ಧ್ಯಾನ ಯೋಗ ಮಂದಿರ ಉದ್ಘಾಟನೆಯಲ್ಲಿ ಚನ್ನಮಲ್ಲ ಗುರೂಜಿ
ಯೋಗ ಭಾರತೀಯ ಸಂಸ್ಕೃತಿಯ ಮೂಲ ಬೇರು, ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ದೇಶ ಭಾರತವಾಗಿದೆ ಎಂದು ಜ್ಞಾನ ಗಂಗಾ ಯೋಗಾಶ್ರಮದ ಶ್ರೀ ಚನ್ನಮಲ್ಲ ಗುರೂಜಿ ಹೇಳಿದರು.
ಪಟ್ಟಣದ ಶ್ರೀಸಂಗಣ್ಣ ಟೆಂಗಿನಕಾಯಿಯವರ ಶ್ರೀಸಾಯಿ ಪ್ಯಾಲೇಸ್ ಆವರಣದಲ್ಲಿ ಧ್ಯಾನ ಯೋಗ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ದೇಶದಲ್ಲಿ ಹುಟ್ಟಿದ ನಾವೇ ಯೋಗ ಮಾಡದಿದ್ದರೆ ಹೇಗೆ ಪ್ರತಿನಿತ್ಯ ಯೋಗಕ್ಕಾಗಿ ಒಂದು ಗಂಟೆ ಸಮಯ ಮೀಸಲಿಟ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ರೋಗ ತಡೆಗಟ್ಟಲು ಬಹಳಷ್ಟು ಸಂಶೋಧನೆ ಮಾಡಿ ಯೋಗ ಒಂದು ದಿವ್ಯ ಔಷದವಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರು ಯೋಗ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದೆ. ಇತಂಹ ಧ್ಯಾನ ಯೋಗ ಮಂದಿರ ಕಟ್ಟಿ ಜನರಿಗೆ ಅನುಕೂಲ ಮಾಡಿ ಕೊಟ್ಟು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಂಗಣ್ಣನವರ ಸೇವೆ ಸ್ಮರಣೀಯ ಎಂದರು.
ಪಟ್ಟಣದ ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಇಟಗಿ-ಚಿಕ್ಕಮ್ಯಾಗೇರಿಯ ಡಾ. ಗುರುಶಾಂತವೀರ ಸ್ವಾಮೀಜಿ, ಹಿಮಾಲಯದಲ್ಲಿ ೬ವರ್ಷಗಳ ಕಾಲ ಯೋಗ ಸಾಧನೆ ಮಾಡಿರುವ ಶ್ರೀ ನಿರಂಜನ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.