ವಿಶ್ವಕರ್ಮ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ

KannadaprabhaNewsNetwork |  
Published : Dec 12, 2024, 12:31 AM IST
ಕಾರ್ಯಕ್ರಮದಲ್ಲಿ ವಿಶ್ವಕರ್ಮ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಗದಗ ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ವಿಶ್ವಕರ್ಮ ದಿನದರ್ಶಿಕೆ ಬಿಡುಗಡೆ, ವಿಶ್ವಕರ್ಮ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ, ಸಾಧಕರಿಗೆ, ಪದೋನ್ನತಿ ಹೊಂದಿದ ಸದಸ್ಯರಿಗೆ ಸನ್ಮಾನ ಹಾಗೂ ವಿಶ್ವಕರ್ಮ ಸಮಾಜದ ಹಿರಿಯ ಸಾಹಿತಿ ಭೀಮಸೇನ ಬಡಿಗೇರ ವಿರಚಿತ ಬೆಳ್ಳಿ ಬೆಳಕು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಗದಗ: ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವಕರ್ಮ ದಿನದರ್ಶಿಕೆ ಬಿಡುಗಡೆ, ವಿಶ್ವಕರ್ಮ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟನೆ, ಸಾಧಕರಿಗೆ, ಪದೋನ್ನತಿ ಹೊಂದಿದ ಸದಸ್ಯರಿಗೆ ಸನ್ಮಾನ ಹಾಗೂ ವಿಶ್ವಕರ್ಮ ಸಮಾಜದ ಹಿರಿಯ ಸಾಹಿತಿ ಭೀಮಸೇನ ಬಡಿಗೇರ ವಿರಚಿತ ಬೆಳ್ಳಿ ಬೆಳಕು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಹುನಗುಂದ ಆನೇಗುಂದಿ ಸಂಸ್ಥಾನ ಮಠದ ಪಂಚಾನನ ಗುರುಗಳಾದ ಶ್ರೀ ಗುರಪ್ಪಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜ ಬಾಂಧವರು ಸಂಘಟಿತರಾಗಬೇಕು ಎಂದರು.

ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಬಿಂಗಿ, ಧಾರವಾಡ ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಪಿ. ಈರಣ್ಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಬಡಿಗೇರ, ಬೆಳ್ಳಿ ಬೆಳಕು ಗ್ರಂಥಕರ್ತ ಭೀಮಸೇನ ಬಡಿಗೇರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿದರು.

ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಶಿಲ್ಪಿ ಕವಲೂರ, ವಿಶ್ವಕರ್ಮ ಶಿಕ್ಷಣಭೂಷಣ ಪ್ರಶಸ್ತಿ ಪುರಸ್ಕೃತ ಎ.ಎನ್. ಬಡಿಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಸುರೇಶ ಕೊಪ್ಪದ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ಶಿವಪ್ಪ ಕಮ್ಮಾರ, ರಾಜ್ಯಮಟ್ಟದ ಕರಕುಶಲ ವಸ್ತು ಪ್ರದರ್ಶನಕ್ಕೆ ಆಯ್ಕೆಯಾದ ಕುಮಾರ ಈ. ಬಡಿಗೇರ, ಶೇಖರಪ್ಪ ಕಮ್ಮಾರ, ಬಿ.ಎಂ. ಬಡಿಗೇರ, ಬಿ.ಎಂ. ಯರಕದ ಮುಂತಾದವರನ್ನು ಸನ್ಮಾನಿಸಲಾಯಿತು.

ವಿಶ್ವಕರ್ಮ ಸಮಾಜದ ಮುಖಂಡರಾದ ಮುತ್ತಣ್ಣ ಬಡಿಗೇರ, ಕಾಳೇಶ ಬಡಿಗೇರ, ಮೌನೇಶ ಬಡಿಗೇರ, ನಿಜಗುಣಿ ಶಹಾಪೂರ, ಐ.ಜಿ. ಬಡಿಗೇರ, ರಾಘು ಕಮ್ಮಾರ, ಈರಣ್ಣ ಎಂ. ಬಡಿಗೇರ ಇದ್ದರು.

ಸುಮಂಗಲಾ ಪತ್ತಾರ ಪ್ರಾರ್ಥಿಸಿದರು. ಮೌನೇಶ ಸಿ. ಬಡಿಗೇರ (ನರೇಗಲ್ಲ) ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಯ. ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌