ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ರೈತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಹೇಮಾವತಿ ನೀರು ಯಾರೊಬ್ಬರ ಸ್ವಂತ ಆಸ್ತಿಯಲ್ಲ. ಹಾಸನ ಭಾಗದಿಂದ ಹರಿದು ಬರುವ ನೀರಿನಲ್ಲಿ ಮಾಗಡಿ ತಾಲೂಕಿಗೆ ಸರ್ಕಾರದ ವತಿಯಿಂದ ನಿಗದಿಪಡಿಸಿರುವ ಪಾಲನ್ನು ಕೇಳುತ್ತಿದ್ದೇವೆ. ನಮ್ಮ ತಾಲೂಕಿನ ರೈತರು ಕೇಳುತ್ತಿರುವುದು ಕೇವಲ ಮುಕ್ಕಾಲು ಟಿಎಂಸಿ ನೀರು ಮಾತ್ರ. ಯಾರ ಮನೆಯ ಬಾಗಿಲಿಗೂ ಹೋಗಿ ನೀರು ಕೇಳುತ್ತಿಲ್ಲ. ಸರ್ಕಾರದ ನಿಯಮದಂತೆ ಮಾಗಡಿಗೆ ಬರಬೇಕಾದ ನೀರನ್ನು ಹರಿಸುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಲೋಕೇಶ್ ತಿಳಿಸಿದರು.
ಕುಣಿಗಲ್ ಭಾಗದ ಕೆಲ ಮುಖಂಡರು ಮಾಗಡಿಗೆ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ರೈತರ ನಡುವೆ ಗೊಂದಲ ಸೃಷ್ಟಿಸುವುದು ಸರಿಯಲ್ಲ. ನೀವು ಕೂಡ ರೈತರ ಮಕ್ಕಳೇ ಆಗಿದ್ದು, ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ರಾಜಕೀಯ ಕಾರಣಗಳಿಗಾಗಿ ರೈತರನ್ನು ಎತ್ತಿಕಟ್ಟಿ ಮತ್ತೊಂದು ತಾಲೂಕಿನ ರೈತರಿಗೆ ಅನ್ಯಾಯ ಮಾಡುವುದು ಅವಿವೇಕದ ಕೆಲಸ ಎಂದು ಲೋಕೇಶ್ ಕಿಡಿಕಾರಿದರು.ಈ ಹಿಂದೆ ಮಂಡ್ಯ ಭಾಗದಲ್ಲಿ ಕಾವೇರಿ ನೀರು ಬಿಡುವ ವಿಚಾರದಲ್ಲಿ ವಿರೋಧ ವ್ಯಕ್ತವಾದಾಗಲೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗಿದೆ. ನೀರು ಯಾರೊಬ್ಬರ ಸ್ವಂತದ್ದಲ್ಲ. ಕುಡಿಯುವ ನೀರು ಮತ್ತು ರೈತರ ಹಿತದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು. ಮಾಗಡಿ ತಾಲೂಕಿನ ಜನರ ನೀರಿನ ಹಕ್ಕಿನ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಲೋಕೇಶ್ ಒತ್ತಾಯಿಸಿದರು.
ರೈತ ಮುಖಂಡ ಬೈರೇಗೌಡ ಮಾತನಾಡಿ, ಮಾಗಡಿ ತಾಲೂಕಿಗೆ ಮುಕ್ಕಾಲು ಟಿಎಂಸಿ ನೀರು ಹಂಚಿಕೆಯಾಗಿದೆ. ಇದನ್ನು ಪಡೆಯಲು ಕಾಮಗಾರಿ ಆರಂಭಿಸಿರುವ ಸಂದರ್ಭದಲ್ಲಿ ಜಗದೀಶ್ ಅವರು ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ. ತೆರೆದ ಕಾಲುವೆಯಲ್ಲಿ ನೀರು ಪೋಲಾಗಬಾರದು ಮತ್ತು ದುರ್ಬಳಕೆಯಾಗಬಾರದು ಎಂಬ ಉದ್ದೇಶದಿಂದ ನೇರವಾಗಿ ಕೆರೆಗಳಿಗೆ ನೀರು ತುಂಬಿಸಲು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿನ ಯೋಜನೆಗೆ ಯಾರೂ ಅಡ್ಡಿಪಡಿಸಬಾರದು. ಕುಣಿಗಲ್ ಮತ್ತು ಮಾಗಡಿ ತಾಲೂಕಿನ ರೈತರು ಅಣ್ಣ ತಮ್ಮಂದಿರಂತಿದ್ದು, ಕುಣಿಗಲ್ ರೈತರಿಂದ ಯಾವುದೇ ವಿರೋಧವಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.
ರೈತರಾದ ಜುಟ್ಟನಹಳ್ಳಿ ದಿನೇಶ್, ಬುಡನ್‌ಸಾಬ್, ನಾರಾಯಣಪ್ಪ, ವೆಂಕಟೇಶ್, ಚಿಕ್ಕಣ್ಣ, ಬೊಮ್ಮಲಿಂಗಯ್ಯ, ಮಂಜುನಾಥ್, ಶೇಖರ್, ಶಶಿಧರ್, ಲಿಂಗರಾಜು ಜೆ.ಎಸ್., ದೊಡ್ಡಯ್ಯ, ಶಿವಣ್ಣಗೌಡ್ರು, ಯೋಗೇಶ್, ಗೌರಮ್ಮ ಮತ್ತಿತರರು ಭಾಗವಹಿಸಿದ್ದರು.