ದೊಡ್ಡಬಳ್ಳಾಪುರ: ಇಲ್ಲಿಗೆ ಸಮೀಪದ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಒನ್ ವರ್ಲ್ಡ್ ಫ್ಯಾಮಿಲಿ ಕಪ್-2025 ಕ್ರಿಕೆಟ್ ಪಂದ್ಯ ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಡಿಯಾ ಒನ್ ವರ್ಲ್ಡ್- ಶ್ರೀಲಂಕಾ ಒನ್ ಫ್ಯಾಮಿಲಿ ವಿರುದ್ಧ 20 ಓವರ್ ಪಂದ್ಯ ಇದಾಗಿದ್ದು, ಎರಡೂ ದೇಶಗಳು ಮಾಜಿ ಆಟಗಾರರನ್ನು ಪರಸ್ಪರ ಕಣಕ್ಕಿಳಿಸುತ್ತಿವೆ. ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಈ ಪಂದ್ಯವನ್ನು ಆಯೋಜಿಸಿದ್ದು, ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗಾಗಿ ಸೌಹಾರ್ದ ಪಂದ್ಯ ಆಯೋಜಿಸಲಾಗಿದೆ.ಆಟದ ಲೈವ್ ಸ್ಟ್ರೀಮ್ ವೀಕ್ಷಿಸಲು ಅವರು ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಯೂಟ್ಯೂಬ್ ಚಾನೆಲ್ ವೀಕ್ಷಿಸಬಹುದು. ಸ್ಪರ್ಧೆಯು 2024ರಿಂದ ರೂಪುಗೊಂಡಿದ್ದು, ಸತ್ಯಸಾಯಿ ಗ್ರಾಮದಲ್ಲಿ ನಡೆದಿತ್ತು. ವಿವಿಧ ರಾಷ್ಟ್ರಗಳ ಆಟಗಾರರನ್ನು ಒಟ್ಟುಗೂಡಿಸಿ ಭಾರತೀಯ ನೀತಿ, ವಸುಧೈವ ಕುಟುಂಬ, ''''''''ಒಂದು ಜಗತ್ತು ಒಂದು ಕುಟುಂಬ " ಪರಿಕಲ್ಪನೆಯನ್ನು ಇದು ಎತ್ತಿ ತೋರಿಸುತ್ತದೆ.
ಕಳೆದ ವರ್ಷದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ಮಾಂಟಿ ಪನೇಸರ್, ಡ್ಯಾನಿ ಮಾರಿಸನ್, ಅಲೋಕ್ ಕಪಾಲಿ, ಜೇಸನ್ ಕ್ರೆಜಾ, ಮುತ್ತಯ್ಯ ಮುರಳೀಧರನ್ ಮತ್ತು ಮಖಾಯಾ ಎನ್ಟಿನಿ ಸೇರಿದಂತೆ ಏಳು ವಿವಿಧ ದೇಶಗಳ ಆಟಗಾರರು ಪಾಲ್ಗೊಂಡಿದ್ದರು. ಈ ವರ್ಷ, ಇರ್ಫಾನ್ ಪಠಾಣ್ ಮತ್ತು ಸ್ಟುವರ್ಟ್ ಬಿನ್ನಿ ಅವರಂತಹವರು ಆತಿಥೇಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸಾರ್ವಕಾಲಿಕ ಅಗ್ರಗಣ್ಯ ಟೆಸ್ಟ್ ವಿಕೆಟ್ ಟೇಕರ್, ಮುತ್ತಯ್ಯ ಮುರಳೀಧರನ್ ಶ್ರೀಲಂಕಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.ಬಾಕ್ಸ್...........
ಒಂದು ವಿಶ್ವ ಒಂದು ಕುಟುಂಬ ಕಪ್ 2025:ಇಂಡಿಯಾ ಒನ್ ವರ್ಲ್ಡ್: ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ನಮನ್ ಓಜಾ, ಸುಬ್ರಹ್ಮಣ್ಯಂ ಬದ್ರಿನಾಥ್, ಅಶೋಕ್ ದಿಂಡಾ, ಪಿಯೂಷ್ ಚಾವ್ಲಾ, ಅಭಿಮನ್ಯು ಮಿಥುನ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಪಾರ್ಥಿವ್ ಪಟೇಲ್, ಸುಜಿತ್ ಸೋಮಸುಂದರ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ದೊಡ್ಡ ಗಣೇಶ್.
ಶ್ರೀಲಂಕಾ ಒನ್ ಫ್ಯಾಮಿಲಿ: ಅರವಿಂದ ಡಿ ಸಿಲ್ವಾ, ಮರ್ವನ್ ಅಟಪಟ್ಟು, ಚಮಿಂದ ವಾಸ್, ಉಪುಲ್ ತರಂಗ, ತರಂಗ ಪರಣವಿತಾನ, ಮಿಲಿಂದ ಸಿರಿವರ್ಧನ, ಅಸೆಲಾ ಗುಣರತ್ನೆ, ನುವಾನ್ ಜೋಯ್ಸಾ, ಮುತ್ತಯ್ಯ ಮುರಳೀಧರನ್, ತಿಲನ್ ತುಷಾರ, ರವೀಂದ್ರ ಪುಷ್ಪಕುಮಾರ, ಅಜಂತಾ ಮೆಂಡಿಸ್, ರೊಮೇಶ್ ಕಲುವಿತರಣ.ಫೋಟೋ-
7ಕೆಡಿಬಿಪಿ3- ಮುದ್ದೇನಹಳ್ಳಿಯಲ್ಲಿ ನಡೆವ ಒನ್ ವರ್ಲ್ಡ್ ಫ್ಯಾಮಿಲಿ ಕಪ್-2025 ಪಂದ್ಯದ ಟ್ರೋಫಿಯನ್ನು ಸುನಿಲ್ ಗವಾಸ್ಕರ್ ಅನಾವರಣಗೊಳಿಸಿದರು.