ಕನ್ನಡಪ್ರಭ ವಾರ್ತೆ ಕಾರವಾರ
ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಮಾತ್ರ ವಿಶೇಷ ಜಾಗೃತಿ ಕಾರ್ಯಕ್ರಮ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಕಾರ್ಯಕ್ರಮ ದೇಶದಾದ್ಯಂತ ನಡೆಯಲಿದೆ.ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ಸೂಚನೆಯಂತೆ ನ. 7 ರಿಂದ 9 ವರೆಗೆ ಅಮೃತ್ 2.0 ಕಾರ್ಯಕ್ರಮದಡಿ ಆಯ್ದ ನಗರಸ್ಥಳೀಯ ಸಂಸ್ಥೆಗಳ ಡೇ-ನಲ್ಮ್ ಯೋಜನೆಯ ಸ್ವ-ಸಹಾಯ ಸಂಘದ ಮಹಿಳೆಯರನ್ನು ಗುರುತಿಸಿ ಮಹಿಳೆಯರಿಗಾಗಿ ನೀರು,ನೀರಿಗಾಗಿ ಮಹಿಳೆಯರು- ಜಲ ದೀಪಾವಳಿ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಅಮೃತ್ ಅಭಿಯಾನದಡಿ ಸಂಬಂಧಪಟ್ಟ ನಗರಸ್ಥಳೀಯ ಸಂಸ್ಥೆಗಳಲ್ಲಿ ನಿರ್ಮಿಸಲಾದ Water Treatment Plants (WTPS) ಗಳಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮಹಿಳಾ ಸ್ವ-ಸಹಾಯ ಗುಂಪುಗಳು ಭೇಟಿ ನೀಡಿ Water Treatment Plants ಗಳ ಮೂಲಕ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿವ ನೀರು ಪೂರೈಕೆಯ ಪ್ರಕ್ರಿಯೆ, ನಾಗರಿಕರು ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿಸುವುದರ ಜತೆಗೆ ನೀರಿನ ಮೂಲ ಸೌಕರ್ಯದ ಬಗ್ಗೆ ಮಾಲಿಕತ್ವದ ಭಾವನೆ ಮಹಿಳೆಯರ ನಡುವೆ ತರುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಿಗೆ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ Blue Hand Bag, Water Bottle, Steel Glass, Poster / Brochure, AMRUT Mission / Infrastructure related ಮಾಹಿತಿಯನ್ನೊಳಗೊಂಡ ₹ 1,500 ವೆಚ್ಚದ ಕಿಟ್ ಪ್ರತಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ನಗರ ಸ್ಥಳೀಯ ಸಂಸ್ಥೆಯ ಅಮೃತ್ ಅಭಿಯಾನ ಯೋಜನೆಯಿಂದ ನೀಡಲಾಗುತ್ತದೆ.
ಈ ಕಾರ್ಯಕ್ರಮ್ಕಕೆ ಸಂಬಂಧಿಸಿ ಜಿಲ್ಲೆಯಲ್ಲಿ ಹೊನ್ನಾವರದ ಸಂತಗಲ್ ನೀರು ಶುದ್ಧೀಕರಣ ಘಟಕ,ಸಿದ್ದಾಪುರದ ಹಂಜಿಗೆಗುಡ್ಡ, ಭಟ್ಕಳದ ಸಂತೆ ಮಾರುಕಟ್ಟೆ, ಜಾಲಿಯ ಕಡವಿನಕಟ್ಟ, ಕಾರವಾರದ ಬೈತಕೋಲ್ ಮತ್ತು ಹೈ ಚರ್ಚ್, ಮುಂಡಗೊಡದ ಸಣವಳ್ಳಿ ಟ್ಯಾಂಕ್‌ನಲ್ಲಿರುವ ಘಟಕಗಳಿಗೆ ಮಹಿಳೆಯರ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ.ಯಾವುದೇ ಕುಟುಂಬಕ್ಕೆ ನೀರಿನ ಸಮಸ್ಯೆ ತಲೆದೋರಿದರೆ ಅದರ ಮೊದಲ ಪ್ರತಿಕೂಲ ಪರಿಣಾಮ ಮಹಿಳೆಯರ ಮೇಲೆ ಆಗುತ್ತದೆ. ಇಡೀ ಕುಟುಂಬದ ಸ್ವಾಸ್ಥ್ಯ ದ ಕಾಳಜಿ ವಹಿಸುವ ಮಹಿಳೆ ಆಹಾರ ತಯಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ತನ್ನ ಕುಟುಂಬಕ್ಕೆ ಶುದ್ಧ ನೀರನ್ನು ಒದಗಿಸಲು ಅತೀ ಹೆಚ್ಚು ಪ್ರಯಾಸ ಪಡಬೇಕಾಗುತ್ತದೆ. ಮಹಿಳೆಯರಿಗೆ ನೀರಿನ ಬಳಕೆಯ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ.ಮಹಿಳೆ ತನಗೆ ದೊರೆತ ಜಾಗೃತಿ ಮಾಹಿತಿ ತನ್ನ ಕುಟುಂಬ ಮತ್ತು ಸಮಾಜಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯ ಮಾಡುತ್ತಾರೆ. ಜಿಲ್ಲೆಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪಾವಳಿ ಹಬ್ಬದ ಈ ಸಮಯದಲ್ಲಿ ನೀರಿನ ಮಹತ್ವದ ಬಗ್ಗೆ ಅರಿವಿನ ಮತ್ತು ಜಾಗೃತಿಯ ಬೆಳಕನ್ನು ಎಲ್ಲೆಡೆ ಮೂಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.