ಭಾರತದ ತಿರಂಗ ರಾಷ್ಟ್ರದ ಅಸ್ಮಿತೆಯ ಪ್ರತೀಕ: ದೀಪಾ

KannadaprabhaNewsNetwork | Published : Aug 11, 2024 1:31 AM

ಸಾರಾಂಶ

ಬಾಳೆಹೊನ್ನೂರು, ಭಾರತದ ತಿರಂಗ ನಮ್ಮ ರಾಷ್ಟ್ರದ ಅಸ್ಮಿತೆಯ ಪ್ರತೀಕವಾಗಿದೆ ಎಂದು ಶಿಕ್ಷಕಿ ದೀಪಾ ಅಭಿಪ್ರಾಯ ಪಟ್ಟರು.ಪಟ್ಟಣದ ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರಧ್ವಜದ ಮಹತ್ವ ಹಾಗೂ ಶಾಲೆಗೆ ಪೀಠೋಪಕರಣ ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

- ತಾಲೂಕು ಕಸಾಪ, ರೋಟರಿ-ಲಯನ್ಸ್ ಕ್ಲಬ್ ಸಹಯೋಗದಲ್ಲಿ ರಾಷ್ಟ್ರಧ್ವಜದ ಮಹತ್ವ ಕುರಿತ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭಾರತದ ತಿರಂಗ ನಮ್ಮ ರಾಷ್ಟ್ರದ ಅಸ್ಮಿತೆಯ ಪ್ರತೀಕವಾಗಿದೆ ಎಂದು ಶಿಕ್ಷಕಿ ದೀಪಾ ಅಭಿಪ್ರಾಯ ಪಟ್ಟರು.

ಪಟ್ಟಣದ ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರಧ್ವಜದ ಮಹತ್ವ ಹಾಗೂ ಶಾಲೆಗೆ ಪೀಠೋಪಕರಣ ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರಧ್ವಜ ನಮ್ಮ ದೇಶದ ಹೆಗ್ಗುರುತು. ಇದು ನಮ್ಮ ಆಸೆ, ಆಕಾಂಕ್ಷೆ, ರಾಷ್ಟ್ರೀಯ ಗೌರವದ ಗುರುತು ಸಹ ಆಗಿದೆ. ಧ್ವಜದ ಗೌರವ ಕಾಪಾಡಲು ದೇಶದ ಸೈನಿಕಪಡೆ ರಾತ್ರಿ ಹಗಲು ಎನ್ನದೇ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಬಲಿದಾನಕ್ಕೂ ಸೈನಿಕರು ಸಿದ್ಧರಾಗಿರುತ್ತಾರೆ. ಧ್ವಜದ ಒಂದೊಂದು ಬಣ್ಣವು ಒಂದೊಂದು ಅರ್ಥವನ್ನು ಸೂಚಿಸಲಿದ್ದು, ರಾಷ್ಟ್ರ ಧ್ವಜದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕೆಲಸವೂ ಆಗಿದೆ. ನಮ್ಮ ರಾಷ್ಟ್ರ ಧ್ವಜಕ್ಕಾಗಿ ಅನೇಕ ಬಲಿದಾನಗಳು ನಡೆದಿವೆ, ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಂಡು ದೇಶಕ್ಕೆ ಗೌರವ ನೀಡಬೇಕಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಂದು ಕನ್ನಡ ಭಾಷೆ ರಾರಾಜಿಸುತ್ತಿದ್ದು, ಎನ್.ಆರ್.ಪುರ ತಾಲೂಕು ಕಸಾಪ ಪ್ರತಿ ಮಾಸದಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು, ಮನೆಯಂಗಳದಲ್ಲಿ ನಡೆಸುವ ಮೂಲಕ ಸಾಹಿತ್ಯ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ ಮಾತನಾಡಿ, ತಾಲೂಕು ಕಸಾಪ ರೋಟರಿ, ಲಯನ್ಸ್ ಸಂಸ್ಥೆಯೊಂದಿಗೆ ಸೇರ್ಪಡೆಗೊಂಡು ಸಾಹಿತ್ಯ ಕಾರ್ಯಕ್ರಮದೊಂದಿಗೆ ಶಾಲಾ ಕಾಲೇಜುಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಯತ್ತ ಗಮನಹರಿಸಿದೆ. ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆ ನಡೆಸುತ್ತ ಕಸಾಪದ ಚಟುವಟಿಕೆಗಳನ್ನು ಮನೆ ಮನಕ್ಕೆ ತಲುಪಿಸಲಾಗುತ್ತಿದೆ ಎಂದರು.

ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು ಮಾರ್ಗದರ್ಶನ ನೀಡಲಿದ್ದು, ಸಂಸ್ಥೆಗಳ ಕೆಲಸ ಗಮನಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ರೋಟರಿ, ಲಯನ್ಸ್ ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಸಂಪನ್ಮೂಲ ಕ್ರೋಢೀಕರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿವೆ ಎಂದರು.ರೋಟರಿ ಹಾಗೂ ಲಯನ್ಸ್ ಕ್ಲಬ್ ನಿಂದ ಇದೇ ಸಂದರ್ಭದಲ್ಲಿ ಶಾಲೆಗೆ ಸ್ಟೀಲ್ ಟೇಬಲ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.ಮುಖ್ಯಶಿಕ್ಷಕ ಸೋಮಶೇಖರ್, ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಕಾರ್ಯದರ್ಶಿ ಬಿ.ಎಸ್.ಸಾಗರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ, ಕಾರ್ಯದರ್ಶಿ ಎಂ.ನಾರಾಯಣ್ ಮೇಲ್ಪಾಲ್, ಪೂರ್ವಾಧ್ಯಕ್ಷ ಎಂ.ಡಿ.ಶಿವರಾಮ್, ಎನ್.ಸಿ.ಸುಬ್ರಮಣ್ಯ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್, ಕಸಾಪ ಕಾರ್ಯದರ್ಶಿ ಬಿ.ಎಂ.ಶ್ರೀಚೇತನಾ, ಪ್ರಮುಖರಾದ ಶೇಖರ್ ಇಟ್ಟಿಗೆ, ರವೀಂದ್ರ ಕೊಬಡೆ, ವಿಲಾಸ್ ಕುಡ್ವ, ಮಹೇಶ್, ನಿಶ್ಮಿತಾ ಮತ್ತಿತರರು ಇದ್ದರು.೧೦ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಸರ್ಕಾರಿ ಸುವರ್ಣ ಮಾದರಿ ಶಾಲೆಯಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ರಾಷ್ಟ್ರ ಧ್ವಜದ ಮಹತ್ವ ಉಪನ್ಯಾಸ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ಉದ್ಘಾಟಿಸಿದರು. ಪೂರ್ಣೇಶ್, ಸತೀಶ್ ಅರಳೀಕೊಪ್ಪ, ಶ್ರೀನಿವಾಸಗೌಡ, ಸೋಮಶೇಖರ್ ಇದ್ದರು.

Share this article