ಇಂಡಿ ಬಂದ್ ಸಂಪೂರ್ಣ ಯಶಸ್ವಿ

KannadaprabhaNewsNetwork |  
Published : Nov 01, 2026, 04:00 AM IST
ತತತತ | Kannada Prabha

ಸಾರಾಂಶ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ರೈತ ಮುಖಂಡರಾದ ಶಶಿಕಾಂತ ಗುರೂಜಿ ಹಾಗೂ ಚುನಪ್ಪ ಪೂಜಾರಿ ಅವರು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ ಇಂಡಿಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಪ್ರಗತಿಪರ ಸಂಘಟನೆಯಿಂದ ಕರೆ ನೀಡಿದ್ದ ಇಂಡಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಇಂಡಿ

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ರೈತ ಮುಖಂಡರಾದ ಶಶಿಕಾಂತ ಗುರೂಜಿ ಹಾಗೂ ಚುನಪ್ಪ ಪೂಜಾರಿ ಅವರು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ ಇಂಡಿಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಪ್ರಗತಿಪರ ಸಂಘಟನೆಯಿಂದ ಕರೆ ನೀಡಿದ್ದ ಇಂಡಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆ 10 ಗಂಟೆಗೆ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದ ರೈತರು, ನಂತರ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.

ಬಸ್ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡಿದರು. ತಾಲೂಕಿನ ಸಾಲೋಟಗಿ, ಝಳಕಿ, ಇಂಡಿಯಲ್ಲಿ ಬಂದ್ ಕಾವು ಜೋರಾಗಿತ್ತು. ಹಲವು ಕಡೆ ರೈತರು ಬೀದಿಗಿಳಿದು ಹೋರಾಟ ನಡೆಸಿದರು. ಅಂಗಡಿ ಮುಂಗಟ್ಟು ಸಾರಿಗೆ ವಾಹನ ಬಂದ್ ಆಗಿದ್ದರಿಂದ ತಾಲೂಕಿನಲ್ಲಿ ಬಂದ್‌ ಬಿಸಿ ಹೆಚ್ಚಾಗಿತ್ತು. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬಾಳು ಮುಳಜಿ, ಸಂತೋಷ ಕೆಂಬೋಗಿ, ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳಿಂದ ₹4,500 ಹಾಗೂ ರಾಜ್ಯ ಸರ್ಕಾರ ₹1000 ಸೇರಿದಂತೆ ಒಟ್ಟು ₹5,500 ನೀಡಬೇಕು ಎಂದು ಆಗ್ರಹಿಸಿದರು. ನಂತರ ರೈತರು ಗ್ರೇಡ್ ೨ ತಹಶೀಲ್ದಾರ ಆನಂದ ಪೆಮ್ಮಾರ ಅವರಿಗೆ ಮನವಿ ಸಲ್ಲಿಸಿದರು. ಮಧ್ಯಾಹ್ನ 4 ಗಂಟೆಯಿಂದ ಪ್ರತಿಭಟನೆ ಹಿಂಪಡೆದಿದ್ದರಿಂದ ವಾಹನ ಸಂಚಾರ ಆರಂಭಗೊಂಡಿತು.ಪ್ರತಿಭಟನೆ ವೇಳೆ ರವಿಕುಮಾರ ಕೆರುಟಗಿ, ಶಿವಾನಂದ ರಾವೂರ, ಶ್ರೀಶೈಲ ಠಕ್ಕಾ, ಅನೀಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ಹಣಮಂತ್ರಾಯಗೌಡ ಪಾಟೀಲ, ಎಸ್.ಎ.ಪಾಟೀಲ, ಅನೀಲ ಜಮಾದಾರ, ಮಹೇಶ ಹೂಗಾರ, ಪುಂಡುಸಾಹುಕಾರ ನಿಂಬರಗಿ, ಶರಣುಗೌಡ ಬಂಡಿ, ಶಾಂತು ಲಾಳಸಂಗಿ, ಅದೃಶ್ಯಪ್ಪ ವಾಲಿ, ಅಶೋಕ ಅಕಲಾದಿ, ಅಂಬಣ್ಣ ಕವಟಗಿ, ಸಂತೋಷಗೌಡ ಪಾಟೀಲ, ಎಸ್.ಟಿ.ಪಾಟೀಲ, ಭೀಮಾಶಂಕರ ಆಳುರ, ಬಸವರಾಜ ಹಂಜಗಿ,ತಮ್ಮಣ್ಣ ವಾಲಿಕಾರ, ರಾಜು ಬಳವಂತಿ, ಗುರು ಅಜಗೊಂಡ, ಸಿದ್ದರಾಮ ಹಂಜಗಿ, ಮುತ್ತು ಪೈಕಾರ, ಶಿವಯ್ಯ ಹಿರೇಪಟ್ಟ, ಅಪ್ಪು ಪೂಜಾರ, ಸುರೇಶ ಬ್ಯಾಗೆಳ್ಳಿ, ಹುಲೆಪ್ಪ ಕಾಡೆಗೋಳ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ