ನರಗುಂದ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ದುರ್ಬಲತೆಯಿಂದ ಬಲಿಷ್ಠ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
1950ರ ಜ. 26ರಂದು ಭಾರತವು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿದೆ. ವಂದೇ ಮಾತರಂ 150ನೇ ವರ್ಷಾಚರಣೆಯೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿದರು. 2024-25ನೇ ಸಾಲಿನ ಎಸ್ಎಸ್ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಅರಿಷಿಣಗೋಡಿ ಸರ್ಕಾರಿ ಪ್ರೌಢಶಾಲೆಯ ದೇವಕ್ಕ ಹನುಮಂತ ಕಲಾರಿ ಹಾಗೂ ಸವಿತಾ ಮ. ನಾಯ್ಕರ ಮತ್ತು ಕಣಕಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಭಾವನಾ ಬ. ಪಾಟೀಲ ಅವರಿಗೆ ಲ್ಯಾಪ್‌ಟಾಪ್ ಬದಲಾಗಿ ₹50 ಸಾವಿರದ ಚೆಕ್ ನೀಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಶಿವಾನಂದ ಮುತ್ತವಾಡ, ಬಿ.ಬಿ. ಐನಾಪುರ, ಎಸ್.ಆರ್. ಪಾಟೀಲ, ವಸಂತ ಜೋಗಣ್ಣವರ, ಉಮೇಶಗೌಡ ಪಾಟೀಲ, ಪವಾಡಪ್ಪ ವಡ್ಡಿಗೇರಿ, ರಾಚನಗೌಡ ಪಾಟೀಲ, ಅನಿಲ ಧರಿಯಣ್ಣವರ, ರಾಚಪ್ಪ ಅಳಗವಾಡಿ, ಸಿದ್ದು ಹೂಗಾರ, ಸಂತೋಷ ಹಂಚಿನಾಳ, ತಾಪಂ ಇಒ ಎಸ್.ಕೆ. ಇನಾಮದಾರ, ಸಿಪಿಐ ಮಂಜುನಾಥ ನಡುವಿನಮನಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಬ್ಯಾಳಿ, ಬಿಇಒ ಎಂ.ಎಚ್. ಕಂಬಳಿ, ಮಾರುತಿ ಗೊಂದಿ, ಗಿರೀಶ ದಾಸರ ಇದ್ದರು. ಸಂವಿಧಾನದ ಮಾರ್ಗಸೂಚಿ ಪಾಲಿಸಿ
ನರಗುಂದ: ಪಟ್ಟಣದ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಡಿ.ಆರ್. ಕಲಬುರ್ಗಿ ಮಾತನಾಡಿ, ದೇಶದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದುದು. ಎಲ್ಲ ಪ್ರಜೆಗಳಿಗೆ ಮಾರ್ಗದರ್ಶಕವಾಗಿದೆ. ವಿಶ್ವಕ್ಕೆ ಶಾಂತಿ ಬೋಧಿಸುವ ರಾಷ್ಟ್ರ ನಮ್ಮದು. ದೇಶದ ಎಲ್ಲ ಪ್ರಜೆಗಳು ಸಂವಿಧಾನ ಮಾರ್ಗಸೂಚಿಯನ್ನು ಅಳವಡಿಸಿಕೊಂಡು ದೇಶವನ್ನು ಅಭಿವೃದ್ಧಿಪಡಿಸಬೇಕು ಎಂದರು.ಶಿಕ್ಷಕಿ ಪಾರ್ವತಿ ದೇಶ ಭಕ್ತಿಗೀತೆ ಹಾಡಿದರು. ಸಂಸ್ಥೆ ನಿರ್ದೇಶಕ ಎ.ವಿ. ಪಾಟೀಲ, ಪ್ರಾಚಾರ್ಯ ಆರ್.ಬಿ. ಪಾಟೀಲ, ಉಭಯ ಮಹಾವಿದ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು. ಎಸ್.ವಿ. ಕೋಟಿ ಸ್ವಾಗತಿಸಿದರು. ಎಂ.ಪಿ. ಖ್ಯಾತನಗೌಡರ ನಿರೂಪಿಸಿದರು. ಎಸ್.ಎ. ಪಾಟೀಲ ವಂದಿಸಿದರು.