ಭಾರತದ ಪಂಚಾಂಗ ವಿಜ್ಞಾನಕ್ಕೆ ದೊಡ್ಡ ಕೊಡುಗೆ

KannadaprabhaNewsNetwork |  
Published : Sep 20, 2025, 01:03 AM IST
ಎಸ್‌ಬಿ ಕಲಾ ಮತ್ತು ಕೆಸಿಪಿ ಕಾಲೇಜಿನಲ್ಲಿ ಎನರ್ಜಿ ಎನ್ವಿರಾನ್ಮೆಂಟ್ ಆ್ಯಂಡ್ ಮಟೇರಿಯಲ್ಸ್ ಸೈನ್ಸ್ ಪ್ರೋಗ್ರಾಂ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ ಪೂರ್ವಜರು ನಕ್ಷತ್ರಗಳ ಆಧಾರದ ಮೇಲೆ ಪಂಚಾಂಗ ನಿರ್ಮಾಣ ಮಾಡಿದ್ದಾರೆ. ಭಾರತದ ಪಂಚಾಂಗ ನಿರ್ಮಾತೃಗಳು ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಿಎಲ್‌ಡಿಇ ಸಂಸ್ಥೆ ಸಮಕುಲಾಧಿಪತಿ ಡಾ.ವೈ.ಎಂ.ಜೈಯರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮ ಪೂರ್ವಜರು ನಕ್ಷತ್ರಗಳ ಆಧಾರದ ಮೇಲೆ ಪಂಚಾಂಗ ನಿರ್ಮಾಣ ಮಾಡಿದ್ದಾರೆ. ಭಾರತದ ಪಂಚಾಂಗ ನಿರ್ಮಾತೃಗಳು ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಿಎಲ್‌ಡಿಇ ಸಂಸ್ಥೆ ಸಮಕುಲಾಧಿಪತಿ ಡಾ.ವೈ.ಎಂ.ಜೈಯರಾಜ್ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ, ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಎನ್‌ಟಿಪಿಸಿ ಕೂಡಗಿ, ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜಂಟ್ ಲಿಮಿಟೆಡ್ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎನರ್ಜಿ ಎನ್ವಿರಾನ್ಮೆಂಟ್ ಆ್ಯಂಡ್ ಮಟಿರಿಯಲ್ಸ್ ಸೈನ್ಸ್ ಎಂಬ ವಿಷಯದ ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ವಿಶ್ವ ವಿಸ್ಮಯಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಸಾವಿರಾರು ನಕ್ಷತ್ರಗಳು, ಸೂರ್ಯ ನಮ್ಮ ಪ್ಲಾನೆಟ್ ಸಿಸ್ಟಮ್ ಮುಂದೆ ನಾವುಗಳು ಅತಿ ಸಣ್ಣವರು. ಇಂದಿನ ಯುವ ಸಮುದಾಯ ಸಂಶೋಧನೆಗಳ ಮೂಲಕ ಮರುಬಳಕೆ ಶಕ್ತಿ, ಪರಿಸರ ಹಾಗೂ ಸಾಮಗ್ರಿಗಳ ಬಗ್ಗೆ ವಿಜ್ಞಾನ ಲೋಕಕ್ಕೆ ಕೊಡುಗೆ ನೀಡಬೇಕು ಎಂದರು.

ಸೂರ್ಯ ಕೇವಲ ಸುಡುವ ಉಂಡೆಯಲ್ಲ. ಸೂರ್ಯನಲ್ಲೂ ಹಿಲೀಯಂ ಸೇರಿದಂತೆ ಅನೇಕ ಶಕ್ತಿ ಸಂಪನ್ಮೂಲವಿದೆ. ಭಾರತದಲ್ಲಿ ನಾವು ಪಂಚಭೂತಗಳು ಎಂದು ಕರೆಯುವ ಗಾಳಿ, ಬೆಂಕಿ ನೀರು ಶಕ್ತಿಯ ರೂಪಗಳು. ಭಾರತದಲ್ಲಿ ವಿಂಡ್ ಎನರ್ಜಿ ಬಹಳಷ್ಟು ಬಳಕೆಯಾಗುತ್ತಿದೆ. ನಾವೆಲ್ಲ ಅದನ್ನು ನೋಡಿದ್ದು, 21ನೇ ಶತಮಾನವು ಕೇವಲ ನ್ಯಾನೋ ಬೇಸಡ್ ತಂತ್ರಜ್ಞಾನವಿಲ್ಲ. ಇದೊಂದು ಡಿಜಿಟಲ್ ಯುಗವಾಗಿದೆ. ಇಂದು ಎಐ ತಂತ್ರಜ್ಞಾನ ಅತೀ ಹೆಚ್ಚು ಬಳಕೆಯಾಗುತ್ತಿದೆ. ಎನರ್ಜಿ, ಎನ್ವಿರಾನ್‌ಮೆಂಟ್‌ ಹಾಗೂ ಹೊಸ ಮಟೇರಿಯಲ್ಸ್‌ಗಳು ವಿಜ್ಞಾನವನ್ನು ಇನ್ನೂ ಹೆಚ್ಚಿನ ಸಂಶೋಧನೆಗೆ ತೆಗೆದುಕೊಂಡು ಹೋಗುತ್ತಿವೆ ಎಂದು ಅಭಿಪ್ರಾಯ ಪಟ್ಟರು.

ಸೋಲಾಪುರದ ಸಿಆರ್‌ಟಿಡಿ ಸಿಂಘದ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಎಚ್.ಪವಾರ ಮಾತನಾಡಿ, ಎನರ್ಜಿ, ಎನ್ವಿರಾನ್ಮೆಂಟ್‌ ಹಾಗೂ ಮಟೇರಿಯಲ್ ಸೈನ್ಸ್ ಮಹತ್ವದ ವಿಷಯ. ನೋ ಎನರ್ಜಿ ನೋ ಲೈಫ್ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಎನರ್ಜಿ ಮತ್ತು ಎನ್ವಿರಾನ್ಮೆಂಟ್‌ ಒಂದು ನಾಣ್ಯದ ಎರಡು ಮುಖಗಳು. ಪರಿಸರ ಸಮತೋಲನ ಕಾಪಾಡಿಕೊಳ್ಳಲು ನಾವು ಸೋಲಾರ ಎನರ್ಜಿ ಬಳಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ದೇಶದಲ್ಲಿ ಸೋಲಾರ್‌ ಎನರ್ಜಿ ಬಳಕೆ ಕುರಿತಾಗಿ ಹಲವಾರು ಸಂಸ್ಥೆಗಳು ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ನಿರತವಾಗಿವೆ. ಯುವಕರು ನಿರಂತರ ಸಂಶೋಧನೆಗಳನ್ನು ಮಾಡಿ ಮರುಬಳಕೆ ಇಂಧನಗಳ ಬಗ್ಗೆ ಹೊಸ ಆವಿಷ್ಕಾರಗಳನ್ನು ಮಾಡಬೇಕು. ಪೆಟ್ರೋಲ್ ಹಾಗೂ ಡಿಸೇಲ್ ಮರು ಉತ್ಪಾದಿಸಲಾಗದ ಎನರ್ಜಿ ಆದರೆ ಸೋಲಾರ್‌ ಎನರ್ಜಿ ನಿರಂತರವಾಗಿ ನಾವು ಬಳಸಿಕೊಂಡರೂ ಅದು ಮುಗಿದು ಹೋಗುವುದಿಲ್ಲ. ಹಸಿರು ಶಕ್ತಿ ಬಳಕೆ ಪರಿಸರ ಸ್ನೇಹಿಯಾಗಿದೆ ಎಂದು ಹೇಳಿದರು.

ದಕ್ಷಿಣ ಕೊರಿಯಾದ ಚೋನಮ್ ನ್ಯಾಷನಲ್ ವಿಶ್ವವಿದ್ಯಾಲಯದ ಡಾ.ಸಾವಂತ್ ಮಾಳಿ, ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ವಿ.ಎಸ್.ಬಗಲಿ, ಪ್ರಾಚಾರ್ಯೆ ಡಾ.ಆರ್‌.ಎಂ.ಮಿರ್ಧೆ, ಉಪ ಪ್ರಾಚಾರ್ಯ ಡಾ.ಅನಿಲ ನಾಯಕ, ಡಾ.ಗೀರಿಜಾ ನಿಂಬಾಳ, ಡಾ.ಮಹೇಶಕುಮಾರ.ಕೆ, ಡಾ.ಪಿ.ಎಸ್.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.ಕೋಟ್‌ಎನ್‌ಟಿಪಿಸಿ ದೇಶದ ಅತೀ ದೊಡ್ಡ ಎಲೆಕ್ಟ್ರಿಕ್ ಎನರ್ಜಿ ಕಂಪನಿ. ಮೈನಿಂಗ್ ಮೂಲಕ ಕಲ್ಲಿದ್ದಿಲು ಸೇರಿದಂತೆ ಸಾಮಗ್ರಿಗಳನ್ನು ಬಳಸಿಕೊಂಡು ರಾತ್ರಿ ಹಗಲು ನಿರಂತರ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಅಮೆರಿಕಗಿಂತಲೂ ಭಾರತದ ಜನಸಂಖ್ಯೆ ದೊಡ್ಡದಿದೆ. ಎಲ್ಲರಿಗೂ ವಿದ್ಯುತ್ ಪೂರೈಕೆ ಆಗಬೇಕು. ದೇಶದ ಶೇ.25 ರಷ್ಟು ವಿದ್ಯುತ್ ಪೂರೈಕೆಯನ್ನು ಎನ್‌ಟಿಪಿಸಿ ಮಾಡುತ್ತಿದೆ. ಅದರಲ್ಲೂ ಕೂಡಗಿ ಥರ್ಮಲ್ ಪ್ಲಾಂಟ್ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಕರ್ನಾಟಕದ ಅತೀ ದೊಡ್ಡ ಪವರ್ ಪ್ಲಾಂಟ್ ಆಗಿದೆ.ಮಧು.ಎಸ್, ಕೂಡಗಿ ಎನ್‌ಟಿಪಿಸಿ ಪ್ರಧಾನ ವ್ಯವಸ್ಥಾಪಕ

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ