ಕನ್ನಡಪ್ರಭ ವಾರ್ತೆ ಕೋಲಾರಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿರುವ ಸಿಸ್ಟೋಬಾಲ್ ಕ್ರೀಡೆಯಲ್ಲಿ ಕೋಲಾರ ಜಿಲ್ಲೆ ಮೂಲದ ವಿ.ಎನ್.ಗ್ರೀಷ್ಮಾ ಭಾರತ ತಂಡವನ್ನು ಪ್ರತಿನಿಧಿಸಿರುವ ಸಾಧಕಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಸಿಸ್ಟೋಬಾಲ್ ಸೌತ್ ಏಷಿಯಾ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಗಿಟ್ಟಿಸಿಕೊಂಡ ಭಾರತ ದೇಶವನ್ನು ಗ್ರೀಷ್ಮಾ ಪ್ರತಿನಿಧಿಸಿ ಅತ್ಯುತ್ತಮ ಶೂಟರ್ ಆಗಿ ಗಮನ ಸೆಳೆದಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಂಗೇನಹಳ್ಳಿಯ ನಾಗರಾಜು ಹಾಗೂ ಸಂತೇಹಳ್ಳಿಯ ಮಂಜುಳಾ ದಂಪತಿಗಳ ಹಿರಿಯ ಪುತ್ರಿ ಗ್ರೀಷ್ಮಾ. ಓಟದ ಸ್ಪರ್ಧೆ, ಬಾಸ್ಕೆಟ್‌ಬಾಲ್, ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳು, ಚಿತ್ರಕಲೆ, ಫ್ಯಾಷನ್ ಡಿಸೈನ್ ಇತ್ಯಾದಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಿದೆ. ಅಥ್ಲೆಟಿಕ್ಸ್ ಹಾಗೂ ಬಾಸ್ಕೆಟ್‌ಬಾಲ್ ಕ್ರೀಡೆಗಳಲ್ಲಿ ಅಂತರ ಕಾಲೇಜು, ಅಂತರ ವಿವಿ, ರಾಜ್ಯ, ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಾಲ್ಕೈದು ಬಾರಿ ಭಾಗವಹಿಸಿ ಪ್ರಶಸ್ತಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಗ್ರೀಷ್ಮಾ, ಐಸಿಎಸ್‌ಸಿ ಹತ್ತನೇ ತರಗತಿಯಲ್ಲಿ ಶೇ.೯೭ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಐಎಸಿಯಲ್ಲಿ ಶೇ.೯೬ ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು.ಸಿಸ್ಟೋಬಾಲ್ ಪರಿಚಯ:
ವಿಶ್ವಕಪ್ ಭಾರತಕ್ಕೆ ಗೆದ್ದು ತರುವ ಕನಸು: ಪ್ರಸ್ತುತ ಸೌತ್ ಏಷ್ಯಾಟೂರ್ನಿಯಲ್ಲಿ ರನ್ನರ್ ಆಪ್ ಆಗಿ ಬಂದಿರುವ ಗ್ರೀಷ್ಮಾಗೆ ಮುಂದಿನ ವರ್ಷ ಜರುಗಲಿರುವ ಸಿಸ್ಟೋಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ೩೨೦ ಗ್ರಾಮ್‌ಗಳ ಬಾಲ್, ಬ್ಯಾಸ್ಕೆಟ್‌ಬಾಲ್ ಮಾದರಿ ಮೈದಾನ, ೧೧ ಅಡಿಗಳ ಶೂಟರ್ ಕಂಬ, ತಲಾ ೨೦ ನಿಮಿಷಗಳ ಎರಡು ಅವಯ ಆಟಕ್ಕೆ ಸಾಕಷ್ಟು ದೈಹಿಕ ಸಾಮರ್ಥ್ಯದ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಭಾಗವಹಿಸಿರುವ ವಿವಿಧ ಟೂರ್ನಿಗಳ ಅನುಭವದ ಆಧಾರದ ಮೇಲೆ ಗ್ರೀಷ್ಮಾ ಮತ್ತವರ ತಂಡ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದು, ಮುಂದಿನ ವಿಶ್ವಕಪ್ ಭಾರತಕ್ಕೆ ಗೆದ್ದು ತರುವ ಕನಸು ಹೊಂದಿದ್ದಾರೆ. ಭಾರತದಲ್ಲಿ ಸಿಸ್ಟೋಬಾಲ್ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿದೆ. ಶ್ರೀಲಂಕಾ ಈ ಕ್ರೀಡೆಗೆ ಮಾನ್ಯತೆ ನೀಡಿದ್ದು, ಸೌತ್ ಏಷಿಯಾ ಕಪ್ ಗೆದ್ದ ತಂಡದ ಎಲ್ಲಾ ಸದಸ್ಯರಿಗೂ ಸರ್ಕಾರಿ ಕೆಲಸ ನೀಡಿ ಗೌರವಿಸುತ್ತಿದೆ. ಭಾರತ ಸರ್ಕಾರವು ಸಿಸ್ಟೋಬಾಲ್ ಕ್ರೀಡೆಗೆ ಮಾನ್ಯತೆ ನೀಡಿ ಪ್ರತಿ ಶಾಲೆಯಲ್ಲಿಯೂ ಆಟವಾಡಲು ಅವಕಾಶ ಕಲ್ಪಿಸಿ ಅತ್ಯುತ್ತಮ ಆಟಗಾರರು ಹೊರಬರಲು ಸಹಕರಿಸಬೇಕು. ಸಾಧಕಿ ಆಟಗಾರರಿಗೆ ಸರ್ಕಾರ ಮನ್ನಣೆಯನ್ನು ನೀಡಿದರೆ ಸಿಸ್ಟೋಬಾಲ್ ಭಾರತದಲ್ಲಿಯೂ ಜನಪ್ರಿಯ ಕ್ರೀಡೆಯಾಗಿ ಹೊರಹೊಮ್ಮಲು ವಿಫುಲ ಅವಕಾಶಗಳಿವೆ. ವಿ.ಎನ್.ಗ್ರೀಷ್ಮಾ, ಸಿಸ್ಟೋಬಾಲ್ ಭಾರತ ತಂಡದ ಆಟಗಾರ್ತಿ.ಗ್ರೀಷ್ಮಾಗೆ ದೇಶ ಸೇವೆ ಮಾಡುವ ಆಸೆ: ಗ್ರೀಷ್ಮಾಗೆ ಪುನೀತ್ ರಾಜ್‌ಕುಮಾರ್ ನೆನಪಿನ ಸದ್ಭಾವನಾ ಪ್ರಶಸ್ತಿ, ಸಿರಿಗನ್ನಡ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯಕ್ಕೆ ವ್ಯಾಸಂಗ ಮಾಡುತ್ತಿರುವ ಏರೋನಾಟಿಕ್ಸ್ ಇಂಜಿನಿಯರಿಂಗ್ ಕ್ಷೇತ್ರದ ಮೂಲಕ ದೇಶ ಸೇವೆ ಮಾಡುವ ಆಸೆ ಇಟ್ಟುಕೊಂಡಿದ್ದಾರೆ.