ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತ : ಶಾಸಕ ಟಿ.ಡಿ. ರಾಜೇಗೌಡ

KannadaprabhaNewsNetwork |  
Published : Aug 16, 2024, 01:00 AM ISTUpdated : Aug 16, 2024, 11:53 AM IST
ನರಸಿಂಹರಾಜಪುರ ಪಟ್ಟಣದ ಕುವೆಂಪು ಕ್ರೀಡಾಂಗಣದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ  ವಿವಿಧ ಕ್ಷೇತ್ರಗಳ ಸಾಧಕರಾದ ಮಾಜಿ ಸೈನಿಕ  ಎಲ್‌.ಲೋಕೇಶ್, ಪೊಲೀಸ್ ಇಲಾಖೆಯ ಎ.ಎಸ್‌.ಐ ನಾಗರಾಜ್‌, ಕೆ.ಇ.ಬಿ ಇಲಾಖೆಯ ರಾಜಪ್ಪ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ತಹಶೀಲ್ದಾರ್‌ ತನುಜ ಟಿ.ಸವದತ್ತಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಸ್ವಾತಂತ್ರ್ಯೋತ್ಸವದಂದು ನರಸಿಂಹರಾಜಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡರು ಭಾರತವನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಬಣ್ಣಿಸಿದರು. ಅತಿವೃಷ್ಠಿಯಿಂದಾದ ನಷ್ಟ ಮತ್ತು ಪರಿಹಾರ ಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.

 ನರಸಿಂಹರಾಜಪುರ :  ಸ್ವಾತಂತ್ರ ಬಂದ ನಂತರ ನಮ್ಮ ದೇಶ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿದೆ ಎಂದು ಶಾಸಕ ಹಾಗೂ ರಾಜ್ಯ ನವೀಕರಿಸಬಹುದಾದ ಇಂದನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.

ಗುರುವಾರ ಕುವೆಂಪು ಕ್ರೀಡಾಂಗಣದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಕವಿ ಕುವೆಂಪು ಹೇಳಿದಂತೆ ಭಾರತ ದೇಶ ವಿವಿಧೆತೆಯಲ್ಲಿ ಏಕತೆ ಕಂಡ ರಾಷ್ಟ್ರವಾಗಿದೆ. ಎಲ್ಲಾ ಧರ್ಮ, ಜಾತಿಯವರು ಒಟ್ಟಾಗಿ ಬದುಕುತ್ತಿದ್ದೇವೆ. ಅತಿ ಹೆಚ್ಚು ಯವಜನರು ನಮ್ಮ ದೇಶದಲ್ಲಿ ಇದ್ದು ಎಲ್ಲರಿಗೂ ಉದ್ಯೋಗ ಸೃಷ್ಠಿ ಮಾಡಬೇಕಾಗಿದೆ ಎಂದರು.

ಈ ವರ್ಷ ಅತಿವೃಷ್ಠಿಯಿಂದ ಶೃಂಗೇರಿ ಕ್ಷೇತ್ರದಲ್ಲಿ 250 ರಿಂದ 300 ಕೋಟಿ ರು. ನಷ್ಟ ಉಂಟಾಗಿದೆ. ಕೊಪ್ಪ ತಾಲೂಕಿನಲ್ಲಿ 42 ಮನೆ, ನ.ರಾ. ಪುರದಲ್ಲಿ 82 ಮನೆ ಹಾಗೂ ಶೃಂಗೇರಿ ತಾಲೂಕಿನಲ್ಲಿ 40 ಮನೆ ಕುಸಿದಿವೆ .ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದರು.

ತಹಸೀಲ್ದಾರ್‌ ತನುಜ ಟಿ.ಸವದತ್ತಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಇಂದು ಯುವ ಶಕ್ತಿಯನ್ನು ಜಾಗೃತಗೊಳಿಸಬೇಕಾದ ಹೊಣೆ ನಮ್ಮೆಲ್ಲರ ದಾಗಿದೆ. ಯುವ ಪೀಳಿಗೆ ಕೇ‍ವಲ ಅಕ್ಷರ ಜ್ಞಾನ ಪಡೆದರೆ ಸಾಲದು. ಅದು ಸಂಸ್ಕಾರ ಸಂಪನ್ನವಾಗಬೇಕು. ಭಾರತದ ಕಡೆಗೆ ಅವರ ನಿಷ್ಠೆ ಅನಂತವೂ, ಕಳಂಕ ರಹಿತವೂ ಆಗಿರಬೇಕು.ರಾಷ್ಟ್ರೀಯತೆಗೆ ಬಂದ ಎಲ್ಲಾ ಅಡ್ಡಿ, ಆತಂಕಗಳನ್ನು ಎದುರಿಸಬೇಕು. ರಾಷ್ಟ್ರೀಯತೆ ಜ್ವಾಲೆಯಲ್ಲಿ ನಮ್ಮಲ್ಲಿನ ಜಾತಿ, ಮತ. ಪಂಥ, ಕೋಮು ಭಾವನೆಗಳೆಲ್ಲಾ ಸುಟ್ಟು ಭಸ್ಮವಾಗಬೇಕು. ನಮ್ಮಲ್ಲಿನ ಭೇದ, ಭಾವಗಳು ಮಾಯವಾಗಿ ನಮ್ಮ ಮನಸ್ಸುಗಳು ಒಂದಾಗಬೇಕು. ಆಗ ಮಾತ್ರ ನಾವು ನೈಜ ರಾಷ್ಟ್ರೀಯತೆ ಪ್ರತಿಪಾದಕರಾಗುತ್ತೇವೆ ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ತಾ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್‌, ತಾ.ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಮಾಜಿ ಸೈನಿಕ ಎಲ್‌.ಲೋಕೇಶ್‌, ಪೊಲೀಸ್‌ ಇಲಾಖೆ ಎಎಸ್‌ಐ ನಾಗರಾಜ ಹಾಗೂ ಕೆಇಬಿ ರಾಜಪ್ಪ ಅವರನ್ನು ಶಾಸಕರು ಹಾಗೂ ಅತಿಥಿಗಳು ಸನ್ಮಾನಿಸಿದರು.ಇದಕ್ಕೂ ಮೊದಲು ಕುವೆಂಪು ಕ್ರೀಡಾಂಗಣದಲ್ಲಿ ವಿವಿಧ ಶಾಲೆಗಳಿಂದ ಮಕ್ಕಳು ಹಾಗೂ ಪೊಲೀಸ್‌ , ಹೋಂ ಗಾರ್ಡ್ಸ ಪಥ ಸಂಚಲನ ನಡೆಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ, ಸುರೈಯಾ ಭಾನು, ಮಹಮ್ಮದ್ ವಸೀಂ, ಮುನಾವರ್ ಪಾಷಾ, ಉಮಾ ಕೇಶವ, ರೇಖಾ, ರೀನಾ,ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌.ಪುಷ್ಪಾ, ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು, ಕರ್ಣಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ, ಮುಖಂಡರಾದ ಇ.ಸಿ.ಜೋಯಿ, ಅಂಜುಂ, ಸಮೀರ, ಕೆ.ಎ.ಅಬೂಬಕರ್, ಡಿ.ರಾಮು, ಶಿವಣ್ಣ, ವಾಲ್ಮೀಕಿ ಶ್ರೀನಿವಾಸ್,ಭವಾನಿ, ಗುಣಪಾಲ್ ಜೈನ್ , ಎಚ್‌.ಮಂಜುನಾಥ್ ಉಪಸ್ತಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ