯಾಂಕಿನ ನಡುವೆ ಸಿಬ್ಬಂದಿ ಸೇವೆ ವಿಶ್ವಾಸದ ಸೇತುವೆಯಾಗಿ ಕೆಲಸ ಮಾಡುತ್ತದೆ. ಬ್ಯಾಂಕಿನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಜನರ ವಿಶ್ವಾಸ ಕಳೆದುಕೊಳ್ಳುವ ಕೆಲಸ ಯಾವತ್ತೂ ಮಾಡಬಾರದು. ಜನರು ವಿಶ್ವಾಸ ಕಳೆದುಕೊಂಡರೆ ಮತ್ತೆ ಅತ್ತ ಕಡೆ ಕಾಲಿಡುವುದಿಲ್ಲ. ಶಿರಸಿ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಗ್ರಾಹಕರು ಸೇವಾ ಮನೋಭಾವದಿಂದ ಜನರ ವಿಶ್ವಾಸ ಗಳಿಸಿ ಹೆಚ್ಚಿನ ಶಾಖೆಗಳನ್ನು ತೆರೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜಯದೇವ ನಿಲೇಕಣಿಯವರ ಅಧ್ಯಕ್ಷತೆಯಲ್ಲಿ ಬ್ಯಾಂಕು ಕಳೆದ ೫ ವರ್ಷದಲ್ಲಿ ೬ ಹೊಸ ಶಾಖೆಗಳನ್ನು ರಾಜ್ಯದ ದೊಡ್ಡ ಪಟ್ಟಣದಲ್ಲಷ್ಟೇ ಅಲ್ಲದೆ ಚಿಕ್ಕ ಚಿಕ್ಕ ಊರಿನಲ್ಲೂ ತೆರೆದು ಅಲ್ಲಿಯ ಜನರಿಗೆ ಸೇವೆ ಕೊಡುವ ಉದ್ದೇಶ ಇರುವುದರಿಂದ ಬ್ಯಾಂಕು ಅಭಿವೃದ್ಧಿ ಹೊಂದುತ್ತಿದೆ. ಬ್ಯಾಂಕು ಇನ್ನೂ ಹೆಚ್ಚಿನ ಶಾಖೆಗಳನ್ನು ಮುಂದಿನ ದಿನಗಳಲ್ಲಿ ತೆರೆದು, ಶ್ರೀಮಠವಿರುವ ನೆರೆಯ ಗೋವಾದಲ್ಲಿಯೂ ನೂತನ ಶಾಖೆ ತೆರೆಯಲು ಯಶಸ್ಸು ಸಿಗಲಿ ಎಂದು ಆಶೀರ್ವದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ಈ ಸಾಲಿನಲ್ಲಿ ಮಂಗಳೂರು, ಗದಗ, ಧಾರವಾಡ ಹಾಗೂ ಸಿದ್ದಾಪುರದಲ್ಲಿ ಶಾಖೆಗಳನ್ನು ಪ್ರಾರಂಭಿಸಿದೆ. ಬ್ಯಾಂಕು ೪೭೦೦೦ಕ್ಕಿಂತ ಹೆಚ್ಚು ಸದಸ್ಯರನ್ನು, ₹೧,೩೦೦ ಕೋಟಿ ಠೇವು ಹಾಗೂ ₹೯೧೦ ಕೋಟಿ ಸಾಲ ನೀಡಿ, ಒಟ್ಟೂ ₹೨,೨೦೦ ಕೋಟಿ ವ್ಯವಹಾರದೊಂದಿಗೆ ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕಾಗಿ ಗುರುತಿಸಿಕೊಂಡಿದೆ ಎಂದು ಹೆಮ್ಮೆಯಿಂದ ಹೇಳಿದರು.