ಭಾರತದ ಸಂವಿಧಾನವನ್ನು ವಿಶ್ವವೇ ಮೆಚ್ಚಿದೆ: ರಾಜೇಂದ್ರ

KannadaprabhaNewsNetwork |  
Published : Feb 12, 2024, 01:38 AM IST
ಮಧುಗಿರಿಯ ಪಾವಗಡ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥವನ್ನು  ಶಾಲಾ ಮಕ್ಕಳು,ಅಧಿಕಾರಿಗಳು ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಎಂಎಲ್‌ಸಿ ಆರ್‌.ರಾಜೇಂದ್ರ ಅದ್ಧೂರಿಯಾಗಿ  ಸ್ವಾಗತಿಸಿದರು.ನಂತರ ಅಂಬೇಡ್ಕರ್‌ ಪುತ್ಥಳಿಗೆ ಮಾಲಾಪ್ರಣೆ ಮಾಡುವ ಮೂಲಕ ಜಾಗೃತಿ ಜಾಥಾ ರಥಕ್ಕೆ ಚಾಲನೆ ನೀಡಿದರು.  | Kannada Prabha

ಸಾರಾಂಶ

ಸಂವಿಧಾನವನ್ನು ಪ್ರತಿ ಮನೆ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಸಂಘಟಕರ ಕಾರ್ಯಪ್ರವೃತ್ತರಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ಕರೆಯಿತ್ತರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಭಾರತದ ಸಂವಿಧಾನ ಎಲ್ಲರ ಮನ ಮುಟ್ಟುವ ಹಾಗೇ ಚಿಂತನೆ ನಡಸಬೇಕು. ಆ ನಿಟ್ಟಿನಲ್ಲಿ ಮಕ್ಕಳು ಪಠ್ಯದಲ್ಲಿ ಅದನ್ನು ಓದುವ ಹಾಗೇ ಶಿಕ್ಷಣ ರೂಪಿತವಾಗಲಿ, ಸಂವಿಧಾನವನ್ನು ಪ್ರತಿ ಮನೆ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಸಂಘಟಕರ ಕಾರ್ಯಪ್ರವೃತ್ತರಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ಕರೆಯಿತ್ತರು.

ಭಾನುವಾರ ಮಧುಗಿರಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ಆಯೋಜಿಸಿದ್ದು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಜಾನಪದ ಕಲಾ ತಂಡಗಳೊಂದಿಗೆ, ಪಾವಗಡ ವೃತ್ತದಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ನೃತ್ಯದ ಮೂಲಕ ಜಾಗೃತಿ ಜಾಥಾ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದದರು. ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾತಿ, ಮತ, ಪಂಥ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸುವಂತೆ ನಿಗಾ ವಹಿಸಬೇಕು. ಭಾರತದ ಸಂವಿಧಾನವನ್ನು ರಚಿಸುವಾಗ ಹತ್ತಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಮಾನವ ಕುಲಕ್ಕೆ ಒಳಿತಾಗುವ ಅಂಶಗಳನ್ನು ಸ್ವೀಕರಿಸಿ, ಅಗತ್ಯವಾದ ಮಾರ್ಪಡುಗಳನ್ನು ಮಾಡಿ ಬರೆಯಲಾಗಿದೆ. ಇದನ್ನು ವಿಶ್ವವೇ ಮೆಚ್ಚಿ ಮನ್ನಿಸಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ತೋರಿದ ದಾರಿಯಲ್ಲಿ ನಡೆಯುವುದರಿಂದ ನಮ್ಮ ಏಳಿಗೆ ಮತ್ತು ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಕೆ.ಎನ್‌ ರಾಜಣ್ಣ ಅವರು ಪುತ್ಥಳಿ ಮಾಡುವಾಗ ಎಷ್ಟೇ ತೊಂದರೆಗಳು ಬಂದರೂ ಅದನ್ನು ಫೇಸ್‌ ಮಾಡಿ ಪುತ್ಥಳಿ ಮಾಡಿದರು. ಇಂತಹ ಜನಪರ ಕೆಲಸ ಮಾಡಲು ಕೆ.ಎನ್. ರಾಜಣ್ಣನವರಿಂದ ಮಾತ್ರ ಸಾಧ್ಯ, ಮಕ್ಕಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಜಾಗೃತಿ ಮೂಡಿಸಿ ಎಂದು ಬಿಇಓಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಶಿವಪ್ಪ ಮಾತನಾಡಿ, ಇಡೀ ತಾಲೂಕಿನಲ್ಲಿ 6 ದಿನಗಳ ಕಾಲ ಜಾಗೃತಿ ರಥ ಸಂಚರಿಸಲಿದ್ದು, ಇದು ಐತಿಹಾಸಿಕ ಕಾರ್ಯಕ್ರಮವಾಗಲಿ, ತಂತಮ್ಮ ಗ್ರಾಮಗಳಿಗೆ ಬರುವ ರಥವನ್ನು ಜನತೆ ಸಡಗರ ಸಂಭ್ರಮದಿಂದ ಸ್ವಾಗತಿಸಬೇಕು. ಸಂವಿಧಾನದ ಉಳಿವು ಮತ್ತು ಪುನರ್‌ ನೆನಪು ಮಾಡಿಕೊಳ್ಳುವುದಕ್ಕಾಗಿ ಈ ಜಾಥಾ ಅಂಬೇಡ್ಕರ್‌ ಚಿಂತನೆಗಳು, ಆಶಯಗಳನ್ನು ಕಾನೂನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಎಲ್ಲರೂ ಪಡೆದುಕೊಳ್ಳಬೇಕು. ಜನರು ವೈಚಾರಿಕತೆ ಬೆಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಸಿಗ್ಬತ್‌ವುಲ್ಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ರೇಷ್ಮೇ ಇಲಾಖೆ ಸಹಾಯ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ, ಇಒ ಲಕ್ಷ್ಮಣ್‌, ಎಡಿಎ ಮಧುಸೂದನ್‌, ದಲಿತ ಮುಖಂಡರಾದ ದೊಡ್ಡೇರಿ ಕಣಿಮಯ್ಯ, ನರಸಿಂಹಮೂರ್ತಿ, ಮಂಜು, ಚಿಕ್ಕಮ್ಮ, ರಂಗಸ್ವಾಮಿ, ಪ್ರಾಂಶುಪಾಲ ರಂಗಪ್ಪ ಸೇರಿದಂತೆ ದಲಿತ ಮುಖಂಡರು, ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಸಂಚರಿಸಿ ಪುರವರ ಹೋಬಳಿಗೆ ತೆರಳಿತು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು