ಬಿಲ್‌ ಪಾವತಿ ತಾರತಮ್ಯ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ: ಗುತ್ತಿಗೆದಾರ ಅಯ್ಯನಪುರ ಶಿವಕುಮಾರ್

KannadaprabhaNewsNetwork |  
Published : Nov 14, 2024, 12:48 AM IST
13ಸಿಎಚ್‌ಎನ್‌51ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ಅಯ್ಯನಪುರ ಶಿವಕುಮಾರ್ ಮಾತನಾಡಿದರು. ಎಸ್‌ಸಿ,ಎಸ್‌ಟಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಚನ್ನಯ್ಯ, ಗುತ್ತಿಗೆದಾರರರಾದ ಅಬ್ದುಲ್ ಅಜೀಜ್ (ದೀನಾ), ಎಸ್.ಆರ್.ಗೋವಿಂದರಾಜು, ಗಣೇಶಪ್ರಸಾದ್, ಗುರುಸ್ವಾಮಿ ಹಾಜರಿದ್ದರು. | Kannada Prabha

ಸಾರಾಂಶ

ಕಾಮಗಾರಿಗಳ ಬಿಲ್‌ ಪಾವತಿ ಮಾಡಲು ವಿಳಂಬ, ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಕಾವೇರಿ ನೀರಾವರಿ ನಿಗಮದ ನಂಜನಗೂಡು ವಿಭಾಗದ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸವನ್ನು ನ.14ರಂದು ಹಮ್ಮಿಕೊಳ್ಳಲಾಗುತ್ತದೆ ಎಂದು ಗುತ್ತಿಗೆದಾರ ಅಯ್ಯನಪುರ ಶಿವಕುಮಾರ್ ತಿಳಿಸಿದರು. ಚಾಮರಾಜನಗರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಬಿಲ್‌ ಪಾವತಿ ಮಾಡಲು ವಿಳಂಬ, ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಕಾವೇರಿ ನೀರಾವರಿ ನಿಗಮದ ನಂಜನಗೂಡು ವಿಭಾಗದ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಉಪವಾಸವನ್ನು ನ.14ರಂದು ಹಮ್ಮಿಕೊಳ್ಳಲಾಗುತ್ತದೆ ಎಂದು ಗುತ್ತಿಗೆದಾರ ಅಯ್ಯನಪುರ ಶಿವಕುಮಾರ್ ಅವರು ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ನಿರ್ವಹಿಸಿರುವ ಕಾಮಗಾರಿಗಳ ಬಿಲ್ 25.65 ಕೋಟಿ ರು. ಬಾಕಿ ಉಳಿದಿದ್ದು 2021-22 ನೇ ಸಾಲಿನಿಂದ ಬಾಕಿ ಉಳಿದಿದೆ. ಎಸ್‌ಡಿಪಿ ಹಾಗೂ ನಿರ್ವಹಣೆಗೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಆದರೆ ಶೇ.10,15 ರಷ್ಟು ಫರ್ಸೆಂಟ್ ಹಣ ಕೊಡುವ ದೊಡ್ಡ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿದ ತಕ್ಷಣದಲ್ಲೇ ಮೊಬೈಲ್ ಮೂಲಕ ಬಿಲ್ ಪಾವತಿಸುತ್ತಾರೆ. ಕೋಟಿ ಕೋಟಿ ಹಣ ಪಾವತಿಸಿರುತ್ತಾರೆ. ಆದರೆ ನಮಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿಳಂಬ ಮಾಡುವ ಮೂಲಕ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಸಾಲ ಮಾಡಿ ಕಾಮಗಾರಿ ನಿರ್ವಹಿಸಿ ವರ್ಷಗಳು ಕಳೆದರೂ ಬಿಲ್ ಆಗಿಲ್ಲ. ಇದರಿಂದ ಗುತ್ತಿಗೆದಾರರ ತುಂಬಾ ಕಷ್ಟದಲ್ಲಿ ಸಿಲುಕಿದ್ದಾರೆ. ಬಿಲ್ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಹೋದರೆ ವ್ಯವಸ್ಥಾಪಕ ನಿರ್ದೇಶಕರು ಸಿಗುತ್ತಿಲ್ಲ ನಿಗಮದ ವ್ಯವಸ್ಥಾಪಕರು, ಕಾರ್ಯಪಾಲಕ ಇಂಜಿನಿಯರ್ ಅವರು ಈಗಾಗಲೇ ಇತ್ತೀಚೆಗೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ವೆಂಕಟಸುಬ್ಬಯ್ಯರಿಗೆ 80 ಲಕ್ಷ ರು. ನೃಪತುಂಗ ಎಂ.ಎಸ್‌. ಕಂಟ್ರಾಕ್ಷನ್‌ಗೆ 25 ಲಕ್ಷ ಬಿಲ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಎಂಡಿ ಅವರ ಆದೇಶದಂತೆ ಬಿಲ್‌ ಪಾವತಿಸಲಾಗಿದೆ ಎಂದು ಹೇಳುತ್ತಾರೆ. ಇದು ಒಂದು ರೀತಿಯ ತಾರತಮ್ಯ ಎಂದು ದೂರಿದರು.

ಕಾಮಗಾರಿಗಳ ಬಿಲ್‌ ಪಾವತಿ ಮಾಡಲು ವಿಳಂಬ ಮಾಡುತ್ತಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕಾರ್ಯಪಾಲಕ ಅಭಿಯಂತರಾದ ಕಾವೇರಿ ರಂಗನಾಥ್ ಅವರನ್ನು ಸೇವೆಯಿಂದ ವಜಾಗೊಳಿಸಿ ತನಿಖೆಗೊಳಪಡಿಸಬೇಕು ಇಂತಹ ಎಂಡಿ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರೆ ಕೋಟಿ ಕೋಟಿ ಹಣ ಸಿಗುತ್ತದೆ. ನಮಗೆ ಬಿಲ್ ಪಾವತಿಸಿ ನ್ಯಾಯ ಕೊಡಿಸುವ ತನಕ ಅನಿರ್ದಿಷ್ಠಾವಧಿ ಧರಣಿ ನಡೆಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಚನ್ನಯ್ಯ, ಅಬ್ದುಲ್ ಅಜೀಜ್ (ದೀನಾ), ಗುತ್ತಿಗೆದಾರರರಾದ ಎಸ್.ಆರ್.ಗೋವಿಂದರಾಜು, ಗಣೇಶಪ್ರಸಾದ್, ಗುರುಸ್ವಾಮಿ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ