ಮುಂಬೈಯಲ್ಲಿ ಶ್ರೀ ಪುತ್ತಿಗೆ ಸಂಧ್ಯಾ-ಮಹಿಳಾ ವಿದ್ಯಾಪೀಠ ಉದ್ಘಾಟನೆ

KannadaprabhaNewsNetwork |  
Published : Sep 22, 2026, 02:45 AM IST
ಮುಂಬೈಯಲ್ಲಿ ಶ್ರೀ ಪುತ್ತಿಗೆ ಸಂಧ್ಯಾ - ಮಹಿಳಾ ವಿದ್ಯಾಪೀಗಳಿಗೆ ಪುತ್ತಿಗೆ ಶ್ರೀಗಳು ಚಾಲನೆನೀಡಿದರು | Kannada Prabha

ಸಾರಾಂಶ

ಮುಂಬೈ ಮಹಾನಗರದಲ್ಲಿ ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠಗಳನ್ನು ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಉಡುಪಿ; ಮುಂಬೈ ಮಹಾನಗರದಲ್ಲಿ ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ ಹಾಗೂ ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠಗಳನ್ನು ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.ಆಶೀರ್ವಚನ ನೀಡಿದ ಶ್ರೀಪಾದರು, ಸನಾತನ ಧರ್ಮವು ಎಂದಿಗೂ ನಶಿಸುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಹಿಂದೂ ಸಮಾಜದ ಸ್ತ್ರೀಯರಲ್ಲಿರುವ ಧರ್ಮಪ್ರಜ್ಞೆ ಹಾಗೂ ಅಚಲವಾದ ಧರ್ಮನಿಷ್ಠೆ. ಈ ಧರ್ಮಪ್ರಜ್ಞೆಯನ್ನು ಮತ್ತಷ್ಟು ಜಾಗೃತಗೊಳಿಸುವ ಉದ್ದೇಶದಿಂದ ಮಹಿಳಾ ವಿದ್ಯಾಪೀಠವನ್ನು ಆರಂಭಿಸಲಾಗಿದೆ. ವಿಪ್ರ ಪುರುಷರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದಿಂದ ಸಂಧ್ಯಾ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ವ್ಯವಸ್ಥಿತವಾಗಿ ನಡೆಯಲಿರುವ ಈ ವಿದ್ಯಾಪೀಠಗಳಲ್ಲಿ ಶಿಕ್ಷಣ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದರು.

ವಿದ್ವಾನ್ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ಉಪಸ್ಥಿತರಿದ್ದರು. ಮಾನ್ಯೂರು ಅನಂತಮೂರ್ತಿ ಅವರು ಭಾಗ್ಯನಗರದ ಶ್ರೀ ಗುರು ರಾಘವೇಂದ್ರ ಮಠದಿಂದ ತಂದ ರಾಯರ ಶೇಷವಸ್ತ್ರವನ್ನು ಶ್ರೀಪಾದರಿಗೆ ಸಮರ್ಪಿಸಿದರು.ಈಗಾಗಲೇ ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾ ನಗರಗಳಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠಗಳು ಕಾರ್ಯಾಚರಿಸುತ್ತಿವೆ. ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠದಲ್ಲಿ ಮಹಿಳೆಯರಿಗೆ ದಾಸರ ಪದಗಳು, ಹರಿಕಥಾಮೃತಸಾರ, ಸಂಪ್ರದಾಯದ ಹಾಡುಗಳು, ಭಜನೆ, ರಂಗವಲ್ಲಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ನೀಡಲಾಗುವುದು.ಸಂಧ್ಯಾ ವಿದ್ಯಾಪೀಠದಲ್ಲಿ ವಿಪ್ರ ಪುರುಷರಿಗೆ ವೇದಾಧ್ಯಯನ, ಸಂಧ್ಯಾವಂದನೆ ಕಾರ್ಯಾಗಾರ, ದೇವಪೂಜಾ ಪದ್ಧತಿ, ಶ್ರೀಮದ್ಭಗವದ್ಗೀತೆ, ದಾಸರ ಪದಗಳು, ಭಜನೆ ಮುಂತಾದ ವಿಷಯಗಳ ಕುರಿತು ಕ್ರಮಬದ್ಧವಾದ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರ್ನಾಡಿನಲ್ಲಿ ವಿಜೃಂಭಣೆಯ ಗಣೇಶ ವಿಸರ್ಜನಾ ಮಹೋತ್ಸವ
ಕುಶಾಲನಗರ ಆನೆಕಾಡು: ಸರಣಿ ಅಪಘಾತಕ್ಕೆ ಮೂವರು ಬಲಿ