ಉಡುಪಿ: ಕೃಷ್ಣನೂರಿನಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆ ಆರಂಭ

KannadaprabhaNewsNetwork |  
Published : Aug 11, 2024, 01:35 AM IST
ಸ್ವೀಟ್‌ಹೌಸ್10 | Kannada Prabha

ಸಾರಾಂಶ

ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆ ಉದ್ಘಾಟನೆಗೊಂಡಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಶುಭಹಾರೈಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಆರೋಗ್ಯಕ್ಕೆ ಹಾಗೂ ಅನಾರೋಗ್ಯಕ್ಕೆ ಆಹಾರವೇ ಮುಖ್ಯ ಕಾರಣವಾಗಿರುತ್ತದೆ. ಭಾರತೀಯ ಸಿಹಿ ಮನೆ ಉಡುಪಿಯಲ್ಲಿ ಆರಂಭವಾಗಿದೆ. ಉಡುಪಿಯ ಕೃಷ್ಣ ಸಿಹಿ ಪ್ರಿಯ, ಇಂತಹ ಕೃಷ್ಣನೂರಿನಲ್ಲಿ ಸಿಹಿ ಮನೆ ಆರಂಭವಾಗಿರುವುದು ಸಂಭ್ರಮಕ್ಕೆ ಕಾರಣವಾಗಿದೆ ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.ಅವರು ಉಡುಪಿಯಲ್ಲಿ ಇಂಡಿಯಾ ಸ್ವೀಟ್ ಹೌಸ್ 31ನೇ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಸಿಹಿತಿಂಡಿ ಮಳಿಗೆ ಎಂಬ ಹೆಗ್ಗಳಿಕೆಗೆ ಇಂಡಿಯಾ ಸ್ವೀಟ್ ಹೌಸ್ ಮಳಿಗೆ ಪಾತ್ರ ಆಗಿದೆ. ಕೇವಲ ಮೂರು ವರ್ಷಗಳಲ್ಲಿ ಇಂಡಿಯಾ ಸ್ವೀಟ್ ಹೌಸ್‌ನ 31ನೇ ಮಳಿಗೆ ಉದ್ಘಾಟನೆ ಆಗಿರುವುದು ಇದರ ಅಭಿವೃದ್ಧಿಗೆ ಸಾಕ್ಷಿ. ಅಧಿಕೃತ ಭಾರತೀಯ ಸಿಹಿ ತಿಂಡಿಗಳು ಮತ್ತು ಖಾರಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಗೆ ಈ ಬೆಳವಣಿಗೆ ಸಾಕ್ಷಿ ಆಗಿದೆ ಎಂದರು.

ಹಿರಿಯ ನಟ ಸಿಹಿಕಹಿ ಚಂದ್ರು ಮಾತನಾಡಿ, ಇಂಡಿಯಾ ಸ್ವೀಟ್ ಹೌಸ್ ಪ್ರಾರಂಭ ಮಾಡಿರುವುದರ ಹಿಂದೆ ಸಾಕಷ್ಟು ಶ್ರಮ ಇದೆ. ಮೂರು ವರ್ಷಗಳ ಹಿಂದೆ ಆರಂಭಗೊಂಡಿರುವ ಇಂಡಿಯಾ ಸ್ವೀಟ್ ಹೌಸ್ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದೆ. ಈ ಸಂಸ್ಥೆಯಲ್ಲಿ ದುಡಿಯುವ ಎಲ್ಲ ವರ್ಗ ನಮ್ಮದೇ ಸಿಹಿ ಸಂಸ್ಥೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಶ್ವನಾಥ್ ಮೂರ್ತಿ ಮಾತನಾಡಿ, ಇಂಡಿಯಾ ಸ್ವೀಟ್ ಹೌಸ್ ಭಾರತೀಯ ಸಿಹಿ ತಿಂಡಿಗಳ ವೈವಿಧ್ಯಮಯ ಶ್ರೇಣಿ ಹೊಂದಿದೆ. ಇಲ್ಲಿ ಗ್ರಾಹಕರು ಅಭಿರುಚಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮೈಸೂರು ಪಾಕ್ ಜತೆಗೆ ಬೆಂಗಾಲಿ ಸಿಹಿ ತಿಂಡಿಗಳಾದ ಕ್ಷೀರ್ ಮೋಹನ್ ಮತ್ತು ರಸ್ಮಂಜೂರಿ ಕೂಡ ಸವಿಯಬಹುದು. ಉತ್ತರ ಭಾರತದ ನೆಚ್ಚಿನ ತಿಂಡಿಗಳಾದ ಗುಲಾಬ್ ಜಾಮೂನ್, ಜಲೇಬಿಯಿಂದ ಹಿಡಿದು ರಾಜಸ್ಥಾನದ ಡ್ರೈಫ್ರೂಟ್ ಪೇಡಾಗಳ ವರೆಗೆ ಇಂಡಿಯಾ ಸ್ವೀಟ್ ಹೌಸ್ ಎಲ್ಲ ತರಹದ ಸಿಹಿ ತಿಂಡಿಗಳನ್ನು ಗ್ರಾಹಕರಿಗೆ ನೀಡುವ ಕೆಲಸ ಮಾಡಿದೆ. ಇನ್ನು ಘಮಘಮಿಸುವ ಲೈವ್ ಚಾಟ್ ಕೌಂಟರ್ ಅನ್ನು ಒಳಗೊಂಡಿದೆ. ಸ್ಟಫ್ಡ್ ಚಿಲ್ಲಿ ಬಜ್ಜಿ, ಆಲೂ ಮತ್ತು ಈರುಳ್ಳಿ ಸಮೋಸಾ ಮತ್ತು ತುಪ್ಪದ ಜಲೇಬಿ ಸೇರಿದಂತೆ ಹಲವಾರು ತಿಂಡಿಗಳು ಲಭ್ಯ ಇವೆ ಎಂದರು.

ಸ್ವೀಟ್ ಹೌಸ್‌ನ ಸಹ-ಸಂಸ್ಥಾಪಕ ಶ್ವೇತಾ ರಾಜಶೇಖರ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಾಶ ದೀಪವು ನೀನು - ಎಲ್ಲಾ ತಾರೆಗಳ ದಶಕಗಳ ಧನಿ ಎಸ್.ಜಾನಕಿ
20 ಭಾಷೆಗಳಲ್ಲಿ ಭರ್ಜರಿ 48000 ಹಾಡು ಹಾಡಿದ ಸಾಧಕಿ