ಮುಂಡಗೋಡ: ಸಾಕಷ್ಟು ತ್ಯಾಗ ಮತ್ತು ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಪ್ರಸ್ತುತ ಭಾರತ ದೇಶ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದು ಜಾಗತಿಕವಾಗಿ ತನ್ನದೇ ಸ್ಥಾನಮಾನವಿದೆ ಎಂದು ತಹಶೀಲ್ದಾರ ಶಂಕರ ಗೌಡಿ ತಿಳಿಸಿದರು.
ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಕಲೆ, ಮೂಲಭೂತ ಸೌಕರ್ಯಗಳು, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಜಗತ್ತು ತನ್ನತ್ತ ನೋಡುವಂತೆ ಮುಂಚೂಣಿ ರಾಷ್ಟ್ರದ ಸ್ಥಾನ ಪಡೆದಿದೆ ಎಂದರು.
ಭಾರತದ ಸ್ವಾತಂತ್ರ‍್ಯ ಯಜ್ಞದಲ್ಲಿ ಪರಕೀಯರ ದಬ್ಬಾಳಿಕೆಗೆ ಪ್ರಾಣವನ್ನು ಕೊಟ್ಟವರು ಆರು ಲಕ್ಷಕ್ಕೂ ಹೆಚ್ಚು ಜನ ಎಂಬುದು ನಾವು ಪಡೆದ ಸ್ವಾತಂತ್ರದ ಹೋರಾಟದ ಅಗಾಧತೆ ತಿಳಿಸುತ್ತದೆ. ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು ಎಂದರು.ಇದೇ ವೇಳೆ ಕೃಷಿಯಲ್ಲಿ ಅಪಾರ ಸಾಧನೆಗೈದ ಬಸವರಾಜ ನಡುವಿನಮನಿ ಹಾಗೂ ಅನ್ನಪೂರ್ಣ ಬೆಣ್ಣಿ ಅವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಪಪಂ ಸದಸ್ಯ ಅಶೋಕ ಚಲವಾದಿ ಮಾತನಾಡಿದರು.
ತಾಪಂ ಇಒ ಟಿ.ವೈ. ದಾಸನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ, ಪಪಂ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಗ್ಯಾರಂಟಿ ಅಧ್ಯಕ್ಷ ರಾಜಶೇಖರ ಹಿರೇಮಠ, ಸಿಪಿಐ ರಂಗನಾಥ ನೀಲಮ್ಮನವರ, ಮುಖಂಡರಾದ ಚಿದಾನಂದ ಹರಿಜನ, ಪಪಂ ಸದಸ್ಯರು, ಸರ್ಕಾರಿ ಇಲಾಖೆಯ ಅಧಿಕಾರಿಗಳು ಮುಂತಾದವರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ. ಸ್ವಾಗತಿಸಿದರು. ಕೆ.ಕೆ.ಕರುವಿನಕೊಪ್ಪ ನಿರೂಪಿಸಿದರು. ಬಿ.ಆರ್.ಸಿ. ಸಮನ್ವಯಾಧಿಕಾರಿ ಡಾ.ರಮೇಶ ಅಂಬಿಗೇರ ವಂದಿಸಿದರು.