ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ನೀಲಮ್ಮ ಎಸ್. ರೆಡ್ಡಿ ಎಲ್ಹೇರಿರವರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ನೀಲಮ್ಮ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ಪರಿಶ್ರಮದಿಂದ ಅಭ್ಯಾಸ ಮಾಡಿ, ವೈದ್ಯೆಯಾಗಿ ಬದುಕು ಕಟ್ಟಿಕೊಂಡವರು. ಅವರ ಸರಳತೆ, ಸಮಯಪ್ರಜ್ಞೆ, ಕಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆರೋಗ್ಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕಾರ್ಯವೈಖರಿ ಯುವ ವೈದ್ಯರಿಗೆ ಮಾದರಿ ಎಂದು ತಿಳಿಸಿದರು.ಐಎಂಎ ಅಧ್ಯಕ್ಷ ಡಾ. ಭಗವಂತ ಅನವಾರ ಮಾತನಾಡಿ, ನಾನು ಡಾ. ನೀಲಮ್ಮ ಅವರೊಂದಿಗೆ ಸುದೀರ್ಘ ಕಾಲ ಸರ್ಕಾರಿ ವೈದ್ಯನಾಗಿ ಒಟ್ಟಿಗೆ ಕೆಲಸ ಮಾಡಿದ್ದೇನೆ. ಅವರು ಕೆಲಸದ ವೇಳೆ ಬೇಸರಪಟ್ಟುಕೊಂಡಿರುವುದನ್ನು ನಾನು ಕಂಡಿಲ್ಲ. ಮಾರಕ ಕೊರೋನಾ ವೈರಸ್ ದಾಳಿ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಜಿಲ್ಲೆಯ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು ಎಂದು ಶ್ಲಾಘಿಸಿದರು.
ಎಲ್ಹೇರಿ ಶಿವಶಂಕರ ಮಠದ ಪೀಠಾಧಿಪತಿ ಕೊಟ್ಟುರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ವಿಜಯಕುಮಾರ, ನಾಗರತ್ನ ಕುಪ್ಪಿ, ನಾಗರತ್ನ ಅನಪೂರ, ಡಾ. ಪ್ರಸನ್ನ ಪಾಟೀಲ್ ಇತರರು ಅವರ ಸೇವೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಶೈಲಶ್ರೀ ಎಸ್. ರೆಡ್ಡಿ, ಡಿಎಚ್‌ಓ ಡಾ. ಪ್ರಭುಲಿಂಗ ಮಾನಕರ್, ಹಿರಿಯ ನ್ಯಾಯವಾದಿಗಳಾದ ಎಸ್.ಬಿ. ಪಾಟೀಲ್, ಹಿರಿಯ ವೈದ್ಯರಾದ ಡಾ. ಜಿ.ಡಿ. ಹುನಗುಂಟಿ, ಡಾ. ವೀರಭದ್ರಪ್ಪ ಎಲ್ಹೇರಿ, ಡಾ. ರಿಜ್ವಾನ ಅಫ್ರೀನ್, ಎಚ್.ಸಿ. ಪಾಟೀಲ್ ರಾಜನಕೋಳೂರು, ಮಲ್ಕರಡ್ಡಿ ಮಾಲಿ ಪಾಟೀಲ್ ಸೇರಿದಂತೆ ಇತರರಿದ್ದರು.