ವಿಶ್ವದ ಆರ್ಥಿಕತೆಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ

KannadaprabhaNewsNetwork |  
Published : Jun 15, 2026, 04:00 AM IST
ಇಜೆಪಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಜಾಗತಿಕ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಜಪಾನ್ ದೇಶವನ್ನು ಹಿಂದಿಕ್ಕುವ ಮೂಲಕ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಇದು ವಿಕಸಿತ ಭಾರತದ ಮೊದಲ ಹೆಜ್ಜೆಯಾಗಿದ್ದು, ರೈತರು, ಸೈನಿಕರು, ಮಹಿಳೆಯರು, ಯುವಕರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕ ಸಂತೋಷದಿಂದ ಜೀವನ ನಡೆಸಲು ಪ್ರಧಾನಿ ಮೋದಿ ಅವರು ನೀಡಿರುವ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ವಿಶ್ವದ ಜಾಗತಿಕ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಜಪಾನ್ ದೇಶವನ್ನು ಹಿಂದಿಕ್ಕುವ ಮೂಲಕ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಇದು ವಿಕಸಿತ ಭಾರತದ ಮೊದಲ ಹೆಜ್ಜೆಯಾಗಿದ್ದು, ರೈತರು, ಸೈನಿಕರು, ಮಹಿಳೆಯರು, ಯುವಕರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕ ಸಂತೋಷದಿಂದ ಜೀವನ ನಡೆಸಲು ಪ್ರಧಾನಿ ಮೋದಿ ಅವರು ನೀಡಿರುವ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047ಕ್ಕೆ ವಿಕಸಿತ ಭಾರತದ ಮೂಲಕ ವಿಶ್ವಮಟ್ಟದಲ್ಲಿ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರದಿಂದ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವತ್ತ ಕೊಂಡೊಯ್ಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದಾಗಿನಿಂದ ನ ಕಾವೂಂಗಾ ನ ಕಾನೇದೊಂಗಾ ಎಂಬ ಭ್ರಷ್ಟಾಚಾರ ವಿರೋಧ ನಿಲುವುವಿನೊಂದಿಗೆ ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ದಶಕದಲ್ಲಿ ದೇಶದ ಸುಮಾರು 2.5 ಕೋಟಿಗೊ ಹೆಚ್ಚು ಜನರು ಬಹು ಆಯಾಮ ಬಡತನ ರೇಖೆಯಿಂದ ಹೊರ ಬಂದಿದ್ದಾರೆ ಎಂಬ ವರದಿಯೇ ಸಾಕ್ಷಿ ಎಂದು ಹೇಳಿದರು.

ಇದೇ ಮೊದಲ ಬಾರಿಗೆ ದೇಶದಲ್ಲಿ ಲಿಂಗಾನುಪಾತದಲ್ಲಿ ಹೆಚ್ಚಳ ಕಂಡಿದೆ‌‌. 1000 ಪುರುಷರಿಗೆ 1020 ಮಹಿಳೆಯರು ಲಭ್ಯವಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆ, ಬೇಟಿ ಬಚಾವ್ ಬೇಟಿ ಪಡಾವೋ, ಉಜ್ವಲ ಯೋಜನೆ, ಕಿಸಾನ್ ಸನ್ಮಾನ ಯೋಜನೆ, ಭೀಮಾ ಫಸಲ್, ಪಿಎಂ ಕುಸುಮ ಯೋಜನೆ, ಪಿಎಂ ಮತ್ಸ್ಯ ಸಂಪದ ಯೋಜನೆ, ಪಿಎಂ ಆವಾಸ್ ಯೋಜನೆ, ಮಾತೃ ವಂದನ ಯೋಜನೆ, ಪಿಎಂ ಕೌಶಲ್ಯ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಅದಲ್ಲದೆ, ಲಿಂಗತ್ವ ಅಲ್ಪಸಂಖ್ಯಾತರೂ, ವಿಶೇಷ ಚೇತನರು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಯೋಜನೆ ರೂಪಿಸಲಾಗಿದೆ. ಹೀಗೆ, ಆರೋಗ್ಯ, ಶಿಕ್ಷಣ ಉದ್ಯೋಗ, ಆರ್ಥಿಕತೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಅವರು ಮಾಡಿರುವ ಸಾಧನೆ ಗಮನಾರ್ಹ ಎಂದರು.

ಮಹಾಂತೇಶ ಕವಟಗಿಮಠ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕ ಕೇವಲ ಜನರನ್ನು ಆಳುವವರಲ್ಲ. ಬದಲಿಗೆ ದೇಶದ ಸೇವೆ, ದೇಶದ ಸೇವಕ ಎನ್ನುವ ಮಹತ್ವದ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಡೀ ನಾಡಿಗೆ ಸಾರಿದ್ದಾರೆ. ಅಲ್ಲದೆ, ಕೋವಿಡ್ ನಂತಹ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ದೇಶದಲ್ಲಿಯೇ ತಯಾರಿಸಲ್ಪಟ್ಟ ವ್ಯಾಕ್ಸಿನ್ ಮೂಲಕ ದೇಶದ ಜನರನ್ನು ರಕ್ಷಿಸುವುದರ ಜೊತೆಗೆ ಬೇರೆ ಏಷ್ಯನ್ ರಾಷ್ಟ್ರಗಳಿಗೂ ವ್ಯಾಕ್ಸಿನ್ ಪೂರೈಕೆ ಮಾಡಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.10 ಕೆಜಿ ಅಕ್ಕಿ ರಾಜ್ಯಕ್ಕೆ ನೀಡುವಲ್ಲಿ ಕೇಂದ್ರ ಸರ್ಕಾರದ ಪಾಲುಗಾರಿಕೆಯು ಇದೆ. ಪಿಎಂ ಅವಾಸ ಯೋಜನೆಯಲ್ಲಿ ನಾಲ್ಕ ಕೋಟಿ ಮನೆ, ಜನ್‌ ಧನ್‌ ಖಾತೆ ಜನಸಾಮಾನ್ಯರಿಗೂ ಸಿಗುವಂತೆ ಮಾಡುವ ಮೂಲಕ ಜನರ ಖಾತೆಗಳಿಗೆ ಹಣ ವಿತರಣೆ ಮಾಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆ, ಪಿಎಂ ಕಿಸಾನ್ ಯೋಜನೆ ಮೂಲಕ ₹ 10 ಸಾವಿರ ರೈತರ ಖಾತೆಗೆ, ಪಿಎಂ ಕೌಶಲ್ಯ ವಿಕಾಸ ಯೋಜನೆಯಲ್ಲಿ 1.3 ಕೋಟಿ ಜನರಿಗೆ ಅಮಾನಪತ್ರ ನೀಡಲಾಗಿದೆ. ಜಲ್‌ ಜೀವನ್‌ ಮಿಷನ್ ಯೋಜನೆ ಅಡಿ 15.79 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಹೀಗೆ, ಸಾಕಷ್ಟು ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ದುರ್ಯೋಧನ ಐಹೊಳೆ, ಮಹೇಶ ಕುಮಟಳ್ಳಿ, ಸತೀಶ ಅಪ್ಪಾಜಿಗೋಳ, ಅಮೃತ ಕುಲಕರ್ಣಿ, ಮಹೇಶ ಭಾತೆ, ದುಂಡಪ್ಪ ಬೆಂಡವಾಡೆ, ದೀಪಕ ಪಾಟೀಲ, ರಾಜು ಹರಗನ್ನವರ, ಶಾಂಭವಿ ಅಶ್ವಥಪುರ ಸೇರಿದಂತೆ ಇತರರು ಉಪಸಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರು ಇತಿಹಾಸದ ಮೂಲ ಜಾನಪದ
ಮಕ್ಕಳು ಆಡುವ ಉದ್ಯಾನವನಗಳಲ್ಲಿ ಅದ್ವಾನ