ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುವತ್ತ ಭಾರತ ದಾಪುಗಾಲು: ಹುಲ್ಲುಮನಿ ತಿಮ್ಮಣ್ಣ

KannadaprabhaNewsNetwork |  
Published : Jan 27, 2024, 01:19 AM IST
ಹೊನ್ನಾಳಿ ಫೋಟೋ 26ಎಚ್.ಎಲ್.ಐ1. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಚರಿಸಲಾದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಶಾಲಾ ಮಕ್ಕಳು ಇದ್ದರು.  | Kannada Prabha

ಸಾರಾಂಶ

ಭಾರತೀಯರು ಆಳಿಸಿಕೊಳ್ಳುವ ಜನ ಎಂದು ಬ್ರಿಟಿಷರು ಟೀಕಿಸುತ್ತಿದ್ದ ಕಾಲ ಕಳೆದು ಭಾರತೀಯರೇ ಇಂಗ್ಲೆಂಡ್ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ. ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯವ ನೋಟ ಎನ್ನುವ ನುಡಿಯಂತೆ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ ಸಂವಿಧಾನದಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವಂತೆ ಜನರು ಜೀವನ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ವಿವಿಧತೆಯಲ್ಲಿ ಏಕತೆಯ ಸಂಕೇತ. ಬೃಹತ್ ಲಿಖಿತ ಸಂವಿಧಾನದಡಿ ಐಕ್ಯತೆ ಸಾಧಿಸಿ 74 ವರ್ಷಗಳ ಕಳೆದು 75ನೇ ಗಣರಾಜ್ಯೋತ್ಸವ ಹೆಮ್ಮೆಯಿಂದ ಆಚರಿಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಸಹಯೋಗದೊಂದಿಗೆ ಶುಕ್ರವಾರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ದಿನ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತೀಯರು ಆಳಿಸಿಕೊಳ್ಳುವ ಜನ ಎಂದು ಬ್ರಿಟಿಷರು ಟೀಕಿಸುತ್ತಿದ್ದ ಕಾಲ ಕಳೆದು ಭಾರತೀಯರೇ ಇಂಗ್ಲೆಂಡ್ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ. ಸರ್ವ ಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯವ ನೋಟ ಎನ್ನುವ ನುಡಿಯಂತೆ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ ಸಂವಿಧಾನದಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವಂತೆ ಜನರು ಜೀವನ ನಡೆಸುತ್ತಿದ್ದಾರೆ. ಭಾರತ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಹಲವು ಜಾತಿ, ಧರ್ಮ, ಪಂಥಗಳ ನಡುವೆಯೂ ಏಕತಾ ಭಾವನೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ದಾಪುಗಾಲು ಇಡುತ್ತಿದೆ ಎಂದರು.

ಗಣರಾಜ್ಯೋತ್ಸವ ಅಂಗವಾಗಿ ಧ್ವಜವಂದನೆ, ಪೊಲೀಸ್, ಗೃಹರಕ್ಷಕ ದಳ, ಮಾಜಿ ಸೈನಿಕರು,ಹಾಗೂ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಕಾರ್ಯಕ್ರಮ ನಡೆಯಿತು. ನಂತರ ಪಟ್ಟಣದ ಹೆಸರಾಂತ ಶಿಲ್ಪಿ ಎಂ.ವಿ.ಕೋಟೇಶ್ವರಾಚಾರ್ಯ, ನಿವೃತ್ತ ಸೈನಿಕರು ಹಾಗೂ ನಿವೃತ್ತ ನೌಕರರ ಸನ್ಮಾನಿಸಲಾಯಿತು. ಅನೇಕ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ, ತಾಲೂಕು ಪಂಚಾಯಿತಿ ಇಒ ರಾಘವೇಂದ್ರ, ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಿರಂಜನಿ, ಬಿ.ಇ.ಓ,ನಂಜರಾಜ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ಬಂತಿ, ಮಾಜಿ ಸೈನಿಕ ವಾಸಪ್ಪ, ಪಿ.ಎಸ್.ಐ ಏಕಾಂತಪ್ಪ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಈಶ್ವರಪ್ಪ, ವಿವಿಧ ಇಲಾಖಾ ಅಧಿಕಾರಿಗಳು, ಶಾಲಾ ಶಿಕ್ಷಕರು, ಗಣ್ಯರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ