ಕ್ರಿಕೆಟ್‌ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸುವ ದೇಶ ಭಾರತ: ಶಾಸಕ ತಮ್ಮಯ್ಯ

KannadaprabhaNewsNetwork |  
Published : Dec 24, 2025, 01:30 AM IST
ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘ ಆಯೋಜಿಸಿದ್ಧ ಸಿಸಿಎಸ್ ಕಪ್ ಕ್ರಿಕೇಟ್ ಪಂದ್ಯಾವಳಿಯನ್ನು ಶಾಸಕ ಎಚ್‌.ಡಿ.ತಮ್ಮಯ್ಯ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರುಕ್ರಿಕೆಟ್‌ ಜನನ ವಿದೇಶವಾದರೂ, ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಿದ ದೇಶ ಭಾರತ. ಈ ಕ್ಷೇತ್ರದಲ್ಲಿ ಅನೇಕ ಕ್ರೀಡಾ ಪಟುಗಳ ದೇಶದ ಪರವಾಗಿ ಆಟವಾಡಿ ರಾಷ್ಟ್ರದ ಘನತೆ ಹೆಚ್ಚಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ಚಿಕ್ಕಮಗಳೂರಿನಲ್ಲಿ ಸಿಸಿಎಸ್ ಕಪ್ ಕ್ರಿಕೆಟ್‌ ಪಂದ್ಯಾವಳಿ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕ್ರಿಕೆಟ್‌ ಜನನ ವಿದೇಶವಾದರೂ, ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಿದ ದೇಶ ಭಾರತ. ಈ ಕ್ಷೇತ್ರದಲ್ಲಿ ಅನೇಕ ಕ್ರೀಡಾ ಪಟುಗಳ ದೇಶದ ಪರವಾಗಿ ಆಟವಾಡಿ ರಾಷ್ಟ್ರದ ಘನತೆ ಹೆಚ್ಚಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸುಭಾಸ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘ ಆಯೋಜಿಸಿದ್ಧ ಸಿಸಿಎಸ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ದೈನಂದಿನ ಶುಭ ಸಮಾರಂಭಗಳಲ್ಲಿ ನಿದ್ರೆ, ಊಟವಿಲ್ಲದೇ ಛಾಯಾಗ್ರಾಹಕ ವೃತ್ತಿ ಮಾಡುವವರಿಗೆ ಒಂದಿಷ್ಟು ಮಾನಸಿಕ, ಶಾರೀರಿಕ ಹಾಗೂ ದೈಹಿಕವಾಗಿ ಬಲ ತುಂಬುವ ಕ್ರೀಡಾಕೂಟಗಳು ಅವಶ್ಯಕ. ಕ್ರಿಕೇಟ್ ಒಂದು ಸಜ್ಜನರ ಆಟವಾಗಿದ್ದು, ಛಾಯಾಗ್ರಾಹಕರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಬದಲಾವಣೆ ಆಗುತ್ತಿದೆ. ಸ್ಮಾರ್ಟ್ಪೋನ್‌ಗಳ ನಡುವೆ ಛಾಯಾ ಗ್ರಾಹಕರ ವೃತ್ತಿ ಸ್ವಲ್ಪಮಟ್ಟಿನಲ್ಲಿ ಹಿನ್ನೆಡೆ ಅನುಭವಿಸಿದೆ. ಆದರೂ ಕುಟುಂಬದ ಜವಾಬ್ದಾರಿ ಅರಿತು ನಿರಂತರವಾಗಿ ದುಡಿ ಯುತ್ತಿರುವ ಛಾಯಾಗ್ರಾಹಕರು ವೃತ್ತಿಯನ್ನು ಕೈಬಿಡದೇ ಮುನ್ನಡೆಸುತ್ತಿರುವುದು ಒಳ್ಳೆಯ ಸಂಗತಿ ಎಂದರು.

ಛಾಯಾಗ್ರಾಹಕರ ಸಂಘಕ್ಕೆ ನಿವೇಶನದ ಮನವಿ ಮೇರೆಗೆ ನಗರದ ಹೊರವಲಯದ ಕಂದಾಯ ಭೂಮಿ ಗುರುತಿಸಿ, ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಸಂಘಕ್ಕೆ ಸ್ವಂತ ನಿವೇಶನದ ಕೊರತೆಯನ್ನು ನೀಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದ ಅವರು, ಛಾಯಾಗ್ರಾಹಕರು ದೃತಿಗೆಡದೇ ತಮ್ಮ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಶೀಲಾ ದಿನೇಶ್ ಮಾತನಾಡಿ, ಕ್ರೀಡಾಕೂಟಗಳು ಮನುಷ್ಯನ ದೈಹಿಕ ಶಕ್ತಿ ವೃದ್ಧಿಸಲಿದೆ. ದೈನಂದಿನ ಒಂದು ಭಾಗದಂತೆ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಸೋಲು, ಗೆಲುವಿನ ಚಿಂತೆಗೆ ಒಳಗಾಗದೇ ಸಂತೋಷದಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ನದೀಮ್ ಪಾಷ, ಛಾಯಾಗ್ರಾಹಕರ ಅನುಕೂಲಕ್ಕಾಗಿ ಇದೇ ಪ್ರಥಮ ಬಾರಿಗೆ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿದ್ದು, ಒಟ್ಟು 6 ತಂಡಗಳು ಭಾಗವಹಿಸಿವೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರು ಹಾಗೂ ಕುಟುಂಬದ ಶ್ರೇಯೋಭಿವೃದ್ದಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಗುರಿಯಿದೆ ಎಂದು ತಿಳಿಸಿದರು.

ಈಗಾಗಲೇ ಸಂಘದಿಂದ ಛಾಯಾಗ್ರಾಹಕರ ದಿನಾಚರಣೆ ಪ್ರಯುಕ್ತ ವೃದ್ಧಾಶ್ರಮಕ್ಕೆ ದಾಸೋಹದ ವ್ಯವಸ್ಥೆ, ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಗಿದೆ. ಜೊತೆಗೆ ಸಂಘದ ಸದಸ್ಯರ ಆರೋಗ್ಯದಲ್ಲಿ ವ್ಯತ್ಯಾಸಗೊಂಡು ವಿಪರೀತ ಸಮಸ್ಯೆ ಕಂಡುಬಂದಲ್ಲಿ ಆರ್ಥಿಕ ಸಹಾಯ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪಾರ್ಥಸಾರಥಿ, ಗೌರವಾಧ್ಯಕ್ಷ ರಮೇಶ್, ಕಾರ್ಯದರ್ಶಿ ಪ್ರದೀಪ್‌ಕುಮಾರ್, ಖಜಾಂಚಿ ಜಯನಾಯಕ್, ಸಹ ಕಾರ್ಯದರ್ಶಿ ಎಂ.ನೀಲಕಂಠ, ನಿರ್ದೇಶಕರಾದ ನವೀನ್, ರೇಣುಕುಮಾರ್, ಪ್ರಭು, ಸಂತೋಷ್, ಹರೀಶ್, ಸಂತೋಷ್, ದಿನೇಶ್, ವೆಂಕಟೇಶ್ ಇದ್ದರು. 23 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಚಿಕ್ಕಮಗಳೂರು ಛಾಯಾಗ್ರಾಹಕರ ಸಂಘ ಆಯೋಜಿಸಿದ್ಧ ಸಿಸಿಎಸ್ ಕಪ್ ಕ್ರಿಕೇಟ್ ಪಂದ್ಯಾವಳಿಯನ್ನು ಶಾಸಕ ಎಚ್‌.ಡಿ.ತಮ್ಮಯ್ಯ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ