---ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೆಆರ್ ಎಸ್ ರಸ್ತೆಯಲ್ಲಿರುವ ಐಸಿಎಸ್‌ಐ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2030ರ ವೇಳೆಗೆ ದೇಶಕ್ಕೆ 20 ಸಾವಿರ ಕಂಪನಿ ಕಾರ್ಯದರ್ಶಿಗಳ ಅವಶ್ಯಕತೆಯಿದೆ. ಹೀಗಾಗಿ, ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಕಂಪನಿ ಕಾರ್ಯದರ್ಶಿಗಳ ಕಾಯ್ದೆ–1980ರ ಅಡಿಯಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಕೇಂದ್ರ ಸರ್ಕಾರದ ಕಾರ್ಪೋರೆಟ್‌ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.ಮೈಸೂರು ಶಾಖೆ ಅಧ್ಯಕ್ಷ ಸಿ.ಎಸ್. ಕೃಷ್ಣೇಗೌಡ ಮಾತನಾಡಿ, ಮೈಸೂರಿನಲ್ಲಿ ಈವರೆಗೂ 96 ಮಂದಿ ಎರಡು ವರ್ಷದ ಅವಧಿಯ ಕೋರ್ಸ್ ಪೂರ್ಣಗೊಳಿಸಿ, ಉನ್ನತ ಉದ್ಯೋಗ ಪಡೆದಿದ್ದಾರೆ. ಈ ಕೋರ್ಸಿಗೆ ಯಾವುದೇ ವಯೋಮಿತಿ ಇಲ್ಲ. ಹಳೇ ಮೈಸೂರು ಭಾಗದ 1982 ವಿದ್ಯಾರ್ಥಿಗಳು ಕೋರ್ಸ್ ತೆಗೆದುಕೊಂಡಿದ್ದಾರೆ ಎಂದರು.
ಉಪಾಧ್ಯಕ್ಷ ಪವನ್ ಜಿ. ಚಂದಕ್, ಎಂ.ಜಿ. ಅರುಣ್ ಕುಮಾರ್, ನಾಗೇಂದ್ರ ಡಿ. ರಾವ್, ಸಿ. ದ್ವಾರಕನಾಥ್ ಇದ್ದರು.