ದಾಬಸ್‍ಪೇಟೆ: ದೇಶದ ಅಭ್ಯುದಯಕ್ಕಾಗಿ ಸಂವಿಧಾನ ಅಂಗೀಕರಿಸಿದ ದಿನವನ್ನು ನಮ್ಮಲ್ಲಿ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ನಡೆಯುವ ಗಣರಾಜ್ಯೋತ್ಸವ ಮಹನೀಯರ ಕೊಡುಗೆಗಳ ಸ್ಮರಿಸುವ ಹಬ್ಬ ಎಂದು ಉಪ ತಹಸೀಲ್ದಾರ್ ಶಶಿಧರ್ ತಿಳಿಸಿದರು. ಪಟ್ಟಣದ ಉಪ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ನೀಡಿದ ಸಂವಿಧಾನ ನಮ್ಮನ್ನು ಇದುವರೆಗೂ ಕಾಪಾಡಿಕೊಂಡು ಬಂದಿದ್ದು, ಭವ್ಯ ಭಾರತದ ಭವಿಷ್ಯವೂ ಸಂವಿಧಾನದಿಂದ ಸದೃಢವಾಗಿದೆ. ಅದನ್ನ ಗೌರವಯುತವಾಗಿ ಪಾಲಿಸುವುದೇ ನಿಜವಾದ ಆಚರಣೆ ಎಂದರು. ರಾಜಸ್ವ ನಿರೀಕ್ಷಕರಾದ ಮುನಿರಾಜು ಹಾಗೂ ಸುಂದರರಾಜ್ ಮಾತನಾಡಿ, ದೇಶದ ಪ್ರಜ್ಞಾವಂತ ನಾಗರಿಕರಾದ ನಾವು ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿಗಳ ಭಿನ್ನತೆಯನ್ನು ಮರೆತು ಏಕತೆ ಮತ್ತು ಸೃಜನಶೀಲ ಮನೋಭಾವದೊಂದಿಗೆ ರಾಷ್ಟ್ರನಿರ್ಮಾಣ ಕಾಯಕದಲ್ಲಿ ತೊಡಗಬೇಕು ಎಂದರು. ಗ್ರಾಮ ಲೆಕ್ಕಿಗರಾದ ಬಾಲಕೃಷ್ಣ, ಲೋಕೇಶ್, ಗೋಪಾಲ್, ನವೀನ್, ವರ್ಷಿತ, ಕಂಪ್ಯೂಟರ್ ಅಪರೇಟರ್ ಗಳಾದ ಹನುಮಂತರಾಜು, ಗಂಗಾಧರ್ ಸೇರಿ ಗ್ರಾಮ ಸೇವಕರು ಉಪಸ್ಥಿತರಿದ್ದರು.