ಭಾರತ ಸಾಂಸ್ಕೃತಿಕ ವೈಭವದ ಹೆಮ್ಮೆಯ ನಾಡು: ಶ್ರೀನಿವಾಸ್ ಮಾನೆ

KannadaprabhaNewsNetwork |  
Published : Oct 22, 2026, 02:15 AM IST
ಶಾಸಕ ಶ್ರೀನಿವಾಸ್ ಮಾನೆ ನಾಡದೇವಿಗೆ ಪುಷ್ಪಾರ್ಪಣೆ ಮಾಡಿದರು. | Kannada Prabha

ಸಾರಾಂಶ

ಹಾನಗಲ್ಲ ನಾಡಹಬ್ಬ ಬಹು ದೊಡ್ಡ ಸಾಹಿತಿ ಕಲಾವಿದರಿಗೆ ವೇದಿಕೆಯನ್ನು ನೀಡಿರುವಂತಹದ್ದು, ಇದು ಇಡೀ ಊರಿನ ಹಬ್ಬವಾಗಿ ಬೆಳೆದು ಬಂದಿದೆ.

ಹಾನಗಲ್ಲ: ಭಾರತ ಸಾಂಸ್ಕೃತಿಕ ವೈಭವದ ಹೆಮ್ಮೆಯ ನಾಡಾಗಿದ್ದು ಇಲ್ಲಿ ಸಂಗಿತ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಕಟ್ಟಿ ಬೆಳೆಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲಿನ ನಾಡಹಬ್ಬದ ೯ ನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾಡಹಬ್ಬದಂತಹ ಕಾರ್ಯಕ್ರಮಗಳು ಯುವಕರು ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಬೆಳೆಸುವ ಪ್ರೇರಣೆ ನೀಡಬೇಕು. ಹಾನಗಲ್ಲ ಸಂಗೀತ ಸಂಸ್ಕೃತಿಯ ಮೇರು ವ್ಯಕ್ತಿತ್ವವನ್ನು ಹೊಂದಿದ ಹೆಮ್ಮೆಯ ನಾಡು, ಇಂತಹ ನಾಡಿನಲ್ಲಿ ೮೯ ವರ್ಷಗಳಿಂದ ನಡೆಯುತ್ತಿರುವ ನಾಡಹಬ್ಬ ಒಂದು ಇತಿಹಾಸ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ ಮುಖ್ಯ ಅತಿಥಿಯಾಗಿ ಮಾತನಾಡಿ, ಹಾನಗಲ್ಲ ನಾಡಹಬ್ಬ ಬಹು ದೊಡ್ಡ ಸಾಹಿತಿ ಕಲಾವಿದರಿಗೆ ವೇದಿಕೆಯನ್ನು ನೀಡಿರುವಂತಹದ್ದು, ಇದು ಇಡೀ ಊರಿನ ಹಬ್ಬವಾಗಿ ಬೆಳೆದು ಬಂದಿದೆ. ಆದರೆ ಕರೋನಾ ಸಂದರ್ಭದಲ್ಲಿ ಒಂದಷ್ಟು ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿದ್ದರೂ ಕೂಡ ಈಗ ಮತ್ತೆ ಮೊದಲಿನ ವಿಜೃಂಭಣೆ ಕಾಣುತ್ತಿದೆ ಎಂದರು.

ಲಕ್ಷ್ಮೇಶ್ವರದ ಸಂತ ನಾರಾಯಣರಾವ್ ಪಿಸೆ ಮಾತನಾಡಿ, ಅಹಂಕಾರ ಮುಕ್ತವಾದ ಜೀವನದಿಂದ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಬದುಕಿಗಾಗಿ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳೋಣ. ನಮಗೆ ಮುಖ್ಯವಾಗಿ ಆತ್ಮಕಲ್ಯಾಣ ಬೇಕಾಗಿದೆ. ಮನಸ್ಸಿನ ವಿಕಾರ ಹೊಡೆದೋಡಿಸಿದರೆ ಮಾತ್ರ ಸಂತಸದ ಜೀವನ ಸಾಧ್ಯ. ಮನುಷ್ಯ ಜೀವನ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳುವುದು ಬೇಡ. ಶರಣರು ಸಂತರ ಈ ನಾಡಿನಲ್ಲಿ ಜೀವನ ಸಂದೇಶಗಳು ಹೇರಳವಾಗಿ ದೊರೆಯುತ್ತವೆ. ಅವುಗಳ ಪಾಲನೆಯಾಗಲಿ ಎಂದರು.

ವೈಭವಿ ಮಹಿಳಾ ಮಂಡಳಿ, ಮರಿಯಮ್ಮದೇವಿ ಮಹಿಳಾ ಮಂಡಳ, ಕದಳೀ ಮಹಿಳಾ ವೇದಿಕೆಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದರು. ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಸಂದೀಪ ಕೊಲ್ಲಾಪೂರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕುಟಿಕ ಜಾತಿಯ ವಕ್ರಕಂಠ ಹಕ್ಕಿ ಕೂಡ್ಲಿಗಿಗೆ ತಾತ್ಕಾಲಿಕ ವಲಸೆ
ಕುಷ್ಟಗಿ ರೈಲ್ವೆ ಮೇಲ್ಸೇತುವೆ ಶೀಘ್ರ ಲೋಕಾರ್ಪಣೆ