ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭಾರತದ ಮೊದಲ ಫ್ಲೈಬ್ರರಿ ಉದ್ಘಾಟನೆ

KannadaprabhaNewsNetwork |  
Published : Jan 06, 2026, 03:00 AM IST
Fly Library

ಸಾರಾಂಶ

ರೋಟರಿ ಕ್ಲಬ್ ಆಪ್‌ ಸೆಂಟ್ರಲ್, ಏರ್‌ಪೋರ್ಟ್ ಅಥಾರಿಟಿ ಆಫ್‌ ಇಂಡಿಯಾ ಹಾಗೂ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಆಶ್ರಯದಲ್ಲಿ ಭಾರತದ ಮೊದಲ ''''''''ಫ್ಲೈಬ್ರರಿ'''''''' (ಗ್ರಂಥಾಲಯ)ವನ್ನು ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು.

ಹುಬ್ಬಳ್ಳಿ:  ರೋಟರಿ ಕ್ಲಬ್ ಆಪ್‌ ಸೆಂಟ್ರಲ್, ಏರ್‌ಪೋರ್ಟ್ ಅಥಾರಿಟಿ ಆಫ್‌ ಇಂಡಿಯಾ ಹಾಗೂ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಆಶ್ರಯದಲ್ಲಿ ಭಾರತದ ಮೊದಲ ''''''''ಫ್ಲೈಬ್ರರಿ'''''''' (ಗ್ರಂಥಾಲಯ)ವನ್ನು ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ ಗ್ರಂಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಲವು ಗಂಟೆ ಕಳೆಯಬೇಕಾಗುತ್ತದೆ. ಹೀಗಾಗಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ ಎಂದರು.

ಗ್ರಂಥಾಲಯವು ಎಲ್ಲ ಪ್ರಯಾಣಿಕರಿಗೂ ತಲುಪಲಿ

ರೋಟರಿ ಕ್ಲಬ್‌ನ ಡಿಸ್ಟ್ರಿಕ್ ಗವರ್ನರ್ ಅರುಣ ಭಂಡಾರೆ ಮಾತನಾಡಿ, ರೋಟರಿಯಿಂದ ಹಲವು ವಿಧಾಯಕ ಕಾರ್ಯಗಳು ನಡೆಯುತ್ತವೆ. ಇಲ್ಲಿನ ಗ್ರಂಥಾಲಯವು ಎಲ್ಲ ಪ್ರಯಾಣಿಕರಿಗೂ ತಲುಪಲಿ ಎಂದು ಆಶಿಸಿದರು.

ಇನ್ನಷ್ಟು ಸೌಲಭ್ಯ ಕಲ್ಪಿಸಲಾಗುವುದು

ವಿಮಾನ ನಿಲ್ದಾಣ ಡೈರೆಕ್ಟರ್ ರೂಪೇಶ ಕುಮಾರ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಫ್ಲೈಬ್ರರಿ ಆಗಲು ರೋಟರಿ ಕ್ಲಬ್ ಆಫ್‌ ಸೆಂಟ್ರಲ್ ಹಾಗೂ ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ ಮುಂದೆ ಬಂದಿತು. ಗ್ರಂಥಾಲಯದ ಆಲೋಚನೆ ಹಾಗೂ ಯೋಜನೆ ಭಾರತದಲ್ಲಿಯೇ ಮೊದಲನೆಯದು. ಕೆಲವು ತಾಂತ್ರಿಕ ಅಡಚಣೆಯಿಂದಾಗಿ ತಡವಾಯಿತು. ಮುಂದಿನ ದಿನಗಳಲ್ಲಿ ಹೊಸ ಕಟ್ಟಡದಲ್ಲಿ ಗ್ರಂಥಾಲಯಕ್ಕೆ ಹೆಚ್ಚಿನ ಜಾಗ ನೀಡಲಾಗುವುದು. ಇನ್ನಷ್ಟು ಸೌಲಭ್ಯ ಕಲ್ಪಿಸಲಾಗುವುದು ಎಂದರು.

ರೋಟರಿ ಮಾಜಿ ಅಧ್ಯಕ್ಷೆ ರೀಟಾ ಹಂಡಾ ಹಾಗೂ ಡಾ. ವೀರೇಶ ಹಂಡಿಗಿ ಮಾತನಾಡಿದರು. ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದಿಂದ 100 ಪುಸ್ತಕಗಳನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ, ರೋಟರಿಯಿಂದ 100 ಪುಸ್ತಕಗಳನ್ನು ರೋಟರಿ ಸದಸ್ಯರು ಹಸ್ತಾಂತರಿಸಿದರು.

ವಿಮಾನ ನಿಲ್ದಾಣ ಅಧಿಕಾರಿ ಬಿ.ವಿ. ಪ್ರತಾಪ, ಮಾಧವಿ ಭಂಡಾರಿ, ದೀಪಕ ಪಾಟೀಲ, ನಾಗರಾಜ ಶೆಟ್ಟಿ, ವಾಸೂಕಿ ಸಂಜಿ, ರಾಜೇಶ್ವರಿ ವಾಸುಕಿ, ಸಂಜನಾ ಮಹೇಶ್ವರಿ, ಆಶಾ ಸಾಲಿಯಾನ ಇದ್ದರು. ರೋಟರಿ ಸೆಂಟ್ರಲ್ ಅಧ್ಯಕ್ಷೆ ಅಂಜನಾ ಬಸನಗೌಡರ ಸ್ವಾಗತಿಸಿದರು. ಸುನಿತಾ ಕಲ್ಲೊಳಿ ನಿರೂಪಿಸಿದರು. ಶ್ರಾವಣಿ ಪವಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ