ಆಪರೇಷನ್‌ ಸಿಂದೂರದ ಮೂಲಕ ಭಾರತದ ಶಕ್ತಿ ಸಾಬೀತು

KannadaprabhaNewsNetwork | Published : May 16, 2025 1:48 AM
Follow Us

ಸಾರಾಂಶ

ಆಪರೇಷನ್‌ ಸಿಂದೂರದ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದ್ದ ಗುರುವಾರ ತಾಲೂಕು ಬಿಜೆಪಿ ಹಾಗೂ ಜೆಡಿಎಸ್‌ ಘಟಕದ ನೂರಾರು ಮಂದಿ ಕಾರ್ಯಕರ್ತರು ತಿರಂಗ ಯಾತ್ರೆ ನಡೆಸಿ ಭಾರತದ ಸೇನೆಗೆ ಅಭಿನಂದನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ ಆಪರೇಷನ್‌ ಸಿಂದೂರದ ಮೂಲಕ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದ್ದ ಗುರುವಾರ ತಾಲೂಕು ಬಿಜೆಪಿ ಹಾಗೂ ಜೆಡಿಎಸ್‌ ಘಟಕದ ನೂರಾರು ಮಂದಿ ಕಾರ್ಯಕರ್ತರು ತಿರಂಗ ಯಾತ್ರೆ ನಡೆಸಿ ಭಾರತದ ಸೇನೆಗೆ ಅಭಿನಂದನೆ ಸಲ್ಲಿಸಿದರು.

ಸಂಜೆ 5ಗಂಟೆಗೆ ಪಟ್ಟಣದ ಟೋಲ್‌ಗೇಟ್‌ ಬಳಿ ಜಮಾಯಿಸಿದ ದೇಶ ಭಕ್ತರು, ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿ ಭಾರತ ಸೇನೆ ಪರ ಜೈಕಾರ ಮೊಳಗಿಸಿದರು. ಬಳಿಕ ಬಳ್ಳಾರಿ ರಸ್ತೆ ಮೂಲಕ ಎಸ್‌ಎಸ್‌ಕೆ ವೃತ್ತದವರೆವಿಗೆ ತಿರಂಗಯಾತ್ರೆ ನಡೆಸಿದ ಎರಡು ಪಕ್ಷದ ಕಾರ್ಯಕರ್ತರು, ಜೈ ಭಾರತ ಎಂಬ ಘೋಷಣೆ ಮೊಳಗಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಸೇನೆಗೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಶ್ರಿಶನೇಶ್ವರಸ್ವಾಮಿ ವೃತ್ತದ ಬಳಿ ಈ ಭಾಗದ ಚಿತ್ರದುರ್ಗ ಲೋಕಸಭಾ ಸಂಸದರಾದ ಗೋವಿಂದ ಎಂ.ಕಾರಜೋಳ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಪದೇ ಪದೇ ಅಕ್ರಮ ದಾಳಿ ನಡೆಯುವ ಮೂಲಕ ಭಾರತಕ್ಕೆ ಹಾನಿ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಪ್ರಧಾನಿ ನೇತೃತ್ವದ ಭಾರತ ಸೇನೆ ಸರಿಯಾದ ಪಾಠ ಕಲಿಸಿದೆ. ಪ್ರಧಾನಿ ತೆಗೆದುಕೊಂಡ ನಿರ್ಣಯ ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ. ಪಾಕಿಸ್ತಾನದ ಭಯೋತ್ಪಾದಕರನ್ನು ಮಟ್ಟ ಹಾಕಿ ಭಾರತದ ಶಕ್ತಿ ಏನು ಎಂಬುವುದು ಸಾಬೀತುಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಭಾರತ ಸೇನೆ ತೆಗೆದುಕೊಂಡ ನಿರ್ಣಯ ಅತ್ಯಂತ ಸೂಕ್ತವಾಗಿದೆ. ವಿಶ್ವದಲ್ಲಿ ಭಾರತ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಿದ್ದು ಸಂತಸಕರ ವಿಚಾರ. ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನ ಮಟ್ಟಹಾಕಲು ಸರಿಯಾದ ದಿಕ್ಕಿನಲ್ಲಿ ಹೋರಾಟ ನಡೆಸಿದ್ದ ಭಾರತದ ಸೇನೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ವೇಳೆ ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಸಮಾಜ ಸೇವಕ ನಾಗೇಂದ್ರಕುಮಾರ್‌, ಕೊರಟಗೆರೆ ಅನಿಲ್‌ಕುಮಾರ್‌,ಜಿಲ್ಲಾ ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾವಗಡದ ಪುರುಷೋತ್ತಮಗೌಡ, ಪಾಕಿಸ್ತಾನದ ವಿರುದ್ಧ ಭಾರತ ಸೇನೆಯ ಕೈಗೊಂಡಿದ್ದ ನಿರ್ಣಯ ಹಾಗೂ ಧ್ವಂಸದ ನಿಲುವಿನ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್‌ , ಡಾ.ಜಿ.ವೆಂಕಟರಾಮಯ್ಯ,ಮೆಡಿಕಲ್‌ ದೇವರಾಜ್‌,ಮುರಳಿ ನೆಲಗಾನಹಳ್ಳಿ ಮಂಜುನಾಥ್‌ ಹಾಗೂ ಇತರೆ ನೂರಾರು ಮಂದಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.