ಭಾರತ ಸದೃಢ ರಾಷ್ಟ್ರವಾಗಿ ಬೆಳೆದಿದೆ: ತಹಸೀಲ್ದಾರ್‌ ಬಸಲಿಂಗಪ್ಪ ನೈಕೋಡಿ

KannadaprabhaNewsNetwork |  
Published : Jan 28, 2024, 01:16 AM IST
ಹುಣಸಗಿ ಪಟ್ಟಣದ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ನಡೆದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ತಾಲೂಕು ಆಡಳಿತದಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ನಮ್ಮ ರಾಷ್ಟ್ರ ತನ್ನದೇ ಆದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆ ರೂಢಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ನಾವು ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ.‌

ಕನ್ನಡಪ್ರಭ ವಾರ್ತೆ ಹುಣಸಗಿ

ಹಲವು ಭಾಷೆ, ಧರ್ಮ, ಆಚರಣೆ ಸೇರಿ ಹಲವು ಪ್ರಾಂತ್ಯಗಳನ್ನು ಒಳಗೊಂಡಿರುವ ಭಾರತ ದೇಶವು ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡಿದೆ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಭಾರತ ಸದೃಢ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಹೇಳಿದರು.

ಪಟ್ಟಣದ ಬಾಲಕಿಯರ ಪ್ರೌಢ ಶಾಲೆ ಆವರಣದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ನಮ್ಮ ರಾಷ್ಟ್ರ ತನ್ನದೇ ಆದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆ ರೂಢಿಸಿಕೊಂಡು ಸಂವಿಧಾನವನ್ನು ಜಾರಿಗೆ ತಂದ ದಿನವನ್ನು ನಾವು ಗಣರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ.‌ ಡಾ. ಬಿ.ಆರ್. ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಿದ ಸಂವಿಧಾನದಿಂದಾಗಿಯೇ ಸಾಮಾನ್ಯ ವ್ಯಕ್ತಿ ಸೇರಿ ಮಹಿಳೆಯರು ಕೂಡ ಇಂದು ರಾಜಕೀಯದಲ್ಲಿ ಪ್ರವೇಶಿಸಿ ಉನ್ನತ ಸ್ಥಾನಮಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಉಪನ್ಯಾಸಕ ಭಾಗಣ್ಣ ಅರೇನಾಡಿ ಹಗರಟಗಿ ಮಾತನಾಡಿ, ವಿಶ್ವದಲ್ಲಿಯೇ ಭಾರತದ ಸಂವಿಧಾನ ಅತಿ ದೊಡ್ಡ ಸಂವಿಧಾನವಾಗಿದ್ದು, ವಿವಿಧತೆಯಲ್ಲಿ ಏಕತೆ ಸಾಧಿಸಲು ಸಹಕಾರಿಯಾಗಿರುವುದರಿಂದ ದೇಶದ ಪ್ರತಿಯೊಬ್ಬ ನಾಗರಿಕನು ಸಂವಿಧಾನಕ್ಕೆ ಬದ್ಧವಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ತಾಲೂಕು ಆಡಳಿತದಿಂದ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸ್ಕೌಟ್ಸ್, ಗೈಡ್ಸ್ ಹಾಗೂ ಪೊಲೀಸ್ ಮತ್ತು ಗೃಹ ರಕ್ಷಕ ದಳದಿಂದ ಪಂಥ ಸಂಚಲನ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಪ.ಪಂ. ಸದಸ್ಯ ಸಿದ್ರಾಮಪ್ಪ ಮುದಗಲ್, ತಾ.ಪಂ. ಅಧಿಕಾರಿ ಬಸವರಾಜಯ್ಯ ಹಿರೇಮಠ, ಪ.ಪಂ. ಮುಖ್ಯಾಧಿಕಾರಿ ಸಿದ್ದರಾಮೇಶ್ವರ, ಪಿಎಸ್ಐ ಚಂದ್ರಶೇಖರ ನಾರಾಯಣಪೂರ ಸೇರಿದಂತೆ ಇತರರಿದ್ದರು.

ಅರ್ಬನ್ ಕೋ-ಆಪರೇಟಿವ್ ಸೋಸಾಯಿಟಿ :

ಪಟ್ಟಣದ ಅರ್ಬನ್ ಕೋ-ಆಪರೇಟಿವ್ ಸೊಸಾಯಿಟಿ ಕಾರ್ಯಾಲದಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಸವರಾಜ್ ಮೇಲಿನಮನಿ, ಶಾಂತಗೌಡ ಅರಕೇರಿ, ಚಂದ್ರಶೇಖರ ದೇಸಾಯಿ, ಗುರಲಿಂಗಣ್ಣ ಸಜ್ಜನ್, ಪದ್ಮಾವತಿ ದೇಶಪಾಂಡೆ ಇತರರಿದ್ದರು.

ಆಶೀರ್ವಾದ ಗ್ಲೋಬಲ್ ಶಾಲೆ:

ಪಟ್ಟಣದ ಆಶೀರ್ವಾದ ಗ್ಲೋಬಲ್ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನ ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮಾಜಿ ಜಿಪಂ ಅಧ್ಯಕ್ಷರಾದ ಬಸನಗೌಡ ಮಲ್ಲನಗೌಡ ವಣಿಕ್ಯಲ್ (ನಾವದಗಿ) ಸಮಾರಂಭದ ಅತಿಥಿಗಳಾಗಿ ಮತ್ತು ಗುರುಮಾಂತಯ್ಯ ಹಿರೇಮಠ ಆಗಮಿಸಿದ್ದರು. ಕ್ರೀಡಾ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪದಕ , ಪ್ರಶಸ್ತಿ ಪತ್ರ ನೀಡಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ