ಚಿಕ್ಕಮಗಳೂರುಭಾರತ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ಕೈಗಾರಿಕಾ ಕ್ಷೇತ್ರಗಳು ಪ್ರಗತಿಯಾಗುವ ಮೂಲಕ ಹೆಚ್ಚು ಉತ್ಪಾದನೆ ಮಾಡಿದಾಗ ಮಾತ್ರ ಆರ್ಥಿಕ ಪ್ರಗತಿಯಾಗುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ ಮಹೇಶ್ ಕುಮಾರ್ ತಿಳಿಸಿದರು.
ಭಾರತ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ಕೈಗಾರಿಕಾ ಕ್ಷೇತ್ರಗಳು ಪ್ರಗತಿಯಾಗುವ ಮೂಲಕ ಹೆಚ್ಚು ಉತ್ಪಾದನೆ ಮಾಡಿದಾಗ ಮಾತ್ರ ಆರ್ಥಿಕ ಪ್ರಗತಿಯಾಗುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ ಮಹೇಶ್ ಕುಮಾರ್ ತಿಳಿಸಿದರು.ಇಂದು ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು, ಟೆಕ್ಸಾಕ್ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಎಂಎಸ್‌ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ರ್‍ಯಾಂಪ್ ಯೋಜನೆಯಡಿ ಬಿಜಿನೆಸ್ ಡೆವಲಪ್‌ಮೆಂಟ್ ಸರ್ವೀಸಸ್ ಪ್ರೊವೈಡರ್ ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಎಂಎಸ್‌ಎಂಇ ಅಂದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಎಂಬುದಾಗಿದ್ದು, ಉತ್ಪಾದನೆ ಮತ್ತು ಸೇವೆ ಕೊಡುವ ಉದ್ದಿಮೆಗಳ ಜೊತೆಗೆ ಎಂಎಸ್‌ಎಂಇ ರಿಟೇಲ್ ಬಿಜಿನೆಸ್ ಎಂದು ವರ್ಗೀಕರಣ ಮಾಡಲಾಗಿದೆ ಎಂದರು.ಕೇಂದ್ರಸರ್ಕಾರ ವ್ಯಾಪಾರ ಮಾಡುವವರಿಗಾಗಿ ಈ ಯೋಜನೆ ಜಾರಿಗೆ ತರಲಾಗಿದ್ದು, ಸಬ್ಸಿಡಿ ನೀಡಿ ಉದ್ಯಮಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ₹೨.೫೦ ಕೋಟಿವರೆಗೆ ಬಂಡವಾಳ ಹೂಡುವವರಿಗೆ ಮೈಕ್ರೋ ಇಂಡಸ್ಟ್ರಿ ₹೨.೫೦ ಕೋಟಿಯಿಂದ ₹೨೦ ಕೋಟಿ ಹೂಡಿಕೆದಾರರಿಗೆ ಸಣ್ಣ ಕೈಗಾರಿಕೆಗಳು ಹಾಗೂ ₹೨೫ ಕೋಟಿಯಿಂದ ₹೧೨೫ ಕೋಟಿವರೆಗೆ ಬಂಡವಾಳ ಹೂಡುವವರಿಗಾಗಿ ಮಧ್ಯಮ ಕೈಗಾರಿಕೆಗಳು ಎಂದು ಹೇಳಿದರು.ಅತೀ ಹೆಚ್ಚು ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಎಂಎಸ್‌ಎಂಇ ಗೆ ಆದ್ಯತೆ ನೀಡಲಾಗುತ್ತಿದೆ. ಕೃಷಿಯಿಂದ ದೇಶದ ಗ್ರಾಮೀಣ ಭಾಗದಲ್ಲಿ ಹೆಚ್ಚು ಉದ್ಯೋಗ ನಡೆಯುತ್ತಿದೆ. ಇದನ್ನು ಹೊರತುಪಡಿಸಿ ಕೈಗಾರಿಕೆಗಳಲ್ಲಿ ಸೇವಾ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಳಾಗಿಲ್ಲ ಎಂದು ತಿಳಿಸಿದರು.ಪಕ್ಕದ ಚೈನಾ, ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ ಈ ದೇಶಗಳು ಕೈಗಾರಿಕೆಗಳಲ್ಲಿ ಸಾಧನೆ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿವೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳು ಹೆಚ್ಚು ಬೆಳೆದಾಗ ಮಾತ್ರ ದೇಶದ ಆರ್ಥಿಕ ಪ್ರಗತಿಯಾಗುತ್ತದೆ ಎಂದು ಹೇಳಿದರು.ಆಹಾರ ಭದ್ರತೆಗಾಗಿ ಕೃಷಿ ಪ್ರಾಥಮಿಕ ಹಂತದಲ್ಲಿ ಯಶಸ್ಸು ಸಾಧಿಸಿದೆ, ಕೈಗಾರಿಕೆ ಸ್ಥಾಪನೆಯಲ್ಲಿ ಸ್ಪಲ್ಪಮಟ್ಟಿನ ಹಿನ್ನೆಡೆ ಯಾಗಿದ್ದು, ಈಗ ಕೈಗಾಕೆಗಳ ಸ್ಥಾಪನೆಗೆ ಮಿತಿ ಇಲ್ಲ. ಸಾಧನೆ ಮಾಡಲು ಕೈಗಾರಿಕೆಗಳು ಹೆಚ್ಚಾಗಿ ಉತ್ಪಾದನೆ ಮಾಡಿದಾಗ ರಫ್ತು ಮಾಡಲು ಸಹಕಾರವಾಗುತ್ತದೆ ಎಂದರು.ಬಿಜಿನೆಸ್ ಡೆವಲಪ್‌ಮೆಂಟ್ ಸರ್ವೀಸಸ್ ಪ್ರೊವೈಡರ್ ಎಂಬ ಕಾರ್ಯಕ್ರಮ ಎಂಎಸ್‌ಎಂಇಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವುಗಳಿಗೆ ಉತ್ತೇಜನ ನೀಡಲು ಉದ್ಯೋಗಾಸಕ್ತರಿಗೆ ತರಬೇತಿ ನೀಡಿ ಸ್ವ-ಉದ್ಯೋಗ ಸ್ಥಾಪನೆಗೆ ಗುರಿ ಹೊಂದಲಾಗಿದೆ. ವಸ್ತು ತಯಾರಿಸಿ ಸೇವೆ ಒದಗಿಸುವುದಕ್ಕೆ ಉದ್ಯಮಗಳು ಎಂದು ಕೆರೆಯುತ್ತೇವೆಂದರು.ಸ್ಪರ್ಧಾತ್ಮಕವಾದ ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಕೇಂದ್ರಸರ್ಕಾರ ರ್‍ಯಾಂಪ್ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿ ಸಮಾಜದ ಮುನ್ನಲೆಗೆ ತರಲು ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಈ ರೀತಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಕಾಸಿಯ ಸದಸ್ಯ ಸುಭಾಷ್ ಭಟ್ ಮಾತನಾಡಿ, ಸ್ವ-ಉದ್ಯೋಗ ಸ್ಥಾಪಿಸುವ ಮೂಲಕ ಆರ್ಥಿಕ ಸದೃಢರಾಗಬೇಕೆಂದು ಕರೆನೀಡಿದ ಅವರು, ಇದಕ್ಕೆ ಅಗತ್ಯ ಇರುವ ತರಬೇತಿ ಪಡೆದು ಸಾರ್ವಜನಿಕರಿಗೆ ಅಗತ್ಯ ಇರುವ ವಸ್ತುಗಳ ತಯಾರಿಕೆಗೆ ಆದ್ಯತೆ ನೀಡಬೇಕೆಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಸಣ್ಣ ಉದ್ಯಮಗಳ ಬಗ್ಗೆ ಉದಾಸೀನ ಮನೋಭಾವ ತಾಳುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜೊತೆಗೆ ಸ್ವ-ಉದ್ಯೋಗ ಸ್ಥಾಪಿಸಿ ನಾಲ್ಕು ಜನರಿಗೆ ಉದ್ಯೋಗ ನೀಡುವಂತಾಗಲಿ ಎಂದು ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಇಂದ್ರೇಶ್ ಎನ್.ಎ ಮಾತನಾಡಿ, ಕೇಂದ್ರ ಸರ್ಕಾರ ಮುದ್ರಾ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೆ ಸ್ವ-ಉದ್ಯೋಗ ಸ್ಥಾಪನೆಗೆ ಸಾಲಸೌಲಭ್ಯ ನೀಡಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆನೀಡಿದರು.ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಚ್.ಎನ್ ಮಹೇಶ್, ಮಂಜೇಗೌಡ, ಭರತ್, ರವಿಚಂದ್ರ, ಕೃಷ್ಣ ಮೂರ್ತಿ, ವಿರೂಪಾಕ್ಷ ಉಪಸ್ಥಿತರಿದ್ದರು. ಮೊದಲಿಗೆ ಉಪನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.