ಜು.29 ರಿಂದ ಅನಿರ್ಧಿಷ್ಟಾವಧಿ ಮುಷ್ಕರ

KannadaprabhaNewsNetwork | Published : Jul 16, 2024 12:39 AM

ಸಾರಾಂಶ

ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡದೇ ರಾಜ್ಯ ಸರ್ಕಾರ ವಿಳಂಬ‌ ಮಾಡುತ್ತಿದೆ. ವೇತನ ಆಯೋಗ ಜಾರಿಗೆ ತರದಿದ್ದರೇ ರಾಜ್ಯಾದ್ಯಂತ ಶಾಲಾ ಕಾಲೇಜು ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ 7ನೇ ವೇತನ ಜಾರಿ ಸೇರಿದಂತೆ ಎನ್‌ಪಿಎಸ್‌ ರದ್ದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಕುರಿತು ಮನವಿ ಸಲ್ಲಿಸಿ ಮಾತನಾಡಿದ ಅವರು, 7ನೇ ವೇತನ ಕೊಡುವಲ್ಲಿ ರಾಜ್ಯ ಸರ್ಕಾರ ಎರಡು ವರ್ಷದಿಂದ ಮೀನಾಮೇಷ ಮಾಡುತ್ತಿದೆ. 4 ರಾಜ್ಯಗಳಲ್ಲಿ ಎನ್‌ಪಿಎಸ್‌ (ನೂತನ ಪಿಂಚಣಿ ಯೋಜನೆ) ರದ್ದು ಮಾಡಿ ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿ ಮಾಡಿದ್ದಾರೆ. ನಮ್ಮ‌ ರಾಜ್ಯದಲ್ಲೂ ಆಗಬೇಕು. ನೌಕರರು ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದು, ಪ್ರತಿ ಕಾಯಿಲೆ ಚಿಕಿತ್ಸೆಗೆ ಒಳಪಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಬೇಕು. ಈ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಿಸಬೇಕು. ನಮ್ಮ ನ್ಯಾಯಯುತ ಬೇಡಿಕೆ ಇಡೇರದಿದ್ದರೇ ಜು.29 ರಿಂದ ರಾಜ್ಯಾದ್ಯಂತ ಶಾಲಾ ಕಾಲೇಜು ಹಾಗೂ ಕಚೇರಿಗಳಲ್ಲಿ ಗೈರು ಹಾಜರಾಗುವ ಮೂಲಕ ಮುಷ್ಕರ ಕೈಗೊಳ್ಳುವ ಕುರಿತು ಕೇಂದ್ರ ಸಂಘ ನಿರ್ಧರಿಸಿದಂತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಖಜಾಂಚಿ ಜುಬೇರ ಕೆರೂರ, ಗಂಗಾಧರ ಜೇವೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ನೀಜು ಮೇಲಿನಕೇರಿ, ಜಗದೀಶ ಬೋಳಸೂರ, ಬಸೀರ್ ನದಾಪ್, ಚನ್ನಯ್ಯ ಮಠಪತಿ, ರವೀಂದ್ರ ಉಗಾರ, ಮುತ್ತಪ್ಪ ಪೂಜಾರಿ, ಉದಯ ಕೊಟ್ಯಾಳ, ರಾಮಣ್ಣಾ ಬೋಳೆಗಾರ, ಅಜೀಜ್ ಅರಳಿಮಟ್ಟಿ, ಬಸವರಾಜ ಗಿರಿನಿವಾಸ, ಎಂ.ಎಚ್.ಚಿತ್ತರಗಿ, ಫಯಾಜ್ ತಮದಡ್ಡಿ, ಎಸ್.ಎಚ್.ಪಿಂಜಾರ್, ಎಸ್.ಎಸ್.ತೆರದಾಳ ಉಪಸ್ಥಿತರಿದ್ದರು.

Share this article