ದಮ್ಮನಿಂಗಲದಲ್ಲಿ ಜೀರ್ಣೋದ್ಧಾರಗೊಂಡ ದೇಗುಲಗಳ ಉದ್ಘಾಟನೆ

KannadaprabhaNewsNetwork |  
Published : Oct 17, 2025, 01:00 AM IST
16ಎಚ್ಎಸ್ಎನ್7 :  ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿ ದಮ್ಮನಿಂಗಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಅಮೃತ ಲಿಂಗೇಶ್ವರ ಸ್ವಾಮಿ ಮತ್ತು ಕಾಲ ಭೈರವೇಶ್ವರರ ಪುನರ್ ಜೀರ್ಣೋದ್ಧಾರಗೊಂಡ ದೇವಾಲಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಭಾಗವಹಿಸಿದ್ದರು.  | Kannada Prabha

ಸಾರಾಂಶ

ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಅಮೃತ ಲಿಂಗೇಶ್ವರ ಸ್ವಾಮಿ ಮತ್ತು ಕಾಲ ಭೈರವೇಶ್ವರರ ಜೀರ್ಣೋದ್ಧಾರಗೊಂಡ ದೇವಾಲಯಗಳ ಲೋಕಾರ್ಪಣೆ, ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಅರ್ಧ ಎಕರೆ ಸ್ಥಳವನ್ನು ನೀಡಿರುವ ಗಂಗಾಧರ್‌ ಕುಟುಂಬದವರನ್ನು ಪ್ರಶಂಸಿದರು. ದೇವಾಲಯದ ಒಳ ಭಾಗದಲ್ಲಿ ಕಾಂಕ್ರಿಟ್ ಹಾಕಿಸಿ, ೧೦ ಲಕ್ಷ ರು. ಅನುದಾನದಲ್ಲಿ ಸಭಾಂಗಣ ನಿರ್ಮಿಸಲಾಗುವುದು ಎಂದರು. ಶಾಸಕರು ದಾನಿಗಳನ್ನು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಮ್ಮನಿಂಗಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಅಮೃತ ಲಿಂಗೇಶ್ವರ ಸ್ವಾಮಿ ಮತ್ತು ಕಾಲ ಭೈರವೇಶ್ವರರ ಜೀರ್ಣೋದ್ಧಾರಗೊಂಡ ದೇವಾಲಯಗಳ ಲೋಕಾರ್ಪಣೆ, ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.

ಮೂರು ದಿನ ಜರುಗಿದ ಧಾರ್ಮಿಕ ಮಹೋತ್ಸವದಲ್ಲಿ ಗಂಗೆಪೂಜೆಯೊಂದಿಗೆ ಕಳಸ ಹೊತ್ತ ಮಹಿಳೆಯರು, ವಿವಿಧ ಮಂಗಳವಾದ್ಯಗಳೊಂದಿಗೆ ಗ್ರಾಮ ದೇವತೆಗಳಾದ ವೀರಭದ್ರೇಶ್ವರ, ಲಕ್ಷ್ಮೀದೇವಿ, ಹೊಂಗೇಲಕ್ಷ್ಮಿ, ದೊಡ್ಡ ತರಳಮ್ಮ ಕನ್ನಂಬಾಡಿಯಮ್ಮ, ಹರಿ ಯಾಲದಮ್ಮ ಹೊನ್ನಾಂಬಿಕೆ, ದೇವರನ್ನು ಆಹ್ವಾನಿಸಿ ಪ್ರತಿಷ್ಠಾಪಿಸಲಾಯಿತು. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಪುನರ್ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ನೆರವೇರಿಸಿ, ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಅರ್ಧ ಎಕರೆ ಸ್ಥಳವನ್ನು ನೀಡಿರುವ ಗಂಗಾಧರ್‌ ಕುಟುಂಬದವರನ್ನು ಪ್ರಶಂಸಿದರು. ದೇವಾಲಯದ ಒಳ ಭಾಗದಲ್ಲಿ ಕಾಂಕ್ರಿಟ್ ಹಾಕಿಸಿ, ೧೦ ಲಕ್ಷ ರು. ಅನುದಾನದಲ್ಲಿ ಸಭಾಂಗಣ ನಿರ್ಮಿಸಲಾಗುವುದು ಎಂದರು. ಶಾಸಕರು ದಾನಿಗಳನ್ನು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ ಡಿ. ಜೆ. ದೇವಾಲಯದ ಉಸ್ತುವಾರಿ ದೇವರಾಜು ಮಾತನಾಡಿ, ದಾನಿಗಳನ್ನು ಸ್ಮರಿಸಿ ಅಭಿನಂದಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ ನವಗ್ರಹ ಮಂದಿರ ನಾಗಬನವನ್ನು ಉದ್ಘಾಟಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಚಿದಾನಂದ್, ಮುಖಂಡರಾದ ದೇವರಾಜೇಗೌಡ, ಕೃಷ್ಣೇಗೌಡ, ಎ.ಆರ್. ಶಿವರಾಜ್ ಮಾತನಾಡಿದರು.

೩ ದಿನಗಳ ಕಾಲ ಊಟೋಪಚಾರದ ವ್ಯವಸ್ಥೆ ಮತ್ತು ತಂಪು ಪಾನೀಯವನ್ನು ಗ್ರಾಮದ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಚಿಕ್ಕಬಿಳ್ತಿ ಪ್ರವೀಣ್, ಬಿಜೆಪಿ ಮುಖಂಡ ರವಿ ದಮ್ಮನಿಂಗಲ, ಬಸವಣ್ಣ ಶ್ರೀನಿವಾಸ, ಶೇಖರ್, ಅನಂತ್, ರುದ್ರೇಶಣ್ಣ, ಅಪ್ಪಣರ ರುದ್ರಣ್ಣ, ಈರಣ್ಣ, ಮನು, ಎನ್. ಆರ್‌, ವಾಸು, ಸಂದೀಪ್, ರಾಘವೇಂದ್ರ, ರಮೇಶ್, ನಂಜೇಗೌಡ, ಮಂಜಣ್ಣ ರಾಜೇಶ್ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!