ಭಾರತೀಯ ಪರಂಪರೆ ಜಗತ್ತಿಗೆ ಮಾದರಿ: ಅಭಿನವ ಸಂಗನಬಸವ ಶ್ರೀ

KannadaprabhaNewsNetwork |  
Published : Jan 31, 2024, 02:16 AM IST
೩೦ಬಿಎಸ್ವಿ೦೨- ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಜರುಗುತ್ತಿರುವ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಸೋಮವಾರ ಸಂಜೆ ಹಂತಿ ಹೊಡೆಯುವ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ನಮ್ಮ ಭಾರತೀಯ ಪರಂಪರೆ ಜಗತ್ತಿಗೆ ಮಾದರಿಯಾಗಿದೆ ಎಂದು ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಸೋಮವಾರ ಹಂತಿ ಹೊಡೆಯವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇಂದಿನ ಯುವಜನಾಂಗಕ್ಕೆ ಹಂತಿ ಹೊಡೆಯುವುದನ್ನು ಮಾದರಿಯಾಗಿ ತೋರಿಸಿದ್ದು ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಭಾರತೀಯ ಪರಂಪರೆ ಜಗತ್ತಿಗೆ ಮಾದರಿಯಾಗಿದೆ. ಇಡೀ ಜಗತ್ತಿಗೆ ಅನ್ನ ನೀಡುವ, ದೇಶದ ಬೆನ್ನೆಲುಬಾಗಿರುವ ರೈತ ಬಾಂಧವರನ್ನು ಪ್ರತಿಯೊಬ್ಬರೂ ಮರೆಯದೇ ಸ್ಮರಿಸಬೇಕು. ಇಂದು ಗೋವುಗಳನ್ನು, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಯಾವ ಮನೆಯಲ್ಲಿ ಗೋವುಗಳು, ಎತ್ತುಗಳು ಇರುತ್ತವೆ. ಆ ಮನೆ ಸುಂದರವಾಗಿ ಕಾಣುತ್ತದೆ. ಇಂದಿನ ಯುವಜನಾಂಗಕ್ಕೆ ಹಂತಿ ಪದ, ಹಂತಿ ಹೊಡೆಯುವುದು ಎಂಬುವುದು ಗೊತ್ತಿಲ್ಲ. ಯುವಜನಾಂಗ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಚಂದ್ರಶೇಖರಗೌಡ ಪಾಟೀಲ, ಮಹಾಂತಪ್ಪಗೌಡ ಗುಜಗೊಂಡ, ನಿಂಗನಗೌಡ ಪಾಟೀಲ, ರೇವಣಸಿದ್ದಪ್ಪ ತಪಶೆಟ್ಟಿ, ಬಸು ಹಿಟ್ನಳ್ಲಿ, ರಮೇಶ ಔರಸಂಗ, ಮುದುಕಪ್ಪ ಮಣ್ಣೂರ, ಬಾಬು ಘೋರ್ಪಡೆ, ಬಾಬು ಹುಲಗಬಾಳ, ರಾಮು ಬಿರಾದಾರ, ಮಲ್ಲಿಕಾರ್ಜುನ ಕಬ್ಬಿನ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!