68 ರಾಷ್ಟ್ರಗಳಿಗೆ ಭಾರತ ಸಾಲ ನೀಡಿದೆ: ಸಂಸದ

KannadaprabhaNewsNetwork |  
Published : Sep 04, 2026, 01:15 AM IST
68 ರಾಷ್ಟ್ರಗಳಿಗೆ ಭಾರತ ಸಾಲ ನೀಡಿದೆಃ ಸಂಸದ ಕೋಟ ಶ್ರೀನಿವಾಸ ಪೂಜಾರಿ | Kannada Prabha

ಸಾರಾಂಶ

ತರೀಕೆರೆಒಂದು ಕಾಲದಲ್ಲಿ ವಿದೇಶದಲ್ಲಿ ನಮ್ಮ ಬಂಗಾರ ಅಡವಿಟ್ಟು ಸಾಲ ತೆಗೆದುಕೊಂಡು ಬಂದಿದ್ದ ಭಾರತ ಇಂದು ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಗತ್ತಿನ 68 ರಾಷ್ಟ್ರಗಳಿಗೆ ಸಾಲ ನೀಡಿ ಪ್ರಪಂಚದಲ್ಲಿಯೇ ಆರ್ಥಿಕವಾಗಿ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜೋಡಿಕೋಡಿಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ತರೀಕೆರೆ

ಒಂದು ಕಾಲದಲ್ಲಿ ವಿದೇಶದಲ್ಲಿ ನಮ್ಮ ಬಂಗಾರ ಅಡವಿಟ್ಟು ಸಾಲ ತೆಗೆದುಕೊಂಡು ಬಂದಿದ್ದ ಭಾರತ ಇಂದು ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಗತ್ತಿನ 68 ರಾಷ್ಟ್ರಗಳಿಗೆ ಸಾಲ ನೀಡಿ ಪ್ರಪಂಚದಲ್ಲಿಯೇ ಆರ್ಥಿಕವಾಗಿ ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜೋಡಿಕೋಡಿಹಳ್ಳಿ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮೋದಿ ಸರ್ಕಾರ ಬಂದ ನಂತರ ದೇಶದಲ್ಲಿ ಭಯೋತ್ಪಾದಕರ ಸದ್ದಡ ಗಿಸಿದೆ. ನೆರೆ ರಾಷ್ಟ್ರಗಳಲ್ಲಿರುವ ಭಯೋತ್ಪಾದಕರ ತಾಣ ನಾಶಪಡಿಸುವ ಮಟ್ಟಕ್ಕೆ ನಮ್ಮ ರಕ್ಷಣಾ ವ್ಯವಸ್ಥೆ ಬಲಾಢ್ಯವಾಗಿದೆ ಎಂದು ಹೇಳಿದರು.

ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇ. 26 ರಷ್ಟು ಬಡವರಿಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 22 ಲಕ್ಷ ಕ್ವಿಂಟಾಲ್ ಅಕ್ಕಿ ಉಚಿತವಾಗಿ ವಿತರಿಸುತ್ತಿದೆ. ಕೇಂದ್ರ ಸರ್ಕಾರದ ದೀನದಯಾಳ್ ಯೋಜನೆ ಯಡಿ ರಾಜ್ಯದಲ್ಲಿ ಸಾವಿರಾರು ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ತರೀಕೆರೆ ವಿಧಾನ ಸಭಾ ಕ್ಷೇತ್ರಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರ ನಿರ್ಮಿಸಲು ₹65 ಲಕ್ಷ ವೆಚ್ಚದ 11 ಕೇಂದ್ರಗಳಿಗೆ ₹ 7.15 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮೇಲ್ಲರ ಜವಾಬ್ದಾರಿ ಎಂದು ಹೇಳಿದರು.

ಮಹಿಳೆಯರ ಗರ್ಭಕೋಶ ಕ್ಯಾನ್ಸರ್ ಚಿಕಿತ್ಸೆಗೆ ಕೇಂದ್ರ ಸರ್ಕಾರ ಲಸಿಕೆ ಅಭಿವೃದ್ಧಿಪಡಿಸಿದ್ದು, ಆ ಲಸಿಕೆಗೆ ₹12,000 ವೆಚ್ಚವಾಗುತ್ತಿದೆ. ಇದನ್ನು ಕ್ಯಾನ್ಸರ್ ಪೀಡಿತ ಪ್ರತಿ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಪ್ರತಿಯೊಬ್ಬ ಜನಪ್ರತಿನಿಧಿ ತಮ್ಮ ವ್ಯಾಪ್ತಿಯ ಕೆಲಸ ಶ್ರದ್ಧೆಯಿಂದ ನಿರ್ವಹಿಸಿದರೆ ಜನರ ಸಮಸ್ಯೆ ಕಡಿಮೆಯಾಗುತ್ತವೆ ಎಂದರು.

ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಆದರ್ಶ ಗ್ರಾಮ ಯೋಜನೆ ಜಾರಿಗೆ ತಂದಿದೆ. ನಮ್ಮ ಸಂಸದರು ಸಹ ನರೇಂದ್ರ ಮೋದಿ ಹಾದಿಯಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಪ್ರತಿ ದಿನ ನೂರಾರು ಕಿ.ಮೀ. ಪ್ರವಾಸ ಮಾಡಿ ಅಭಿವೃದ್ಧಿ ಮತ್ತು ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನರ ಆರೋಗ್ಯ ದೃಷ್ಠಿಯಿಂದ ಆಯಷ್ಮಾನ್ ಆರೋಗ್ಯ ಕೇಂದ್ರವನ್ನು ನಮ್ಮ ಕ್ಷೇತ್ರಕ್ಕೆ ನೀಡಿರುವುದು ಶ್ಲಾಘನೀಯ ಎಂದರು.

ಸಂಸದರು ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ ಕಾಮಗಾರಿಗಳನ್ನು ಜೋಡಿ ಕೋಡಿಹಳ್ಳಿ, ಗಂಜೀಗೆರೆ, ಎಚ್. ರಂಗಾಪುರ ಮತ್ತು ಕೆಂಗಯ್ಯನ ಕ್ಯಾಂಪ್ ಗಳಲ್ಲಿ ತಲಾ ₹20 ಲಕ್ಷದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ಸಂಜೆ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ100 ಹಾಸಿಗೆಯ ತಾಯಿ-ಮಗು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಬೇಲೇನಹಳ್ಳಿ ಸೋಮಶೇಖರ್, ಗುಳ್ಳದಮನೆ ವಸಂತಕುಮಾರ್, ಶಿವಕುಮಾರ್, ಗರಗದಹಳ್ಳಿ ಪ್ರತಾಪ್ ಮತ್ತು ಆಯಾ ಭಾಗದ ಸ್ಥಳೀಯ ಮುಖಂಡರಿದ್ದರು.

-

3ಕೆಟಿಆರ್.ಕೆ.15ಃ

ಗಂಜಿಗೆರೆ ಗ್ರಾಮದಲ್ಲಿ ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆಯ ಕಾಮಗಾರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಿಯಾಂಕ್‌ ಖರ್ಗೆ ವಿರುದ್ಧ ಎಚ್‌ಡಿಕೆ ಮತ್ತೆ ವಾಗ್ದಾಳಿ
ಯುವತಿಯ ಮತದಾರ ಪಟ್ಟೀಲಿ ಅಪರಿಚಿತ ಹೆಸರು: ಚು.ಆಯೋಗಕ್ಕೆ ಹೈ ನೋಟಿಸ್