ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸಂಘದ ಆಡಳಿತ ಹಾಗೂ ಉತ್ಪಾದಕರ ಸ್ನೇಹಪೂರ್ವ ಸಮನ್ವಯತೆ ಸಂಘ ಅತಿ ಹೆಚ್ಚು ಲಾಭಾಂಶ ಪಡೆಯಲು ಸಾಧ್ಯವಾಗಿದೆ. ಪ್ರತಿ ಸದಸ್ಯರು ೫ ಲಕ್ಷ ಬೋನಸ್ ಪಡೆಯುವಷ್ಟು ಸಂಘ ಆರ್ಥಿಕ ಭದ್ರತೆಯನ್ನು ಹೊಂದಿದೆ. ಸಂಘ ಮತ್ತು ಒಕ್ಕೂಟ ಎಷ್ಟೇ ಲಾಭಗಳಿಸಿದರು ಅದು ರೈತರಿಗೆ ಸೇರುತ್ತದೆ ಎಂದರು.
ಬುಕ್ಕಾಪಟ್ಟಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ. ಶಿವಕುಮಾರ್ ಮಾತನಾಡಿ, ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಹಾಗೂ ಹಾಲು ಉತ್ಪಾದಕರ ಪರಸ್ಪರ ಸಹಕಾರ, ಜನ ಸ್ನೇಹಿ ಆಡಳಿತದಿಂದ ಸಂಘ ಮತ್ತಷ್ಟು ಯಶಸ್ವಿ ಕಾಣಲಿದೆ. ನಿಷ್ಠೆ, ಪ್ರಾಮಾಣಿಕತೆ, ಶ್ರಮದಿಂದ ಹೈನುಗಾರಿಕೆ ಮಾಡಿದರೆ ಹೆಚ್ಚು ಲಾಭ ನಿಮ್ಮದಾಗಲಿದೆ ಎಂದರು.ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಬಿ.ಗಿರೀಶ್, ಉಮೇಶ್, ಬಿ.ಕೆ. ಮಂಜುನಾಥ್, ವಿಶ್ವನಾಥ್, ಜೆ ವಿಜಯ್ ಲಿಂಗಪ್ಪ ,ರಹಮತ್ ಉಲ್ಲಾ ಬೇಗ್, ದ್ಯಾಮಣ್ಣ, ದಯಾನಂದ.ಬಿ.ಎಂ, ಬಿ.ಆರ್. ರಾಜಣ್ಣ, ಶಿವಣ್ಣ, ನೀಲಕಂಠಪ್ಪ, ನಾಗರತ್ನಮ್ಮ, ತೇಜಸ್ವಿನಿ ಇತರರಿದ್ದರು.